alex Certify ಗಮನಿಸಿ: 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರೂ ಪಡೆಯಬಹುದು ʼಪಾನ್ ಕಾರ್ಡ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರೂ ಪಡೆಯಬಹುದು ʼಪಾನ್ ಕಾರ್ಡ್ʼ

ಅಗತ್ಯ ದಾಖಲೆಗಳಲ್ಲಿ ಪಾನ್ ಕಾರ್ಡ್ ಕೂಡ ಒಂದು. ಪರ್ಮನೆಂಟ್ ಅಕೌಂಟ್ ನಂಬರನ್ನು ಹಣಕಾಸಿನ ವ್ಯವಹಾರದಲ್ಲಿ ಅಗತ್ಯವಾಗಿ ಬಳಕೆ ಮಾಡಲಾಗುತ್ತದೆ. ಸಾಮಾನ್ಯವಾಗಿ 18 ವರ್ಷದ ನಂತ್ರ ಪಾನ್ ಕಾರ್ಡ್ ಮಾಡಿಸಲಾಗುತ್ತದೆ. ಆದ್ರೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೂ ಪಾನ್ ಕಾರ್ಡ್ ಮಾಡಿಸಬಹುದು. ಅದಕ್ಕೆ ಕೆಲ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಪಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಬಯಸಿದರೆ, ನೇರವಾಗಿ ಪಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಮಕ್ಕಳ ಪರವಾಗಿ ಪೋಷಕರು ಅರ್ಜಿ ಸಲ್ಲಿಸಬೇಕಾಗುತ್ತದೆ. ಪಾನ್ ಕಾರ್ಡ್ ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ, ಮೊದಲು ಎನ್ ಎಸ್ ಡಿ ಎಲ್ ನ ವೆಬ್‌ಸೈಟ್‌ಗೆ ಹೋಗಬೇಕು. ಅಲ್ಲಿ ಅರ್ಜಿಯನ್ನು ಭರ್ತಿ ಮಾಡಬೇಕು.

ಅಪ್ರಾಪ್ತರ ದಾಖಲೆ, ಪೋಷಕರ ಫೋಟೋ ಸೇರಿದಂತೆ ಹಲವು ಪ್ರಮುಖ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಹಾಗೆಯೇ ಪೋಷಕರ ಸಹಿ ಅಪ್ಲೋಡ್ ಮಾಡಬೇಕಾಗುತ್ತದೆ. ಇದಕ್ಕೆ 107 ರೂಪಾಯಿ ಶುಲ್ಕ ಪಾವತಿ ಮಾಡಬೇಕು. ಶುಲ್ಕ ಪಾವತಿ ನಂತ್ರ ಅರ್ಜಿ ಸಲ್ಲಿಸಬೇಕು. ರಶೀದಿ ನಿಮಗೆ ಸಿಗುತ್ತದೆ. ಅರ್ಜಿ ನಂತ್ರ ನಿಮಗೆ ಮೇಲ್ ನಲ್ಲಿ ಮಾಹಿತಿ ಬರುತ್ತದೆ. ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಪಾನ್ ಕಾರ್ಡ್ ನಿಮ್ಮ ಕೈ ಸೇರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...