alex Certify ಕೊರಿಯನ್ನರಂತೆ ಕಾಣಲು ಜನನಾಂಗ ವಿರೂಪ ಸರ್ಜರಿಗೆ ಮುಂದಾದ ಬ್ರಿಟನ್‌ ಯುವಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರಿಯನ್ನರಂತೆ ಕಾಣಲು ಜನನಾಂಗ ವಿರೂಪ ಸರ್ಜರಿಗೆ ಮುಂದಾದ ಬ್ರಿಟನ್‌ ಯುವಕ…!

ದೇವರು ಕೊಟ್ಟ ರೂಪವನ್ನು ಹಾಳು ಮಾಡಿಕೊಂಡು ತಮ್ಮದೇ ಅವತಾರ ಮಾಡಿಕೊಳ್ಳುವ ಅನೇಕ ಮಂದಿ ನಮ್ಮ ಸುತ್ತಲೂ ಇದ್ದಾರೆ.

ಬ್ರಿಟಿಷ್ ಇನ್‌ಫ್ಲುಯೆನ್ಸರ್‌ ಒಲಿ ಲಂಡನ್‌ಗೆ ಕೊರಿಯನ್ ಸಂಸ್ಕೃತಿ ಮೇಲೆ ಅಪಾರವಾದ ಆಸಕ್ತಿ. ಬಿಟಿಎಸ್ ಸದಸ್ಯ ಜಿಮಿನ್‌ರಂತೆ ಕಾಣಬೇಕೆಂದು ಈತ 20 ಬಾರಿ ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದಾನೆ. ಇದೀಗ ತಾನು ’100 ಪ್ರತಿಶತ’ ಕೊರಿಯನ್ ಆಗಿ ಕಾಣಲು ಬಯಸುತ್ತಿರುವುದಾಗಿಯೂ, ಇದಕ್ಕಾಗಿ ಶಿಶ್ನದ ಗಾತ್ರ ತಗ್ಗಿಸಲು ಬಯಸುವುದಾಗಿಯೂ ತಿಳಿಸಿದ್ದಾನೆ.

’ಮದುವೆಗಳು ಸ್ವರ್ಗದಲ್ಲಲ್ಲ ನರಕದಲ್ಲಿ ಆಗುತ್ತವೆ’: ಬಾಂಬೆ ಹೈಕೋರ್ಟ್ ಮಾರ್ಮಿಕ ಹೇಳಿಕೆ

ಇಂಗ್ಲೆಂಡ್‌ನಲ್ಲಿ ಹುಟ್ಟಿ ಬೆಳೆದರೂ ಸಹ ತನ್ನನ್ನು ತಾನು ಕೊರಿಯನ್ ಎಂದು ಕರೆದುಕೊಳ್ಳುವ ಒಲಿ, ಕೊರಿಯನ್ ಭಾಷೆಯಲ್ಲಿ ಮಾತನಾಡಲು ತನಗೆ ಕಷ್ಟವಾದರೂ ಸಹ ತನ್ನ ಈ ಅಂತರ್‌ವರ್ಣೀಯ ಸರ್ಜರಿಯಿಂದಾಗಿ ತಾನು ದಕ್ಷಿಣ ಕೊರಿಯಾದ ರಂಜಕ ಜಿಮಿನ್‌ರಂತೆಯೇ ಕಾಣುವುದಾಗಿ ಈತ ಬಲವಾಗಿ ನಂಬಿದ್ದಾನೆ. ಒಲಿಯ ಈ ವಿಚಿತ್ರ ವ್ಯಾಮೋಹವನ್ನು ಖುದ್ದು ಕೊರಿಯನ್ನರು ವಿರೋಧಿಸುತ್ತಾರೆ.

ಇನ್‌ಸ್ಟಾಗ್ರಾಂನಲ್ಲಿನ ತನ್ನ ಬಯೋದಲ್ಲಿ ಒಲಿ ತನ್ನನ್ನು ತಾನು ’ಕೆ-ಪಾಪ್’ ಗಾಯಕ ಎಂದು ಪರಿಚಯಿಸಿಕೊಂಡಿದ್ದಾನೆ. ಮುಂದಿನ ವಾರಗಳಲ್ಲಿ ತನ್ನ ಪೂರ್ತಿ ಮುಖ ಹಾಗೂ ಕುತ್ತಿಗೆಯನ್ನು ಸರ್ಜರಿ ಮಾಡಿಸುವುದಾಗಿ ತಿಳಿಸಿರುವ ಒಲಿ, ಕೊರಿಯಾದ ವ್ಯಕ್ತಿಯೊಬ್ಬರ ಶಿಶ್ನದ ಸರಾಸರಿ ಉದ್ದದಷ್ಟು ಗಾತ್ರಕ್ಕೆ ತನ್ನ ಶಿಶ್ನವನ್ನು ತಗ್ಗಿಸಿಕೊಳ್ಳಲು ಸರ್ಜರಿ ಮಾಡಿಸಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾನೆ.

https://twitter.com/OliLondonTV/status/1409628903623168002?ref_src=twsrc%5Etfw%7Ctwcamp%5Etweetembed%7Ctwterm%5E1409628903623168002%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fbritish-influencer-plans-penis-reduction-surgery-to-look-100-percent-korean-4717907.html

https://twitter.com/OliLondonTV/status/1406005541093187587?ref_src=twsrc%5Etfw%7Ctwcamp%5Etweetembed%7Ctwterm%5E1406005541093187587%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fbritish-influencer-plans-penis-reduction-surgery-to-look-100-percent-korean-4717907.html

https://www.instagram.com/p/CU8Lf6KN3Cr/?utm_source=ig_web_copy_link

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...