alex Certify ಭಾರತೀಯ ರಸ್ತೆಯಲ್ಲಿ ಟೆಸ್ಲಾ ಟೆಸ್ಟ್ ಡ್ರೈವ್….! ಎಲೆಕ್ಟ್ರಿಕ್ ವಾಹನದ ಬಗ್ಗೆ ಸಂಪೂರ್ಣ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ರಸ್ತೆಯಲ್ಲಿ ಟೆಸ್ಲಾ ಟೆಸ್ಟ್ ಡ್ರೈವ್….! ಎಲೆಕ್ಟ್ರಿಕ್ ವಾಹನದ ಬಗ್ಗೆ ಸಂಪೂರ್ಣ ವಿವರ

ಅಮೆರಿಕದ ಎಲೆಕ್ಟ್ರಿಕ್ ವಾಹನ ಟೆಸ್ಲಾ ಪ್ರಸ್ತುತ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಜ್ಜಾಗುತ್ತಿದೆ. ಟೆಸ್ಲಾದ ಕೈಗೆಟುಕುವ ಮಾದರಿಗಳೆಂದು ಪ್ರಸ್ತುತಿ ಪಡೆದುಕೊಂಡಿರುವ, ಮಾಡೆಲ್ 3 ಅಥವಾ ಮಾಡೆಲ್ ವೈ ಮೂಲಕ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಇದಕ್ಕೆ ಪೂರಕವಾಗಿ, ಇತ್ತೀಚೆಗೆ ಭಾರತದ ರಸ್ತೆಯಲ್ಲಿ ಮಾಡೆಲ್ ವೈ ವಾಹನದ ಟೆಸ್ಟ್ ಡ್ರೈವ್ ನಡೆದಿದೆ.

ಅಷ್ಟಕ್ಕು ನಮ್ಮ ದೇಶದಲ್ಲಿ ಮಾಡೆಲ್ ವೈ ಅನ್ನು ಗುರುತಿಸಿರುವುದು ಇದೇ ಮೊದಲಲ್ಲ. ಈ ಫೋಟೋವನ್ನು ಟೆಸ್ಲಾ ಕ್ಲಬ್ ಇಂಡಿಯಾದ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಮಾಡೆಲ್ ವೈ ಅನ್ನು ಗುರುತಿಸಿದ ನಿತೇಶ್ ಬೋರನೆ ಎನ್ನುವವರು ಈ ಫೋಟೊವನ್ನು ತೆಗೆದಿದ್ದಾರೆ. ಮಾಡೆಲ್ ವೈ ಜೊತೆಗೆ, ಈ ಹಿಂದೆ ನಾವು ಭಾರತದಲ್ಲಿ ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಸೆಡಾನ್‌ನ ಹಲವಾರು ಸ್ಪೈ ಫೋಟೋಗಳನ್ನು ನೋಡಿದ್ದೇವೆ.

ಮಾಡೆಲ್ Y ಗೆ ಸಂಬಂಧಿಸಿದಂತೆ, ಇದು ಮಾಡೆಲ್ 3ಯಂತೆಯೇ ಇದೆ. ಜಾಗತಿಕವಾಗಿ ಟೆಸ್ಲಾ SUV ಅನ್ನು 5 ಮತ್ತು 7 ಸೀಟರ್ ಕಾನ್ಫಿಗರೇಶನ್‌ಗಳಲ್ಲಿ ನೀಡುತ್ತದೆ. ಟೆಸ್ಲಾ ಮಾಡೆಲ್ Y ಫ್ರಂಟ್ ವ್ಯೂ ಸೇರಿದಂತೆ, ಅಗಲವಾದ LED ಟೈಲ್‌ಲೈಟ್‌ಗಳು ಸೇರಿ ಮಾಡೆಲ್ 3ಯೊಂದಿಗೆ ಸಾಕಷ್ಟು ಸಾಮ್ಯತೆಗಳನ್ನು ಹಂಚಿಕೊಳ್ಳುತ್ತದೆ.

BIG NEWS: ಬೇರೆ ದೇಶಕ್ಕೆ ಹೋಗೆನಲು ಈ ದೇಶ ಏನು ನಿಮ್ಮ ತಾತಂದಾ….? ಜನಪ್ರತಿನಿಧಿಯಾಗಿ ಜವಾಬ್ದಾರಿಯುತ ಮಾತನಾಡಿ; ಪ್ರತಾಪ್ ಸಿಂಹಗೆ ತನ್ವೀರ್ ಸೇಠ್ ತಿರುಗೇಟು

ವಾಹನದ ಮುಂಭಾಗದಲ್ಲಿ, ನಾವು ಸ್ವೆಪ್ಟ್‌ಬ್ಯಾಕ್ ಹೆಡ್‌ಲ್ಯಾಂಪ್‌ಗಳೊಂದಿಗೆ ಸ್ಕಲ್ಪ್ಟೆಡ್ ಫೇಸ್ ಸ್ಟ್ರಕ್ಚರ್, ಅಗಲವಾದ ಸೆಂಟ್ರಲ್ ಏರ್‌ಡ್ಯಾಮ್ ಮತ್ತು ಪ್ರೊಫೈಲ್ ಸಿಲ್ವರ್ ಮಿಶ್ರಲೋಹದ ಚಕ್ರಗಳು ಸೇರಿದಂತೆ, ಹಿಂಭಾಗದಲ್ಲಿ ತೀಕ್ಷ್ಣವಾಗಿ ಕಾಣುವ ಬೂಟ್ ಮುಚ್ಚಳವು ಟೆಸ್ಲಾ Yಗೆ ಒಳ್ಳೆ ಲುಕ್ ನೀಡಿವೆ.

ಜಾಗತಿಕವಾಗಿ, ಟೆಸ್ಲಾ ಮಾಡೆಲ್ ವೈ ಅನ್ನು ಲಾಂಗ್ ರೇಂಜ್ AWD ಮತ್ತು Performance ಎಂಬ ಎರಡು ಆಯ್ಕೆಗಳಲ್ಲಿ ನೀಡಲಾಗುತ್ತದೆ. ಎರಡೂ ಮಾದರಿಗಳು ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ ಬರುತ್ತವೆ, ಪ್ರತಿ ಆಕ್ಸಲ್‌ಗೆ ಒಂದರಂತೆ, ಎಲೆಕ್ಟ್ರಿಕ್ ಆಲ್-ವೀಲ್ ಡ್ರೈವ್ (AWD) ಕಾರ್ಯವನ್ನು ನೀಡುತ್ತದೆ. ಲಾಂಗ್ ರೇಂಜ್ ರೂಪಾಂತರವು 505 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. 4.8 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ 0-97 ಕಿಮೀ ಸ್ಪ್ರಿಂಟ್ ಅನ್ನು ಮಾಡಬಹುದು. ಹೆಚ್ಚು ಶಕ್ತಿಯುತವಾದ Peroformence ರೂಪಾಂತರವು ಸುಮಾರು 3.5 ಸೆಕೆಂಡುಗಳಲ್ಲಿ ಅದೇ ಸ್ಪ್ರಿಂಟ್ ಅನ್ನು ಮಾಡುತ್ತದೆ ಆದರೆ 480 ಕಿಮೀ ನಷ್ಟು ಕಡಿಮೆ ವಿದ್ಯುತ್ ವ್ಯಾಪ್ತಿಯನ್ನು ನೀಡುತ್ತದೆ.

bki6tj8

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...