ಕಾಂಪ್ಯಾಕ್ಟ್ ಕ್ಯಾಮೆರಾಗಳಾದ ಗೋಪ್ರೋ ಕ್ಯಾಮೆರಾಗಳನ್ನ ಪ್ರಯಾಣ ಮತ್ತು ಸಾಹಸ ವಿಡಿಯೋಗಳನ್ನು ಚಿತ್ರಿಸಲು ಡಿಸೈನ್ ಮಾಡಲಾಗಿದೆ. ಈ ವಿಶೇಷ ಕ್ಯಾಮರಾದ ಸಹಾಯದಿಂದ, ಬಳಕೆದಾರರು ಸ್ಕೂಬಾ-ಡೈವಿಂಗ್, ಸ್ಕೈ-ಡೈವಿಂಗ್, ಬಂಗೀ ಜಂಪಿಂಗ್, ಸೇರಿದಂತೆ ಸಾಮಾನ್ಯ ಚಟುವಟಿಕೆಗಳನ್ನು ಚಿತ್ರೀಕರಿಸುತ್ತಾರೆ.
ಆದ್ರೆ ಇತ್ತೀಚಿಗೆ ಗೋಪ್ರೋ ಕ್ಯಾಮೆರಾಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗ್ತಿದೆ. ಸ್ಕ್ರಿಪ್ಟೆಡ್ ಅಲ್ಲದ ಮನುಷ್ಯರ ಸಹಾಯವಿಲ್ಲದೆ ಚಿತ್ರಿಸಿರುವುದೇ ಈ ವಿಡಿಯೋ ನೆಟ್ಟಿಗರಲ್ಲಿ ಫೇಮಸ್ ಆಗ್ತಿರೋದಕ್ಕೆ ಕಾರಣ. ನ್ಯೂಜಿಲ್ಯಾಂಡ್ನಲ್ಲಿನ ಪಾದಯಾತ್ರಿಕರ ಗುಂಪಿನಿಂದ ಪಕ್ಷಿಯೊಂದು ಕ್ಯಾಮರಾವನ್ನು ಕದ್ದಿದೆ. ಈ ಸಂದರ್ಭದಲ್ಲಿ ಕ್ಯಾಮೆರ ರೆಕಾರ್ಡಿಂಗ್ ಚಾಲ್ತಿಯಲ್ಲಿದ್ದರಿಂದ, ಕ್ಯಾಮೆರಾ ಕದ್ದ ಗಿಳಿ ಎಸ್ಕೇಪ್ ಆದ ದೃಶ್ಯವು ಸೆರೆಯಾಗಿದೆ. ಹೇಗೊ ಮಾಡಿ ಗಿಳಿಯಿಂದ ಕ್ಯಾಮೆರಾ ವಾಪಸ್ ಪಡೆದಿರುವ ಪಾದಯಾತ್ರಿಕರು, ಈ ವಿಡಿಯೋವನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ದಕ್ಷಿಣ ದ್ವೀಪದ ಫಿಯೋರ್ಡ್ಲ್ಯಾಂಡ್ ರಾಷ್ಟ್ರೀಯ ಉದ್ಯಾನವನದಲ್ಲಿ ಹೈಕಿಂಗ್ ಕೈಗೊಂಡಿದ್ದ ಕುಟುಂಬ ಈ ಅನಿರೀಕ್ಷಿತ ಪಕ್ಷಿನೋಟಕ್ಕೆ ಸಾಕ್ಷಿಯಾಗಿದೆ. ಕೆಪ್ಲರ್ ಟ್ರ್ಯಾಕ್ನ ಒಂದು ಭಾಗವನ್ನು ಅನ್ವೇಷಿಸುವುದನ್ನು ಮುಗಿಸುವಷ್ಟರಲ್ಲಿ ಗಿಳಿಯು ಕೆಳಗಿಳಿದು, ಅವರ ಗೋಪ್ರೊವನ್ನು ಕದ್ದು ಹಾರಿಹೋಯಿತು ಎಂದು ವರದಿಯಾಗಿದೆ.
ಸ್ಥಳೀಯ ಆಲ್ಪೈನ್ ಜಾತಿಯ ಗಿಳಿ ಕೀಯಾ, ತನ್ನ ಚೇಷ್ಟೆಯ ಸ್ವಭಾವಕ್ಕೆ ಹೆಸರುವಾಸಿಯಾಗಿದೆ. ಅಷ್ಟೇ ಅಲ್ಲಾ ಸ್ಪೈಗಳಂತೆ, ಅನುಮಾನಾಸ್ಪದ ಸಂದರ್ಶಕರಿಂದ ಪ್ಯಾಕ್ ಮಾಡಿದ ಪೆಟ್ಟಿಗೆಗಳು, ಚೀಲಗಳು ಮತ್ತು ಆಭರಣಗಳನ್ನು ಸ್ವೈಪ್ ಮಾಡಲು ಹೆಸರುವಾಸಿಯಾಗಿದೆ. ಈ ಸಂದರ್ಭದಲ್ಲಿ, ವರ್ಹೆಲ್ ಕುಟುಂಬದ ಗೋಪ್ರೋ ಗಿಳಿಯನ್ನ ಆಕರ್ಷಿಸಿದೆ. ಅವರು ವಾಸಿಸುತ್ತಿದ್ದ, ಗುಡಿಸಲಿನ ಹೊರಗೆ ಕುಳಿತಿದ್ದ ಪಕ್ಷಿಗಳ ಗುಂಪನ್ನು ಚಿತ್ರಿಸಲು ವರ್ಹೆಲ್ ಕುಟುಂಬದ ಸದಸ್ಯರು ಗೋಪ್ರೋ ಆನ್ ಮಾಡಿ ಅಲ್ಲೇ ಇಟ್ಟಿದ್ದರು ಈ ಸಂದರ್ಭದಲ್ಲಿ ಕಳ್ಳತನ ಸಂಭವಿಸಿದೆ.