alex Certify BIG NEWS: ಕೃಷಿ ಸಹಕಾರ ಸಂಘಗಳ ಡಿಜಿಟಲೀಕರಣಕ್ಕೆ ಮುಂದಾದ ರಾಜ್ಯ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೃಷಿ ಸಹಕಾರ ಸಂಘಗಳ ಡಿಜಿಟಲೀಕರಣಕ್ಕೆ ಮುಂದಾದ ರಾಜ್ಯ ಸರ್ಕಾರ

ರೈತರ ಸಾಲ ವಿತರಣೆ ಹಾಗೂ ವಸೂಲಾತಿಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಪ್ರಾಥಮಿಕ ಕೃಷಿ ಸಹಕಾರ ಸಂಘಗಳನ್ನು ಡಿಜಿಟಲೀಕರಣ ಮಾಡಲು ಮುಂದಾಗಿದೆ. ಇದರ ಅನುಷ್ಠಾನ ಪ್ರಕ್ರಿಯೆಯು ಮಾರ್ಚ್​ ತಿಂಗಳಲ್ಲಿ ಆರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ ಕೆಲ ದಿನಗಳ ಹಿಂದಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆಯನ್ನೂ ನಡೆಸಲಾಗಿದೆ.

ಈ ಸಂಬಂಧ ಅವಶ್ಯವಿರುವ ಸಾಫ್ಟ್​​ವೇರ್​ಗಳ ಅಭಿವೃದ್ಧಿಗಾಗಿ ಕಂಪನಿಯನ್ನು ಅಂತಿಮಗೊಳಿಸುವಲ್ಲಿ ಸರ್ಕಾರವು ಮಗ್ನವಾಗಿದೆ. ಅಲ್ಲದೇ ಈ ಡಿಜಿಟಲೀಕರಣ ಈ ವರ್ಷದ ಒಳಗಾಗಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಸಹಕಾರ ಸಚಿವ ಎಸ್​.ಟಿ. ಸೋಮಶೇಖರ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದಕ್ಕಾಗಿ ರಾಜ್ಯ ಸರ್ಕಾರವು 50 ಕೋಟಿವರೆಗೆ ವ್ಯಯಿಸಬೇಕಿದ್ದು ಉಳಿದ ಮೊತ್ತವನ್ನು ಕೇಂದ್ರ, ಅಪೆಕ್ಸ್​ ಹಾಗೂ ಡಿಸಿಸಿ ಬ್ಯಾಂಕ್​ಗಳಿಂದ ಪಡೆಯಲು ತೀರ್ಮಾನಿಸಲಾಗಿದೆ.

ರಾಜ್ಯದಲ್ಲಿ ಸುಮಾರು 5,400 ಪಿಎಸಿಎಸ್‌ಗಳಿವೆ. ಇವುಗಳ ಡಿಜಿಟಲೀಕರಣವು ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಾಗಿದೆ. ಕೇಂದ್ರವು 60% ಪಾವತಿ ಮಾಡುತ್ತದೆ. ಉಳಿದ 40% ದಲ್ಲಿ ರಾಜ್ಯ ಸರ್ಕಾರವು 20% ಪಾವತಿ ಮಾಡುತ್ತದೆ, ಆದರೆ ಅಪೆಕ್ಸ್ ಬ್ಯಾಂಕ್ 10% ಮತ್ತು DCC ಬ್ಯಾಂಕ್​​ಗಳು ​​10% ಪಾವತಿಸುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...