alex Certify ಸೊಳ್ಳೆ ಕಡಿತದಿಂದ ಸುರಕ್ಷಿತವಾಗಿರಲು ಬಯಸುವಿರಾ…..? ಹಾಗಿದ್ದರೆ ಈ ಬಣ್ಣದ ಉಡುಪನ್ನು ಧರಿಸದಿರಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೊಳ್ಳೆ ಕಡಿತದಿಂದ ಸುರಕ್ಷಿತವಾಗಿರಲು ಬಯಸುವಿರಾ…..? ಹಾಗಿದ್ದರೆ ಈ ಬಣ್ಣದ ಉಡುಪನ್ನು ಧರಿಸದಿರಿ…..!

ಸಂಜೆ ಆರು ಗಂಟೆಯಾದ್ರೆ ಸಾಕು ಸೊಳ್ಳೆಗಳ ಕಾಟ ಶುರುವಾಗುತ್ತದೆ. ಸೊಳ್ಳೆ ಕಚ್ಚಿದ್ರೆ ಬಹುಶಃ ಸಿಹಿ-ರುಚಿಯ ರಕ್ತವಿದೆ ಎಂದು ಹೇಳುವ ಮೂಲಕ ಕೆಲವರು ಆಗಾಗ್ಗೆ ತಮಾಷೆ ಮಾಡುವುದು ಮಾಮೂಲಿ. ನೀವೇನಾದ್ರೂ ಸೊಳ್ಳೆ ಕಡಿತದಿಂದ ಸುರಕ್ಷಿತವಾಗಿರಲೂ ಬಯಸುತ್ತಿದ್ದೀರಾ..? ಹಾಗಿದ್ದರೆ ಮುಂದೆ ಓದಿ..

ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ನೇತೃತ್ವದ ಹೊಸ ಸಂಶೋಧನೆಯ ಪ್ರಕಾರ, ಸಾಮಾನ್ಯ ಸೊಳ್ಳೆ ಪ್ರಭೇದಗಳು ನಾವು ಹೊರಹಾಕುವ ಟೆಲ್ಟೇಲ್ ಅನಿಲವನ್ನು ಪತ್ತೆಹಚ್ಚಿದ ನಂತರ ಕೆಂಪು, ಕಿತ್ತಳೆ, ಕಪ್ಪು ಮತ್ತು ಸಯಾನ್ ಸೇರಿದಂತೆ ನಿರ್ದಿಷ್ಟ ಬಣ್ಣಗಳ ಕಡೆಗೆ ಹಾರುತ್ತದೆ ಎಂದು ಹೇಳಿದೆ. ಸೊಳ್ಳೆಗಳು ಹಸಿರು, ನೇರಳೆ, ನೀಲಿ ಮತ್ತು ಬಿಳಿಯಂತಹ ಇತರ ಬಣ್ಣಗಳನ್ನು ನಿರ್ಲಕ್ಷಿಸುತ್ತವೆ.

ನಿಮ್ಮ ಚರ್ಮದ ಬಣ್ಣಕ್ಕೆ ಸೊಳ್ಳೆಗಳು ಆಕರ್ಷಿತವಾಗಿದೆಯೇ ಅಥವಾ ಇಲ್ಲವೇ ಎಂಬುದಕ್ಕೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ವಾಸನೆ, ಉಷ್ಣತೆ ಮುಂತಾದವಿರುವಲ್ಲಿ ಸೊಳ್ಳೆಗಳು ತಮ್ಮ ಆಹಾರವನ್ನು ಕಂಡುಕೊಳ್ಳುತ್ತವೆ ಎಂದು ಅಧ್ಯಯನ ತಿಳಿಸಿದೆ.

ಸೊಳ್ಳೆಗಳು ಕಚ್ಚಲು ಹೋಸ್ಟ್‌ನಂತೆ ಸಮೀಪದಲ್ಲಿರುವುದನ್ನು ಪ್ರತ್ಯೇಕಿಸಲು ಸಹಾಯ ಮಾಡಲು ವಾಸನೆಯನ್ನು ಬಳಸುತ್ತವೆ. ನಮ್ಮ ಉಸಿರಾಟದಿಂದ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆಗೊಂಡಾಗ ಅದರ ವಾಸನೆಯನ್ನು ಗ್ರಹಿಸುವುದಲ್ಲದೆ, ನಿರ್ದಿಷ್ಟ ಬಣ್ಣಗಳು ಮತ್ತು ಇತರ ದೃಶ್ಯ ಮಾದರಿಗಳನ್ನು ಸ್ಕ್ಯಾನ್ ಮಾಡಲು ಕಣ್ಣುಗಳನ್ನು ಉತ್ತೇಜಿಸುತ್ತದೆ.

ಆರಂಭದಲ್ಲಿ, ಮೂರು ಪ್ರಮುಖ ಸೂಚನೆಗಳು ಸೊಳ್ಳೆಗಳನ್ನು ಆಕರ್ಷಿಸುತ್ತವೆ. ಉಸಿರು, ಬೆವರು ಹಾಗೂ ಚರ್ಮದ ತಾಪಮಾನವೇ ಸೊಳ್ಳೆಯ ಆಕರ್ಷಣೆಯಾಗಿದೆ.

ಇನ್ನು ಕೆಂಪು ಬಣ್ಣವು ನಿಮ್ಮ ಬಟ್ಟೆಗಳ ಮೇಲೆ ಮಾತ್ರ ಕಂಡುಬರುವುದಿಲ್ಲ. ಆದರೆ, ಪ್ರತಿಯೊಬ್ಬರ ಚರ್ಮದಲ್ಲಿಯೂ ಕಂಡುಬರುತ್ತದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ನೀವು ಕಪ್ಪು, ಬಿಳಿ, ಕಂದು, ಅಥವಾ ಯಾವುದೇ ಬಣ್ಣ ಅಥವಾ ಚರ್ಮದ ಛಾಯೆಯನ್ನು ಹೊಂದಿದ್ದೀರಾ ಅದು ಇಲ್ಲಿ ಅಪ್ರಸ್ತುವೆನಿಸುತ್ತದೆ.

ನಮ್ಮ ಚರ್ಮದಲ್ಲಿ ಆ ಆಕರ್ಷಕ ಬಣ್ಣಗಳನ್ನು ಫಿಲ್ಟರ್ ಮಾಡುವುದು ಅಥವಾ ಆ ಬಣ್ಣಗಳನ್ನು ತಪ್ಪಿಸುವ ಬಟ್ಟೆಗಳನ್ನು ಧರಿಸುವುದು,  ಸೊಳ್ಳೆ ಕಚ್ಚುವಿಕೆಯನ್ನು ತಡೆಯಲು ಮತ್ತೊಂದು ಮಾರ್ಗವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ತಂಡವು ಹಳದಿ ಜ್ವರ ಸೊಳ್ಳೆಗಳಾದ ಏಡಿಸ್ ಈಜಿಪ್ಟಿಯ ನಡವಳಿಕೆಯನ್ನು ವಿವಿಧ ರೀತಿಯ ದೃಶ್ಯ ಮತ್ತು ಪರಿಮಳ ಸೂಚನೆಗಳೊಂದಿಗೆ ಪ್ರಸ್ತುತಪಡಿಸಿದ್ದಾರೆ. ಎಲ್ಲಾ ಸೊಳ್ಳೆ ಪ್ರಭೇದಗಳಂತೆ, ಹೆಣ್ಣು ಸೊಳ್ಳೆಗಳು ಮಾತ್ರ ರಕ್ತವನ್ನು ಕುಡಿಯುತ್ತವೆ ಮತ್ತು ಈಜಿಪ್ಟಿಯ ಕಚ್ಚುವಿಕೆಯು ಡೆಂಗ್ಯೂ, ಹಳದಿ ಜ್ವರ, ಚಿಕೂನ್‌ಗುನ್ಯಾ ಮತ್ತು ಝಿಕಾವನ್ನು ಹರಡುತ್ತದೆ.

ಸಂಶೋಧಕರು ಚಿಕಣಿ ಪರೀಕ್ಷಾ ಕೋಣೆಗಳಲ್ಲಿ ಪ್ರತ್ಯೇಕ ಸೊಳ್ಳೆಗಳನ್ನು ಪತ್ತೆಹಚ್ಚಿದ್ದಾರೆ. ಅದರಲ್ಲಿ ಅವರು ನಿರ್ದಿಷ್ಟ ವಾಸನೆಯನ್ನು ಸಿಂಪಡಿಸಿದರ ಜೊತೆಗೆ ವಿವಿಧ ರೀತಿಯ ದೃಶ್ಯ ಮಾದರಿಗಳನ್ನು ಪ್ರಸ್ತುತಪಡಿಸಿದ್ದಾರೆ. ಯಾವುದೇ ವಾಸನೆಯ ಪ್ರಚೋದನೆಯಿಲ್ಲದೆ,  ಸೊಳ್ಳೆಗಳು ಬಣ್ಣವನ್ನು ಲೆಕ್ಕಿಸದೆ ಕೋಣೆಯ ಕೆಳಭಾಗದಲ್ಲಿಟ್ಟಿದ್ದ ಚುಕ್ಕೆಗಳನ್ನು ನಿರ್ಲಕ್ಷಿಸುತ್ತವೆ.

ಕೊಠಡಿಯೊಳಗೆ ಕಾರ್ಬೈನ್ ಡೈ ಆಕ್ಸೈಡ್ ಸಿಂಪಡಣೆ ನಂತರ ಸೊಳ್ಳೆಗಳು ಹಸಿರು, ನೀಲಿ ಅಥವಾ ನೇರಳೆ ಬಣ್ಣದಲ್ಲಿದ್ದರೆ ಡಾಟ್ ಅನ್ನು ನಿರ್ಲಕ್ಷಿಸಿವೆ. ಆದರೆ ಚುಕ್ಕೆ ಕೆಂಪು, ಕಿತ್ತಳೆ, ಕಪ್ಪು ಅಥವಾ ಬಣ್ಣದಲ್ಲಿದ್ದಾಗ ಸೊಳ್ಳೆಗಳು ಅದರ ಕಡೆಗೆ ಹಾರಿವೆ.

ಹಿಂದಿನ ಸಂಶೋಧನೆಯು, ಕಾರ್ಬನ್ ಡೈ ಆಕ್ಸೈಡ್ ವಾಸನೆಯು ಹೆಣ್ಣು ಸೊಳ್ಳೆಗಳ ಚಟುವಟಿಕೆಯ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ತೋರಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...