alex Certify ಮಾನವ ಕಳ್ಳಸಾಗಣಿಕೆ ಪ್ರಕರಣ ಭೇದಿಸಿದ ದೆಹಲಿ ಪೊಲೀಸರು: ಇಬ್ಬರು ಸಂತ್ರಸ್ತೆಯರ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನವ ಕಳ್ಳಸಾಗಣಿಕೆ ಪ್ರಕರಣ ಭೇದಿಸಿದ ದೆಹಲಿ ಪೊಲೀಸರು: ಇಬ್ಬರು ಸಂತ್ರಸ್ತೆಯರ ರಕ್ಷಣೆ

ಮಾನವ ಕಳ್ಳಸಾಗಣಿಕೆ ಆರೋಪದ ಅಡಿಯಲ್ಲಿ ದೆಹಲಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಯಲ್ಲಿ ಗುಜರಾತ್​ನಿಂದ ಅಪಹರಣಕ್ಕೊಳಗಾದ ಓರ್ವ ಯುವತಿ ಹಾಗೂ ಬಾಲಕಿಯನ್ನು ರಕ್ಷಣೆ ಮಾಡಿರುವ ಪೊಲೀಸರು ಬಾಲಕಿಯರನ್ನು ಅಹಮದಾಬಾದ್​ ಪೊಲೀಸರಿಗೆ ಒಪ್ಪಿಸಿದ್ದಾರೆ.

ಗುರುವಾರದಂದು ಅಹಮದಾಬಾದ್​ ಪೊಲೀಸರಿಂದ ಕರೆ ಸ್ವೀಕರಿಸಿದ್ದ ದೆಹಲಿ ಪೊಲೀಸರು ಇಬ್ಬರು ಬಾಲಕಿಯರು ಗುಜರಾತ್​​ನಿಂದ ಅಪಹರಣಕ್ಕೊಳಗಾಗಿದ್ದು ಇವರನ್ನು ಅಪಹರಿಸಿದ ವ್ಯಕ್ತಿಯು ದ್ವಾರಕಾದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿಯನ್ನು ಪಡೆದಿದ್ದರು. ಈ ಸಂಬಂಧ ಅಹಮದಾಬಾದ್​ನ ವಾಟ್ವಾದಲ್ಲಿ ಪ್ರಕರಣ ದಾಖಲಾಗಿತ್ತು. ಕೂಡಲೇ ಈ ವಿಚಾರವನ್ನು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ರವಾನೆ ಮಾಡಲಾಗಿತ್ತು.

ಈ ಮಾಹಿತಿಯನ್ನು ಪಡೆದ ಬಳಿಕ ಅಲರ್ಟ್ ಆದ ದೆಹಲಿ ಪೊಲೀಸರು ಕೂಡಲೇ ವಿಶೇಷ ತಂಡಗಳನ್ನು ರಚಿಸಿ ಕಾರ್ಯಪ್ರವೃತ್ತರಾಗಿದ್ದಾರೆ. ದ್ವಾರಕಾ ಎಸಿಪಿ ಮಾರ್ಗದರ್ಶನದಲ್ಲಿ ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ಆರಂಭವಾಗಿತ್ತು.

ಒಂದೇ ದಿನದಲ್ಲಿ ಪೊಲೀಸರು ಓರ್ವ ಯುವತಿ ಹಾಗೂ ಅಪ್ರಾಪ್ತೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. 21 ವರ್ಷದ ಪೂಜಾ ದೇವಿಯು ಅಹಮದಾಬಾದ್​ನ ಜಶೋದಾನಗರದ ನಿವಾಸಿಯಾಗಿದ್ದಾರೆ. ಹಾಗೂ ಮತ್ತೊಬ್ಬ ಬಾಲಕಿ ಕೂಡ ಇದೇ ನಗರಕ್ಕೆ ಸೇರಿದವರಾಗಿದ್ದಾರೆ.

ಆರೋಪಿಯನ್ನು ರಾಜಸ್ಥಾನದ ಕರೌಲಿ ರತಿಯಪುರದ ಖೇಡಾ ಗ್ರಾಮದ ನಿವಾಸಿ ಶ್ಯಾಮ್​ ಬೀರ್​ ಗುಜಾರ್​ ಎಂದು ಗುರುತಿಸಲಾಗಿದೆ. ಆರೋಪಿ ಹಾಗೂ ಸಂತ್ರಸ್ತೆಯರನ್ನು ದೆಹಲಿ ಪೊಲೀಸರು ಅಹಮದಾಬಾದ್​ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...