ಕಾರವಾರ: ಕಂದಾಯ ಇಲಾಖೆ ಲೆಕ್ಕಾಧಿಕಾರಿಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿ ನಡೆದಿದೆ.
ಈಶ್ವರ್ ಭಟ್ (38) ಆತ್ಮಹತ್ಯೆಗೆ ಶರಣಾದ ಕಾರವಾರ ಉಪವಿಭಾಗ ಕಚೇರಿ ಕಂದಾಯ ಇಲಾಖೆ ಲೆಕ್ಕಾಧಿಕಾರಿ. ಕಾರವಾರದ ಪ್ರಿಮಿಯರ್ ಹೋಟೆಲ್ ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಾವಿಗೂ ಮುನ್ನ ಈಶ್ವರ್ ಭಟ್ ಬರೆದಿಟ್ಟಿರುವ ಡೆತ್ ನೋಟ್ ಪತ್ತೆಯಾಗಿದ್ದು, ತಾನು ಹೆಂಡತಿ ಮಕ್ಕಳಿಗಾಗಿ ಯಾವುದೇ ಆಸ್ತಿ ಮಾಡಿಟ್ಟಿಲ್ಲ ತನ್ನನ್ನು ಕ್ಷಮಿಸು. ಮಕ್ಕಳನ್ನು ಚೆನ್ನಾಗಿ ನೋಡಿಕೊ ಎಂದು ಬರೆದಿದ್ದಾರೆ.
ಇಟಲಿ ತಾಯಿ, ಇಂಡಿಯಾದ ತಂದೆ, ಎರಡು ಸಂಸ್ಕೃತಿಯಲ್ಲಿ ಬೆಳೆದವರ ಯೋಚನೆಗಳು ಎಂದಿಗೂ ದ್ವಂದ್ವ; ರಾಗಾ ಹೇಳಿಕೆಗೆ ಬಿಜೆಪಿ ವ್ಯಂಗ್ಯ
ಅನಾರೋಗ್ಯ ಕಾರಣದಿಂದ ಈಶ್ವರ್ ಭಟ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕಾರವಾರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.