ಬೆಂಗಳೂರು: ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ 88 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಿಂದಾಗಿ 10,904 ಮಂದಿಗೆ ಉದ್ಯೋಗ ಸಿಗಲಿದೆ.
ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 2367.99 ಕೋಟಿ ರೂಪಾಯಿ ಹೂಡಿಕೆಗೆ ಅನುಮೋದನೆ ನೀಡಲಾಗಿದೆ. ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಸಂಬಂಧಿಸಿದ 50 ಕೋಟಿ ರೂ. ಮೊತ್ತದ 7 ಯೋಜನೆಗೆ ಅನುಮೋದನೆ ನೀಡಲಾಗಿದೆ. 15 ಕೋಟಿ ರೂ.ನಿಂದ 50 ಕೋಟಿ ರೂ.ವರೆಗಿನ 78 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಗುರುದತ್ತ ಇಂಟಿಗ್ರೇಟೆಡ್ ಟೆಕ್ಸ್ ಟೈಲ್ ಪಾರ್ಕ್ 357 ಕೋಟಿ ರೂ., ರಿನಾಕ್ ಇಂಡಿಯಾ ಲಿಮಿಟೆಡ್ 80 ಕೋಟಿ ರೂ., ಸ್ಪಾನ್ ಸುಲ್ಸ್ ಫಾರ್ಮುಲೇಷನ್ 96 ಕೋಟಿ ರೂ. ಸೇರಿದಂತೆ ಅನೇಕ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎನ್ನಲಾಗಿದೆ.