alex Certify ಲತಾ ಮಂಗೇಶ್ಕರ್ ಅವರ ಐಕಾನಿಕ್ ಹಾಡುಗಳನ್ನು ನೆನಪಿಸಿಕೊಳ್ಳುತ್ತಾ ಕಣ್ಣೀರಿಟ್ಟ ಅಭಿಮಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲತಾ ಮಂಗೇಶ್ಕರ್ ಅವರ ಐಕಾನಿಕ್ ಹಾಡುಗಳನ್ನು ನೆನಪಿಸಿಕೊಳ್ಳುತ್ತಾ ಕಣ್ಣೀರಿಟ್ಟ ಅಭಿಮಾನಿಗಳು

ಲತಾ ಮಂಗೇಶ್ಕರ್ ಅವರು ಫೆಬ್ರವರಿ 6 ರಂದು ಕೊನೆಯುಸಿರೆಳೆದಿದ್ದು, ಅವರಿಗೆ 92 ವರ್ಷ ವಯಸ್ಸಾಗಿತ್ತು. ಈ ದಿಗ್ಗಜ ಗಾಯಕಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹೃತ್ಪೂರ್ವಕ ಶ್ರದ್ಧಾಂಜಲಿಗಳ ಮಹಾಪೂರವೇ ಹರಿದುಬರುತ್ತಿದೆ. ಹಲವಾರು ದಶಕಗಳವರೆಗೆ ತಮ್ಮ ಛಾಪನ್ನು ಮೂಡಿಸಿದ್ದ ಲತಾ ಮಂಗೇಶ್ಕರ್, ಲಗ್ ಜಾ ಗಲೇ, ಅಜೀಬ್ ದಸ್ತಾನ್ ಹೈ ಯೇ ಮತ್ತು ಏಕ್ ಪ್ಯಾರ್ ಕಾ ನಗ್ಮಾ ಹೈ ಮುಂತಾದ ಅಸಂಖ್ಯಾತ ಹಾಡುಗಳಿಗೆ ಕಂಠದಾನ ನೀಡಿದ್ದಾರೆ.

ಏ ಮೇರೆ ವತನ್ ಕೆ ಲೋಗೋನ್ ಎಂಬುದು ಲತಾ ಮಂಗೇಶ್ಕರ್ ಅವರು ಹಾಡಿರುವ ಬಹಳ ಪ್ರಸಿದ್ಧಿ ಪಡೆದ ಗೀತೆಯಾಗಿದೆ. ಭಾರತದ ನೈಟಿಂಗೇಲ್ ಎಂದು ಪ್ರಸಿದ್ಧವಾಗಿರುವ ಗಾಯಕಿ ಹಾಡುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಗಳಲ್ಲಿ ಪೋಸ್ಟ್ ಮಾಡುವ ಮೂಲಕ ಹೃತ್ಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಮೇಜರ್ ಸುರೇಂದ್ರ ಪೂನಿಯಾ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇವರು ಹಾಡಿರುವ ಯೋಧರ ಹಾಡು, ಪ್ರತಿಯೊಬ್ಬ ಸೈನಿಕನ ಮೆಚ್ಚಿನ ಹಾಡು. ಈ ಹಾಡು ಇಡೀ ಭಾರತವನ್ನು ಒಂದುಗೂಡಿಸಿತು ಎಂದು ಟ್ವೀಟ್ ಮಾಡಿದ್ದಾರೆ.

ಭಾರತೀಯ ಆಡಳಿತ ಸೇವೆಗಳ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಲತಾ ಮಂಗೇಶ್ಕರ್ ಅವರು ಏ ಮೇರೆ ವತನ್ ಕೆ ಲೋಗೋನ್ ಹಾಡಿರುವ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಭಾರತದ ನೈಟಿಂಗೇಲ್ ಲತಾಮಂಗೇಶ್ಕರ್ ಅವರು ತಮ್ಮ ಮಾಂತ್ರಿಕ ಧ್ವನಿಯ ಮೂಲಕ ಹಲವಾರು ಮಧುರ ನೆನಪುಗಳು ಬಿಟ್ಟು ಹೋಗಿದ್ದಾರೆ. ವಿಶೇಷವಾಗಿ ಏ ಮೇರೆ ವತನ್ ಕೆ ಲೋಗೋನ್ ಹಾಡು ಪ್ರತಿಯೊಬ್ಬ ಭಾರತೀಯನ ಹೃದಯ ಗೆದ್ದಿದೆ ಎಂದು ಬರೆದಿದ್ದಾರೆ.

ಜನವರಿ 27, 1963 ರಂದು ದೆಹಲಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಲತಾ ಮಂಗೇಶ್ಕರ್ ಅವರು ಏ ಮೇರೆ ವತನ್ ಕೆ ಲೋಗೋನ್ ಗೀತೆಯನ್ನು ಹಾಡಿದ್ದರು. ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ಈ ಹಾಡು ಕೇಳಿ ಕಣ್ಣೀರಿಟ್ಟಿದ್ದರು.

ಜನವರಿ 8 ರಂದು ಅನಾರೋಗ್ಯದಿಂದ ಬಳಲುತ್ತಿದ್ದ ಲತಾ ಮಂಗೇಶ್ಕರ್ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದೆರಡು ವಾರಗಳಿಂದ ಆಕೆ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದರು. ದುರದೃಷ್ಟವಶಾತ್, ಅವರು ಫೆಬ್ರವರಿ 6 ರಂದು ನಿಧನರಾಗಿದ್ದಾರೆ.

— Major Surendra Poonia ( Modi Ka Parivar ) (@MajorPoonia) February 6, 2022

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...