alex Certify BIG NEWS: ಡೇಟಿಂಗ್ ಆಪ್ ಬಳಸಿ ಯುವತಿಯರ ಜತೆ ವಿಕೃತಿ; ಆರೋಪಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಡೇಟಿಂಗ್ ಆಪ್ ಬಳಸಿ ಯುವತಿಯರ ಜತೆ ವಿಕೃತಿ; ಆರೋಪಿ ಅರೆಸ್ಟ್

ಬೆಂಗಳೂರು: ಡೇಟಿಂಗ್ ಆಪ್ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಂಡು, ಬಳಿಕ ಅವರೊಂದಿಗೆ ಅಸಭ್ಯವಾಗಿ ವರ್ತಿಸಿ ವಿಕೃತಿ ಮೆರೆಯುತ್ತಿದ್ದ ಕಾಮುಕನನ್ನು ಬೆಂಗಳೂರು ಹೆಚ್.ಎಸ್.ಆರ್.ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಅಭಿಷೇಕ್ ಅಲಿಯಾಸ್ ಸುಶಾಂತ್ ಜೈನ್ ಬಂಧಿತ ಆರೋಪಿ. ಟಿಂಡರ್ ಡೇಟಿಂಗ್ ಆಪ್ ನಲ್ಲಿ ಯುವತಿಯರನ್ನು ಪರಿಚಯಿಸಿಕೊಳ್ಳುತ್ತಿದ್ದ ಆರೋಪಿ, ಬಳಿಕ ಯುವತಿಯರನ್ನು ಭೇಟಿ ಮಾಡಿ ಸ್ನೇಹ, ಸಲುಗೆ ಬೆಳೆಸಿಕೊಳ್ಳುತ್ತಿದ್ದ. ನಂತರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಯುವತಿಯರ ಮನೆಗೂ ಹೋಗುತ್ತಿದ್ದ ಆರೋಪಿ, ಖಾಸಗಿಯಾಗಿ ಸಮಯ ಕಳೆಯಲು ಪ್ರಚೋದಿಸುತ್ತಿದ್ದ.

ಸಂಪುಟ ವಿಸ್ತರಣೆಗೆ ಗರಿಗೆದರಿದ ಚಟುವಟಿಕೆ, ಸಿಎಂ ನಿವಾಸಕ್ಕೆ ಆಕಾಂಕ್ಷಿಗಳ ದೌಡು

ಬಲವಂತವಾಗಿ ಯುವತಿಯರ ಬಟ್ಟೆ ಬಿಚ್ಚಿಸಿ, ಖಾಸಗಿ ಫೋಟೋ, ವಿಡಿಯೋ ಚಿತ್ರೀಕರಿಸಿಕೊಂಡು ಬಳಿಕ ಮನೆಯಿಂದ ತೆರಳುತ್ತಿದ್ದ ಆರೋಪಿ, ಆ ಫೋಟೋ, ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ.

ಕೋಡಿಹಳ್ಳಿಯಲ್ಲಿ ಯುವತಿಯೊಬ್ಬಳು ಇಂಥದ್ದೇ ಸಮಸ್ಯೆ ಎದುರಿಸಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಯುವತಿ ದೂರು ಆಧರಿಸಿ ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...