ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮೇಲೆ ಗುಂಡು ಹಾರಿಸಿದ ಆರೋಪಿಗಳ ವಿಚಾರಣೆಯಲ್ಲಿ ದೊಡ್ಡ ಮಾಹಿತಿ ಬಹಿರಂಗವಾಗಿದೆ. ಆರೋಪಿ ಸಚಿನ್, ಅಸಾದುದ್ದೀನ್ ಓವೈಸಿಯ ಪ್ರತಿಯೊಂದು ರಾಜಕೀಯ ಭಾಷಣವನ್ನು ಅನುಸರಿಸುತ್ತಿದ್ದ ಎಂದು ಯುಪಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಮಾಹಿತಿ ನೀಡಿದ್ದಾರೆ.
ಅಯೋಧ್ಯೆಯ ರಾಮ ಮಂದಿರದ ಕುರಿತು ಓವೈಸಿಯ ಕಾಮೆಂಟ್‌ಗಳಿಂದ ದಾಳಿಕೋರರು ಕೋಪಗೊಂಡಿದ್ದರು. ದಿನಗಟ್ಟಲೆ ಅವರನ್ನು ಹಿಂಬಾಲಿಸಿದ್ದರು. ಮೀರತ್‌ನಲ್ಲಿ ಅಸಾದುದ್ದೀನ್ ಓವೈಸಿ ಸಾರ್ವಜನಿಕ ಸಭೆ ನಡೆಸುತ್ತಿದ್ದಾಗ ಆರೋಪಿಗಳಿಬ್ಬರೂ ಅಲ್ಲಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಮತ್ತು ಆತನಿಂದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ ದಾಳಿಗೆ ಬಳಸಿದ ಆಯುಧ ಮತ್ತು ಆಲ್ಟೊ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
BIG NEWS: ಇದೊಂದು ಸೂಕ್ಷ್ಮ ವಿಚಾರ; ಹಿಜಾಬ್ ಬಗ್ಗೆ ಬಹಿರಂಗ ಚರ್ಚೆ ಬೇಡ ಎಂದ ಡಿ.ಕೆ.ಶಿವಕುಮಾರ್
ಸಾರ್ವಜನಿಕ ಸಭೆ ನಡೆಯುವ ಸ್ಥಳದ ಸುತ್ತಮುತ್ತಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಕೂಡ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ. ಆರೋಪಿಗಳು ಕಳೆದ ಹಲವು ದಿನಗಳಿಂದ ಅಸಾದುದ್ದೀನ್ ಓವೈಸಿಯ ಬೆನ್ನಟ್ಟಿದ್ದರು. ಆದರೆ ಅವರಿಗೆ ಸೂಕ್ತ ಅವಕಾಶ ಸಿಕ್ಕಿರಲಿಲ್ಲ ಎನ್ನಲಾಗಿದೆ.
ದಾಳಿಯ ಸಂಪೂರ್ಣ ಯೋಜನೆಯನ್ನು ಆರೋಪಿಯೇ ಸಿದ್ಧಪಡಿಸಿದ್ದ. ಇದು ಹಠಾತ್ ದಾಳಿಯಲ್ಲ. ಆರೋಪಿಗಳು ಮೊದಲು ಮೀರತ್‌ಗೆ ಹೋಗಿ ವಾಪಸಾಗುತ್ತಿದ್ದಾಗ ಟೋಲ್ ಗೇಟ್ ಬಳಿ ಕಾದು ಸಮಯ ಸಾಧಿಸಿ ಗುಂಡು ಹಾರಿಸಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.