ಬೆಂಗಳೂರು: ರಾಜಧಾನಿ ಬೆಂಗಳೂರಿಗರ ಜೀವನಾಡಿ ಎಂದೇ ಕರೆಯಲಾಗುವ ಬಿಎಂಟಿಸಿ ಬಸ್ ಗಳಲ್ಲಿ ಇತ್ತೀಚೆಗೆ ಬೆಂಕಿ ಅವಘಡಗಳು ಸಂಭವಿಸುತ್ತಿದ್ದು, ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಿಎಂಟಿಸಿ ತನಿಖೆಗೆ ಆದೇಶ ನೀಡಿದೆ.
ಇತ್ತೀಚೆಗೆ ಬಿಎಂಟಿಸಿ ಎರಡು ಬಸ್ ಗಳಿಗೆ ಬೆಂಕಿ ಬಿದ್ದಿತ್ತು. ನಡು ರಸ್ತೆಯಲ್ಲಿಯೇ ಬಸ್ ಗಳು ಏಕಾಏಕಿ ಹೊತ್ತಿ ಉರಿದಿದ್ದವು. ಈ ಎರಡೂ ಬಸ್ ಗಳು ಅಶೋಕ್ ಲೈಲ್ಯಾಂಡ್ ಕಂಪನಿ ಬಸ್ ಗಳಾಗಿವೆ ಎಂಬುದು ಮಹತ್ವದ ವಿಚಾರವಾಗಿದ್ದು, ಬೆಂಕಿ ಅವಘಡವನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಂಟಿಸಿ ಎಂ.ಡಿ. ಅನ್ಬುಕುಮಾರ್, ಇಲಾಖೆ ತಜ್ಞರಿಗೆ ತನಿಖೆಗೆ ಆದೇಶ ನೀಡಿದ್ದಾರೆ.
ಬಸ್ ಗಳಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಸಂಭವಿಸಲು ಕಾರಣವೇನು ಹಾಗೂ ಒಂದೇ ಕಂಪನಿ ಬಸ್ ಗಳು ಪದೇ ಪದೇ ಇಂಥ ಅವಘಡಕ್ಕೀಡಾಲು ಕಾರಣ ಪತ್ತೆ ಹಚ್ಚಿ ವರದಿ ನೀಡುವಂತೆ ಸೂಚಿಸಿದ್ದಾರೆ.