ಮೀರತ್: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹೊತ್ತಲ್ಲೇ ಬಿಜೆಪಿ ನಾಯಕಿ ಮತ್ತು ಕುಸ್ತಿಪಟು ಬಬಿತಾ ಫೋಗಟ್ ಅವರ ಕಾರ್ ಮೇಲೆ ದಾಳಿ ನಡೆಸಲಾಗಿದೆ. ಮೀರತ್ನಲ್ಲಿ ಚುನಾವಣಾ ಪ್ರಚಾರದ ವೇಳೆ ಅವರ ಕಾರ್ ಮೇಲೆ ಕೆಲವು ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಮೀರತ್ನ ಸಿವಾಲ್ಖಾಸ್ ವಿಧಾನಸಭಾ ಕ್ಷೇತ್ರದ ದಬಥುವ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಿಜೆಪಿ ಅಭ್ಯರ್ಥಿ ಮಣಿಂದರ್ ಪಾಲ್ ಸಿಂಗ್ ಪರವಾಗಿ ಬಬಿತಾ ಫೋಗಟ್ ಮತ ಕೇಳುತ್ತಿದ್ದರು, ಆರ್ಎಲ್ಡಿ ಬೆಂಬಲಿಗರು ಕೋಲು ಬಡಿಗೆಗಳೊಂದಿಗೆ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಇದಾದ ಬಳಿಕ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದಾಗ, ಆರ್ಎಲ್ಡಿ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ.
ಈ ಘಟನೆಯಲ್ಲಿ ಹಲವು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಅದೇ ಸಮಯದಲ್ಲಿ, ಈ ಸಮಯದಲ್ಲಿ ಆರ್ಎಲ್ಡಿ ಬೆಂಬಲಿಗರು ಮಹಿಳೆಯರನ್ನು ನಿಂದಿಸಿದ್ದಾರೆ. ನನ್ನ ಕಾರಿನ ಮೇಲೆ ದಾಳಿ ಮಾಡಿದ್ದಾರೆ ಎಂದು ಬಬಿತಾ ಫೋಗಟ್ ಆರೋಪಿಸಿದ್ದಾರೆ. ಇದರಿಂದ ಕಾರ್ ಗೆ ಹಾನಿಯಾಗಿದೆ.
ಗುಂಡಿನ ದಾಳಿ, ಬಿಜೆಪಿ ಆರೋಪ ನಿರಾಕರಿಸಿದ ಪೊಲೀಸರು
ಈ ಘಟನೆಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಘಟನೆ ಕುರಿತು ಸರ್ಧಾನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಸಿದ್ಧತೆ ನಡೆಸಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಬಿಜೆಪಿ ಕಿಸಾನ್ ಮೋರ್ಚಾದ ಮಂಡಲದ ಅಧ್ಯಕ್ಷ ಸತೇಂದ್ರ ಚೌಧರಿ ಅವರನ್ನು ಚಿಕಿತ್ಸೆಗಾಗಿ ಸಿ.ಹೆಚ್.ಸಿ. ದಾಖಲಿಸಿದರು. ಆದರೆ, ಗುಂಡು ಹಾರಿಸಿದ ಬಗ್ಗೆ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಕೇಶವ್ ಕುಮಾರ್ ನಿರಾಕರಿಸಿದ್ದಾರೆ.
ಎರಡು ದಿನಗಳ ಹಿಂದೆ ಉತ್ತರ ಪ್ರದೇಶ ಚುನಾವಣೆ ಪ್ರಚಾರಕ್ಕೆ ತೆರಳಿದ್ದ ಎಐಎಂಐಎಂ ಪಾರ್ಟಿ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ಕಾರ್ ಮೇಲೆ ದಾಳಿ ನಡೆಸಲಾಗಿತ್ತು.