ರಾಜ್ಯದ ರೇಷ್ಮೆ ಬೆಳೆಗಾರರಿಗೆ ಭರ್ಜರಿ ಬಂಪರ್ ಸುದ್ದಿಯೊಂದು ಇಲ್ಲಿದೆ. ಬುಧವಾರದಂದು ಏಷ್ಯಾದ ಅತಿದೊಡ್ಡ ರೇಷ್ಮೆಗೂಡು ಮಾರುಕಟ್ಟೆ ಎಂಬ ಖ್ಯಾತಿ ಹೊಂದಿರುವ ರಾಮನಗರ ಮಾರುಕಟ್ಟೆಯಲ್ಲಿ ದ್ವಿತಳಿ ರೇಷ್ಮೆಗೂಡು ಪ್ರತಿ ಕೆಜಿಗೆ 1,043 ರೂಪಾಯಿಯಂತೆ ಹರಾಜಾಗುವ ಮೂಲಕ ಹೊಸ ದಾಖಲೆ ಬರೆದಿದೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಿದ್ದಯ್ಯನ ದೊಡ್ಡಿ ಗ್ರಾಮದ ರೈತ ರಮೇಶ ಎಂಬವರು ತಂದಿದ್ದ 95 ಕೆಜಿ ಯಷ್ಟು ರೇಷ್ಮೆ ಗೂಡಿಗೆ ಕೆಜಿಗೆ ತಲಾ 1,043 ರೂಪಾಯಿಗಳಂತೆ ಒಟ್ಟು 99,565 ದರ ಲಭಿಸಿದೆ. ರೇಷ್ಮೆ ಗೂಡು ಸಾವಿರ ರೂಪಾಯಿಗಳ ಗಡಿ ದಾಟಿದ್ದು ಇದೇ ಮೊದಲು ಎಂದು ಹೇಳಲಾಗಿದೆ.
ದ್ವಿಚಕ್ರವಾಹನದಿಂದ ಬಿದ್ದ ದಂಪತಿಗೆ ನೆರವಾಗಿ ಮಾನವೀಯತೆ ಮೆರೆದ ಶಾಸಕ
ರೇಷ್ಮೆ ಸಚಿವ ನಾರಾಯಣಗೌಡ ದಾಖಲೆ ಬೆಲೆಗೆ ರೇಷ್ಮೆ ಗೂಡು ಹರಾಜಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದು, ಮಾರುಕಟ್ಟೆಯಲ್ಲಿನ ಅವ್ಯವಸ್ಥೆ ಸರಿಪಡಿಸಿರುವುದು ಇದಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ ಚೀನಾ ರೇಷ್ಮೆ ಆಮದು ಸುಂಕವನ್ನು ಕೇಂದ್ರ ಸರ್ಕಾರ ಶೇಕಡ 28ಕ್ಕೆ ಏರಿಸಿರುವುದು ದೇಶೀಯ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿಗೆ ಈ ಬೆಲೆ ಲಭಿಸಲು ಕಾರಣವೆಂದು ಹೇಳಲಾಗಿದೆ.