ಇಂದೋರ್: 15-18 ವರ್ಷ ವಯಸ್ಸಿನ 547 ಅರ್ಹ ವಿದ್ಯಾರ್ಥಿಗಳಿಗೆ ಕೋವಿಡ್ -19 ಲಸಿಕೆಯ ಒಂದು ಡೋಸ್ ಅನ್ನು ನೀಡದಿದ್ದಕ್ಕಾಗಿ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ನಾಲ್ಕು ಖಾಸಗಿ ಶಾಲೆಗಳನ್ನು ಸೋಮವಾರ ಸೀಲ್ ಮಾಡಲಾಗಿದೆ.
ಜಿಲ್ಲಾಧಿಕಾರಿ ಮನೀಶ್ ಸಿಂಗ್ ಅವರ ಸೂಚನೆ ಮೇರೆಗೆ ಪರಿಶೀಲನೆ ನಡೆಸಿದ ನಂತರ ಬೇಜವಾಬ್ದಾರಿ ವರ್ತನೆಯಿಂದಾಗಿ ಮುಂದಿನ ಆದೇಶದವರೆಗೆ ಶಾಲೆಗಳನ್ನು ಮುಚ್ಚಲಾಗಿದೆ.
ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ 15-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲು ವಿಶೇಷ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಲಸಿಕೆ ಅಧಿಕಾರಿ ಡಾ.ತರುಣ್ ಗುಪ್ತಾ ತಿಳಿಸಿದ್ದಾರೆ. ಇದೀಗ ವಿದ್ಯಾರ್ಥಿಗಳಿಗೆ ಲಸಿಕೆ ನೀಡದಿದ್ದಕ್ಕೆ ಶಾಲೆಗಳನ್ನು ಸೀಲ್ ಮಾಡಲಾಗಿದೆ.
ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ವಿವಿಧ ತಂಡಗಳು ತಪಾಸಣೆ ನಡೆಸಿದ ಬಳಿಕ ಜಿಲ್ಲೆಯ ಎಲ್ಲ ಖಾಸಗಿ ಶಾಲೆಗಳಿಗೆ ಸೀಲ್ ಹಾಕಲಾಗಿದೆ. 741 ವಿದ್ಯಾರ್ಥಿಗಳಲ್ಲಿ 94 ವಿದ್ಯಾರ್ಥಿಗಳಿಗೆ ಮೊದಲ ಡೋಸ್ ನೀಡಲಾಗಿಲ್ಲ ಎಂದು ಜಿಲ್ಲಾಡಳಿತಕ್ಕೆ ತಿಳಿದ ಕೂಡಲೇ, ಚವಾನಿ ಪ್ರದೇಶದ ಸೇಂಟ್ ಅರ್ನಾಲ್ಡ್ ಶಾಲೆಗೆ ಮೊಹರು ಹಾಕಲಾಗಿದೆ.
ಮತ್ತೊಂದೆಡೆ, ದಾಖಲಾದ 310 ಮಕ್ಕಳ ಪೈಕಿ 102 ಮಕ್ಕಳಿಗೆ ಕೋವಿಡ್‌ನ ಮೊದಲ ಡೋಸ್ ನೀಡಲು ಶಿಕ್ಷಣ ಸಂಸ್ಥೆ ವಿಫಲವಾಗಿದ್ದಕ್ಕೆ ಟ್ಯಾಗೋರ್ ಪಬ್ಲಿಕ್ ಸ್ಕೂಲ್ ಅನ್ನು ಸೀಲ್ ಮಾಡಲಾಗಿದೆ. ಹಾಗೆಯೇ, 235 ಮಕ್ಕಳಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ನೀಡದಿದ್ದಕ್ಕೆ ಉಮರ್ ಹೈಯರ್ ಸೆಕೆಂಡರಿ ಹೌಸ್ ಅನ್ನು ಸೀಲ್ ಮಾಡಲಾಗಿದೆ.