
ತಮ್ಮ ಮಕ್ಕಳು ಸದಾ ಚುರುಕಾಗಿರಬೇಕೆಂದು ಎಲ್ಲ ಪಾಲಕರೂ ಬಯಸ್ತಾರೆ. ಉಳಿದ ಮಕ್ಕಳಿಗಿಂತ ವೇಗವಾಗಿ ಕೆಲಸ ಮಾಡಬೇಕು, ಬುದ್ಧಿವಂತರಾಗಿರಬೇಕೆಂದು ಇಚ್ಛಿಸುತ್ತಾರೆ.
ಆದ್ರೆ ಕೆಲ ಮಕ್ಕಳಿಗೆ ದಣಿವು ಜಾಸ್ತಿ. ಬಹ ಬೇಗ ಸುಸ್ತಾಗಿ ಹೋಗ್ತಾರೆ. ನಿಮ್ಮ ಮಕ್ಕಳೂ ಹಾಗೆ ಇದ್ದರೆ ಅವರ ಡಯಟ್ ನಲ್ಲಿ ಸ್ಮೂಥಿ ಸೇರ್ಪಡೆ ಮಾಡಿ. ಈ ಸ್ಮೂಥಿ ಸೇವನೆ ಮಾಡೋದ್ರಿಂದ ನಿಮ್ಮ ಮಗು ಸದಾ ಚುರುಕಾಗಿರುವ ಜೊತೆಗೆ ಎಲ್ಲರಿಗಿಂತ ಮುಂದಿರ್ತಾನೆ.
ಸ್ಮೂಥಿ ಮಾಡಲು ಬೇಕಾಗುವ ಪದಾರ್ಥ:
ಸೇಬು ಹಣ್ಣು, ಬಾಳೆ ಹಣ್ಣು, ಪಪ್ಪಾಯಿ ಹಣ್ಣು ಮತ್ತು ಚಿಕ್ಕು ಹಣ್ಣು (ಮಿಶ್ರ ಎರಡು ಬಟ್ಟಲು)
½ ಕಪ್ ತಾಜಾ ಕ್ರೀಂ, 1 ಕಪ್ ಮೊಸರು, ಎರಡು ಚಮಚ ಜೇನುತುಪ್ಪು, 1/2 ಚಮಚ ಏಲಕ್ಕಿ ಹುಡಿ, ಅಲಂಕಾರಕ್ಕೆ ಪಿಸ್ತಾ.
ಸ್ಮೂಥಿ ಮಾಡುವ ವಿಧಾನ : ಸೇಬು, ಬಾಳೆ, ಪಪ್ಪಾಯ ಹಾಗೂ ಚಿಕ್ಕು ಹಣ್ಣಿನ ಹೋಳುಗಳನ್ನು ಮಿಕ್ಸಿಗೆ ಹಾಕಿ ಮಿಕ್ಸಿ ಮಾಡಿಕೊಳ್ಳಿ. ನಂತ್ರ ಅದಕ್ಕೆ ಮೊಸರು, ಜೇನುತುಪ್ಪ, ಕ್ರೀಂ, ಏಲಕ್ಕಿ ಹಾಕಿ ಮತ್ತೆ ಮಿಕ್ಸಿ ಮಾಡಿ.
ಮಿಕ್ಸಿಯಾದ ನಂತ್ರ ಒಂದು ಗ್ಲಾಸ್ ಗೆ ಹಾಕಿ ಅದ್ರ ಮೇಲೆ ಪಿಸ್ತಾ ಇಡಿ.
ಪ್ರತಿದಿನ ಬೆಳಿಗ್ಗೆ ಆಹಾರ ಸೇವನೆ ಮಾಡುವುದಕ್ಕಿಂತಲೂ 1 ಗಂಟೆ ಮೊದಲು ಮಕ್ಕಳಿಗೆ ಕುಡಿಯಲು ನೀಡಿ.