2022 ರ ಮಾಡೆಲ್ ಖರೀದಿಗೆ ಈಗಾಗಲೆ ಬುಕ್ಕಿಂಗ್ ಮಾಡಿರುವವರಿಗೆ ಮಾತ್ರವೇ ಅನ್ವಯವಾಗುವಂತೆ ಸ್ಕೋಡಾ ಕಂಪನಿಯು ತನ್ನ ಹೊಸ ಮಾಡೆಲ್ ’ಕುಶಕ್’ ಎಸ್ಯುವಿ ಬೆಲೆಯಲ್ಲಿ 15 ಸಾವಿರ ರೂ. ವಿನಾಯಿತಿ ಘೋಷಿಸಿದೆ. ತಾವಾಗೇ ಮಡಚಿಕೊಳ್ಳುವ ಕನ್ನಡಿಗಳನ್ನು ಇನ್ಮುಂದೆ ನೀಡದಿರಲು ಕಂಪನಿ ನಿರ್ಧರಿಸಿದೆ. ಯಾಕೆಂದರೆ, ಕನ್ನಡಿ ಆಟೋಮ್ಯಾಟಿಕ್ ಆಗಿ ಮಡಚಿಕೊಳ್ಳಲು ಅಗತ್ಯವಾದ ಎಲೆಕ್ಟ್ರಾನಿಕ್ ಚಿಪ್ನ ಕೊರತೆಯನ್ನು ಕಂಪನಿ ಎದುರಿಸುತ್ತಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೇ ಚಿಪ್ ಕೊರತೆ ಎದುರಾಗಿದೆ. ಇದನ್ನು ಕಂಪನಿ ಗಂಭೀರವಾಗಿ ಪರಿಗಣಿಸಿದ್ದು, ಅನಗತ್ಯವಾಗಿ ಗ್ರಾಹಕರಿಗೆ ಹೊರೆಯಾಗಿಸಲು ಬಯಸಲ್ಲ. ಆದಕಾರಣ, ಒಟ್ಟಾರೆ ಕಾರಿನ ಬೆಲೆಯಲ್ಲಿ ವಿನಾಯಿತಿ ನೀಡುತ್ತಿದ್ದೇವೆ ಎಂದು ಸ್ಕೋಡಾ ಇಂಡಿಯಾದ ಸೇವೆಗಳು ಮತ್ತು ಮಾರ್ಕೆಟಿಂಗ್ ವಿಭಾಗದ ನಿರ್ದೇಶಕ ಜ್ಯಾಕ್ ಹೊಲ್ಲಿಸ್ ತಿಳಿಸಿದ್ದಾರೆ.
ಯಾವಾಗಲೂ ಕೆಲಸ ಕೆಲಸ ಎನ್ನುವ ಅಪ್ಪನ ಮೇಲೆ ಅಳುತ್ತಲೇ ಪ್ರೀತಿ ತೋರಿದ ಪುಟ್ಟ ಪೋರಿ…! ಮುದ್ದಾದ ವಿಡಿಯೋ ವೈರಲ್
ಕೇವಲ ಹೈಎಂಡ್ (ಉನ್ನತ ಆವೃತ್ತಿಯ) ಮಾಡೆಲ್ಗಳಲ್ಲಿ ಮಾತ್ರವೇ ಮಿರರ್ ಆಟೋಫೋಲ್ಡಿಂಗ್ ಚಿಪ್ ಇರುವ ಸೌಲಭ್ಯವನ್ನು ಸ್ಕೋಡಾ ಕಂಪನಿ ಕೊಡುತ್ತಿತ್ತು. ಸದ್ಯ, ಅದು ಕುಶಕ್ನ ಎಲ್ಲ ಮಾದರಿಗಳಲ್ಲಿ ಸಿಗುವಂತಾಗಿತ್ತು. ಫೋಕ್ಸ್ವ್ಯಾಗನ್ ಕಂಪನಿ ಕೂಡ ತನ್ನ ಎಸ್ಯುವಿ ’ಟೈಗುನ್’ನಿಂದ ಮಿರರ್ ಆಟೋಫೋಲ್ಡಿಂಗ್ ಫೀಚರ್ ತೆಗೆದುಹಾಕಿದೆ. ಇದಕ್ಕೂ ಚಿಪ್ ಕೊರತೆಯೇ ಮುಖ್ಯ ಕಾರಣವಾಗಿದೆ. ಅಂದಹಾಗೇ, ಆಕ್ಸಿವ್, ಆಂಬಿಷನ್ ಮತ್ತು ಸ್ಟೈಲ್ ಎಂಬ ಮೂರು ಆವೃತ್ತಿಗಳಲ್ಲಿ ಸ್ಕೋಡಾ ಕುಶಕ್ ಲಭ್ಯವಿದೆ. ಇದರ ಬೆಲೆಯು 11 ಲಕ್ಷ ರೂ.ನಿಂದ 20 ಲಕ್ಷ ರೂ.ವರೆಗಿದೆ.