ಮಾರ್ಚ್ 31, 2022ಕ್ಕು ಮುನ್ನ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಶೇರುಗಳು ಮಾರುಕಟ್ಟೆಯಲ್ಲಿ ಐಪಿಓ ಅಡಿ ಖರೀದಿಗೆ ಲಭ್ಯವಿರುವುದಾಗಿ ಕೇಂದ್ರ ವಿತ್ತ ಸಚಿವಾಲಯದ ರಾಜ್ಯ ಸಚಿವ ಭಾಗ್ವತ್ ಕರದ್ ತಿಳಿಸಿದ್ದಾರೆ.
ಉದ್ದೇಶಿತ ಯೋಜನೆಯಡಿ, ಪಾಲಿಸಿದಾರರಿಗೆ ಎಲ್‌ಐಸಿ ಐಪಿಓನ ಶೇರುಗಳನ್ನು ಮೀಸಲಿಡಲಾಗುವುದು. ಈ ರೀತಿಯ ಸಾರ್ವಜನಿಕ ಆಫರಿಂಗ್‌ನಲ್ಲಿ ಭಾಗಿಯಾಗಲು ನೀವು ನಿಗಮದಲ್ಲಿರುವ ನಿಮ್ಮ ದಾಖಲೆಗಳಲ್ಲಿ ಆಧಾರ್ ಹಾಗೂ ಪಾನ್ ವಿವರಗಳು ಇರುವುದನ್ನು ಖಾತ್ರಿ ಮಾಡಿಕೊಳ್ಳಬೇಕು. ಜೊತೆಗೆ ನಿಮ್ಮ ಹೆಸರಿನಲ್ಲಿ ಡಿಮ್ಯಾಟ್ ಖಾತೆ ಇದ್ದಲ್ಲಿ ಮಾತ್ರವೇ ದೇಶದಲ್ಲಿ ಲಭ್ಯವಿರುವ ಯಾವುದೇ ರೀತಿಯ ಸಾರ್ವಜನಿಕ ಆಫರಿಂಗ್‌ಗೆ ನೀವು ಕೈ ಹಾಕಬಹುದಾಗಿದೆ ಎಂದು ಎಲ್‌ಐಸಿ ತನ್ನ ಸಾರ್ವಜನಿಕ ಪ್ರಕಟಣೆ ಮೂಲಕ ತಿಳಿಸಿದೆ.
BIG NEWS: ಹಿಜಾಬ್ ಹಿಂದೆ ರಾಜಕೀಯ ನಾಯಕರ ಕೈವಾಡ; ಶಾಲೆಗಳಲ್ಲಿ ಸಮವಸ್ತ್ರಕ್ಕೆ ಮಾತ್ರ ಅವಕಾಶ ಎಂದ ಶಿಕ್ಷಣ ಸಚಿವ
ಎಲ್‌ಐಸಿ ಪಾಲಿಸಿಗಳೊಂದಿಗೆ ನಿಮ್ಮ ಪಾನ್ ಲಿಂಕಿಂಗ್ ಮಾಡುವುದು ಒಂದು ಸರಳ ಪ್ರಕ್ರಿಯೆಯಾಗಿದೆ. ಕೆಳಕಂಡ ಸರಳ ಕ್ರಮಗಳ ಮೂಲಕ ಈ ಕೆಲಸ ಮಾಡಬಹುದಾಗಿದೆ.
ಹಂತ 1: ಎಲ್‌ಐಸಿಯ ಅಧಿಕೃತ ವೆಬ್‌ಸೈಟ್ licindia.in ಗೆ ಲಾಗಿನ್ ಆಗಬೇಕು
ಹಂತ 2: ಈಗ ಮುಖಪುಟದಲ್ಲಿ ಇರುವ ‘Online PAN Registration’ ಆಯ್ಕೆಯನ್ನು ಆರಿಸಬೇಕು.
ಹಂತ 3: ಬಳಕೆದಾರರು ಈಗ ಪಾನ್ ಕಾರ್ಡ್ ಸೇರಿದಂತೆ ಅಗತ್ಯವಿರುವ ದಾಖಲೆಗಳನ್ನು ಕೈಯಲ್ಲಿ ಸಿದ್ಧವಿಟ್ಟುಕೊಳ್ಳಬೇಕು.
ಹಂತ 4: ಬಳಕೆದಾರರು ಈಗ ‘Proceed’ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ
ಹಂತ 5: ಬಳಕೆದಾರರು ತಮ್ಮ ಇ-ಮೇಲ್ ಐಡಿ, ಪಾನ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಾಲಿಸಿ ಸಂಖ್ಯೆಯನ್ನು ನಮೂದಿಸಬೇಕು ಮತ್ತು ಕ್ಯಾಪ್ಚಾವನ್ನು ನಮೂದಿಸಿದ ನಂತರ ‘Get OTP’ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
ಹಂತ 6: ಬಳಕೆದಾರರು ನಂತರ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಬೇಕಾಗುತ್ತದೆ
ಹಂತ 7: ಅರ್ಜಿ ಸಲ್ಲಿಸಿದ ನಂತರ, ನೋಂದಣಿ ವಿನಂತಿ ಯಶಸ್ವಿಯಾಗಿದೆಯೆಂದು ಸಂದೇಶವೊಂದನ್ನು ತೋರಲಾಗುತ್ತದೆ.
ಸೆಪ್ಟೆಂಬರ್ 30, 2021ಕ್ಕೆ ಅಂತ್ಯಗೊಳ್ಳಲಿದ್ದ ಪಾನ್-ಆಧಾರ್ ಲಿಂಕ್ ಮಾಡುವ ಗಡುವನ್ನು ಮಾರ್ಚ್ 31, 2022 ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ವಿವರಗಳು ಮತ್ತು ಪ್ರಶ್ನೆಗಳಿದ್ದಲ್ಲಿ, ಜೀವ ವಿಮಾ ನಿಗಮದ ಅಧಿಕೃತ ವೆಬ್‌ಸೈಟ್ licindia.in ಗೆ ಲಾಗಿನ್ ಆಗಿ ಮಾಹಿತಿ ಪಡೆಯಬಹುದಾಗಿದೆ.