ಖ್ಯಾತ ನಟ, ತಮಿಳುನಾಡಿನ ಮಕ್ಕಳ ನಿಧಿ ಮಯಂ ಪಕ್ಷದ ಸ್ಥಾಪಕ ಕಮಲ್ ಹಾಸನ್ ಅವರು ತಮ್ಮ ಪಕ್ಷಕ್ಕಾಗಿ ಸಾರ್ವಜನಿಕರಿಂದ ಮತ್ತೆ ನಿಧಿ ಸಂಗ್ರಹಕ್ಕೆ ಮುಂದಾಗಿದ್ದು, ಭ್ರಷ್ಟಾಚಾರ ಮುಕ್ತ ರಾಜಕಾರಣಕ್ಕಾಗಿ ಈ ಬೆಳವಣಿಗೆ ಅನಿವಾರ್ಯ ಎಂದು ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಗುರುವಾರದಂದು ಕಮಲ್ ಹಾಸನ್ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಸಾರ್ವಜನಿಕರು ತಮ್ಮ ಪಕ್ಷಕ್ಕೆ ದೇಣಿಗೆ ನೀಡಬಹುದು ಎಂದಿದ್ದು, ಮುಂದಿನ ಪೀಳಿಗೆಗೆ ಮಾದರಿ ಸಮಾಜ ನಿರ್ಮಾಣ ಮಾಡಲು ನಮ್ಮ ಪಕ್ಷ ಕಟಿಬದ್ಧವಾಗಿದೆ ಎಂದಿದ್ದಾರೆ.
ಮಿನಿ ವಿಧಾನಸೌಧ ಮಾರಾಟಕ್ಕಿಟ್ಟಿದ್ದ ರೈತ ದಿಢೀರ್ ನಾಪತ್ತೆ; ಕಂಗಾಲಾದ ಕುಟುಂಬ
ಈ ಹಿಂದೆ ಪಕ್ಷಕ್ಕಾಗಿ ತಾವು ಹಣ ಸಂಗ್ರಹಿಸಲು ಮುಂದಾದಾಗ ಹಲವರು ಅಣಕ ಮಾಡಿದ್ದರು. ಆದರೆ ಸಾರ್ವಜನಿಕರು ರಾಜಕೀಯ ಚಟುವಟಿಕೆಗಳಿಗೆ ದೇಣಿಗೆ ನೀಡುವುದರಿಂದ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂದು ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ.