ನವದೆಹಲಿ: ಚಿನ್ನದ ಬೆಲೆ 125 ರೂ., ಬೆಳ್ಳಿಯ ದರ 339 ರೂ.ನಷ್ಟು ಕಡಿಮೆಯಾಗಿದೆ. ಹೆಚ್.ಡಿ.ಎಫ್.ಸಿ. ಸೆಕ್ಯುರಿಟೀಸ್ ಪ್ರಕಾರ, ದೆಹಲಿ ಸ್ಥಳೀಯ ಮಾರುಕಟ್ಟೆಯಲ್ಲಿ ಬುಧವಾರದಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 125 ರೂಪಾಯಿ ಇಳಿಕೆಯಾಗಿ 47,837 ರೂಪಾಯಿಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಪ್ರತಿ 10 ಗ್ರಾಂಗೆ 47,962 ರೂ. ದರ ಇತ್ತು.
ಬೆಳ್ಳಿಯೂ ಸಹ ಹಿಂದಿನ ವಹಿವಾಟಿನಲ್ಲಿ ಪ್ರತಿ ಕೆಜಿಗೆ 61,816 ರಿಂದ 61,477 ಕ್ಕೆ ಅಂದರೆ 339 ರೂಪಾಯಿ ಇಳಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ದರ 1,799 ಡಾಲರ್‌ಗೆ ಇಳಿಕೆಯಾಗಿದ್ದು, ಬೆಳ್ಳಿ ಪ್ರತಿ ಔನ್ಸ್ ಗೆ 22.67 ಡಾಲರ್ ಗೆ ಸ್ಥಿರವಾಗಿದೆ.