alex Certify BIG NEWS: ಷೇರು ಮಾರುಕಟ್ಟೆಯಲ್ಲಿಂದು ನಿಂತ ಗೂಳಿ ಓಟ; ನಿಫ್ಟಿ, ಸೆನ್ಸೆಕ್ಸ್​​ನಲ್ಲಿ ಭಾರೀ ಕುಸಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಷೇರು ಮಾರುಕಟ್ಟೆಯಲ್ಲಿಂದು ನಿಂತ ಗೂಳಿ ಓಟ; ನಿಫ್ಟಿ, ಸೆನ್ಸೆಕ್ಸ್​​ನಲ್ಲಿ ಭಾರೀ ಕುಸಿತ

ಈ ದಿನವು ಷೇರು ಮಾರುಕಟ್ಟೆಯ ಪಾಲಿಗೆ ಬ್ಲ್ಯಾಕ್​ ಮಂಡೇ ಎಂದು ಸಾಬೀತಾಗಿದೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್​ ಹಾಗೂ ನಿಫ್ಟಿ ಭಾರೀ ಕುಸಿತವನ್ನು ಕಂಡಿದೆ. ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​​ನ ಸೆನ್ಸೆಕ್ಸ್​​ 1023. 63 ಪಾಯಿಂಟ್​​ನಷ್ಟು ಅಥವಾ 1.75 ಪ್ರತಿಶತ ಕುಸಿತ ಕಂಡು 57,621.19ಕ್ಕೆ ಕೊನೆಗೊಂಡಿದೆ. ಇದೇ ರೀತಿ ನಿಫ್ಟಿಯು 302.70 ಪಾಯಿಂಟ್​ ಅಂದರೆ 1.73 ಪ್ರತಿಶತದಷ್ಟು ಕುಸಿತದೊಂದಿದೆ 17,213.60ಕ್ಕೆ ಕೊನೆಗೊಂಡಿದೆ.

30 ಸೆನ್ಸೆಕ್ಸ್​ ಷೇರುಗಳ ಪೈಕಿ ಕೇವಲ 5 ಷೇರುಗಳು ಮಾತ್ರ ಲಾಭದಲ್ಲಿ ಕೊನೆಗೊಂಡಿವೆ. 25 ಷೇರುಗಳು ಕುಸಿತದೊಂದಿಗೆ ಕೊನೆಗೊಂಡಿವೆ. ಹೆಚ್​ಡಿಎಫ್​ಸಿ ಬ್ಯಾಂಕುಗಳ ಷೇರು ಇಂದು ಬಿಎಸ್​ಇನಲ್ಲಿ ಶೇಕಡಾ 3.65 ಪ್ರತಿಶತದಷ್ಟು ಕುಸಿತ ಕಂಡಿದೆ. ಇದಾದ ಬಳಿಕ ಬಜಾಜ್​ ಫೈನಾನ್ಸ್​​ನ ಷೇರುಗಳು ಶೇಕಡಾ 3 ಪ್ರತಿಶತದಷ್ಟು ಕುಸಿತ ಕಂಡಿದೆ. ಇನ್ನೊಂದೆಡೆ ನಿಫ್ಟಿ ನೆಕ್ಸಟ್​ 50, ನಿಫ್ಟಿ ಮಿಡ್​ಕ್ಯಾಪ್​, ನಿಫ್ಟಿ ಬ್ಯಾಂಕ್​ ಹಾಗೂ ನಿಫ್ಟಿ ಹಣಕಾಸು ಸೂಚ್ಯಂಕಗಳು ಸಹ ಕುಸಿದಿವೆ.

ಕಳೆದ ಮೂರು ವ್ಯಾವಹಾರಿಕ ದಿನಗಳಲ್ಲಿ ಉಂಟಾದ ಕುಸಿತದಿಂದಾಗಿ ಹೂಡಿಕೆದಾರರು ಸುಮಾರು 6.7 ಲಕ್ಷ ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಬಿಎಸ್​ಇ ಲಿಸ್ಟ್​ ಮಾಡಿರುವ ಎಲ್ಲಾ ಷೇರುಗಳ ಮಾರುಕಟ್ಟೆ ಮೌಲ್ಯವು ಫೆಬ್ರವರಿ 2ರಂದು 270 ಕೋಟಿ ರೂಪಾಯಿಗಳಿಂದ ಇಂದು 264 ಕೋಟಿ ರೂಪಾಯಿಗಳಿಗೆ ಕುಸಿತ ಕಂಡಿದೆ. ಕೇವಲ ಇವತ್ತಿನ ಬಗ್ಗೆ ಮಾತ್ರ ಹೇಳುವುದಾದರೆ ಹೂಡಿಕೆದಾರರ 3 ಲಕ್ಷ ಕೋಟಿ ರೂಪಾಯಿ ಇಂದು ನಷ್ಟವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...