ನವದೆಹಲಿ: ದೇಶದ ಮುಂದಿನ 25 ವರ್ಷಗಳ ಅಭಿವೃದ್ಧಿ ಮಾರ್ಗದರ್ಶಿ ಚಿಂತನೆಯನ್ನೊಳಗೊಂಡ ಬಜೆಟ್ ಎಂದೇ ಹೇಳಲಾಗುತ್ತಿರುವ 2022-23ನೇ ಸಾಲಿನ ಕೇಂದ್ರ ಆಯವ್ಯಯದಲ್ಲಿ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಲಾಗಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ ನಲ್ಲಿ ಯಾವೆಲ್ಲ ವಸ್ತುಗಳ ಬೆಲೆ ದುಬಾರಿಯಾಗಿದೆ? ಯಾವೆಲ್ಲ ವಸ್ತುಗಳ ದರ ಕಡಿಮೆಯಾಗಿದೆ? ಎಂಬ ಪ್ರಶ್ನೆ ಎಲ್ಲರಲ್ಲಿಯೂ ಇದ್ದೇ ಇರುತ್ತದೆ. ಕೇಂದ್ರ ಆಯವ್ಯಯದಲ್ಲಿ ಏನೆಲ್ಲ ದುಬಾರಿಯಾಗಿದೆ? ಏನೆಲ್ಲ ಇಳಿಕೆಯಾಗಿದೆ ಇಲ್ಲಿದೆ ಮಾಹಿತಿ.
ಯಾವುದು ದುಬಾರಿ?
ಪೆಟ್ರೋಲ್
ಎಥೆನಾಲ್ ಮಿಶ್ರಿತ ತೈಲ ಆಮದು ಸುಂಕ ಹೆಚ್ಚಳ
ಛತ್ರಿ. ಛತ್ರಿ ಆಮದಿನ ಸುಂಕ ಶೇ.20ರಷ್ಟು ಏರಿಕೆಯಾಗಿದೆ
ಯಾವುದು ಇಳಿಕೆ?
ವಜ್ರಾಭರಣ, ಹರಳು ಬೆಲೆ ಇಳಿಕೆ, ವಜ್ರ, ಹರಳು ಮೇಲಿನ ಶೇ.5ರಷ್ಟು ಸುಂಕ ಕಡಿತ
ಆರ್ಟಿಫಿಶಿಯಲ್ ಆಭರಣಗಳ ಮೇಲಿನ ಸುಂಕ ಕಡಿತ
ಬಟ್ಟೆ ಬೆಲೆ ಇಳಿಕೆ
ಚಪ್ಪಲಿ, ಚರ್ಮದ ಉತ್ಪನ್ನಗಳ ಬೆಲೆ ಇಳಿಕೆ
ಮೊಬೈಲ್, ಮೊಬೈಲ್ ಚಾರ್ಜರ್ ದರ ಇಳಿಕೆ
ವೈದ್ಯಕೀಯ ಉಪಕರಣ, ಶ್ರವಣ ಸಾಧನಗಳ ಬೆಲೆ ಕಡಿತ
ಡೀಸೆಲ್ ದರ ಇಳಿಕೆ
ಕೃಷಿ ಉಪಕರಣ ಬೆಲೆ ಇಳಿಕೆ
ಪೀಠೋಪಕರಣ, ಪ್ಯಾಕೇಜಿಂಗ್ ಬಾಕ್ಸ್ ದರ ಇಳಿಕೆ
ಸ್ಟೀಲ್ ದರ ಇಳಿಕೆ
ಕರಕುಶಲ ವಸ್ತು ದರ ಇಳಿಕೆ
ಎಲೆಕ್ಟ್ರಿಕಲ್ ಸ್ಮಾರ್ಟ್ ಮೀಟರ್ ದರ ಇಳಿಕೆ