ಇತ್ತೀಚೆಗೆ ನವಿ ಮುಂಬೈನಲ್ಲಿ ತನ್ನ ಪತ್ನಿ ಸಲ್ಲಿಸಿದ ಕೌಟುಂಬಿಕ ಹಿಂಸೆ (ಡಿವಿ) ಮತ್ತು ವರದಕ್ಷಿಣೆ ಪ್ರಕರಣದಲ್ಲಿ ವ್ಯಕ್ತಿಯೊಬ್ಬರಿಗೆ ಬಾಂಬೆ ಹೈಕೋರ್ಟ್ ಬಂಧನ ಪೂರ್ವ ಜಾಮೀನು ಮಂಜೂರು ಮಾಡಿದೆ. “ಮದುವೆಗಳು ಸ್ವರ್ಗದಲ್ಲಿ ಆಗುವುದಿಲ್ಲ, ಅವು ನರಕದಲ್ಲಿ ಮಾಡಲ್ಪಡುತ್ತವೆ,” ಎಂದು ನ್ಯಾಯಾಧೀಶರು ಇದೇ ವೇಳೆ ಮಾರ್ಮಿಕವಾಗಿ ನುಡಿದಿದ್ದಾರೆ.
ಪರಸ್ಪರರ ವಿರುದ್ಧ ದೂರು ದಾಖಲಿಸಿಕೊಂಡಿರುವ ಪತಿ-ಪತ್ನಿ, ‘ತಮ್ಮ ನಡುವೆ ನಿತ್ಯ ಜಗಳ ನಡೆಯುತ್ತಿದ್ದರಿಂದ ಒಟ್ಟಿಗೆ ಬಾಳಲು ಸಾಧ್ಯವಿಲ್ಲ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಕೊರೊನಾ ನಂತರ ಕೌಟುಂಬಿಕ ಹಿಂಸೆಯಲ್ಲಿ ಹೆಚ್ಚಳ…! ರಾಷ್ಟ್ರೀಯ ಮಹಿಳಾ ಆಯೋಗದ ವರದಿಯಲ್ಲಿ ಶಾಕಿಂಗ್ ಮಾಹಿತಿ ಬಹಿರಂಗ
ನ್ಯಾಯಮೂರ್ತಿ ಸಾರಂಗ್ ವಿ ಕೊತ್ವಾಲ್ ಅವರಿದ್ದ ಏಕಸದಸ್ಯ ಪೀಠವು ಈ ತಿಂಗಳ ಆರಂಭದಲ್ಲಿ, ಡಿಸೆಂಬರ್ 2, 2021 ರಂದು ನವಿ ಮುಂಬೈನ ರಬಲೆ ಪೊಲೀಸ್ ಠಾಣೆಯಲ್ಲಿ ತನ್ನ ಪತ್ನಿ ದಾಖಲಿಸಿದ ಎಫ್ಐಆರ್ಗೆ ಸಂಬಂಧಿಸಿದಂತೆ ವ್ಯಕ್ತಿಯಿಂದ ನಿರೀಕ್ಷಣಾ ಜಾಮೀನು ಅರ್ಜಿ ಸಂಬಂಧ ವಿಚಾರಣೆ ನಡೆಸುತ್ತಿದೆ.
“ಗಂಡನ ಕಸ್ಟಡಿಯು ನಿಜವಾಗಿಯೂ ಸಮಸ್ಯೆಯನ್ನು ಪರಿಹರಿಸುವುದಿಲ್ಲ” ಮತ್ತು ಆದ್ದರಿಂದ, ತನಿಖೆಗೆ ಕಸ್ಟಡಿ ವಿಚಾರಣೆ ಅಗತ್ಯವಿಲ್ಲ ಎಂದು ಪೀಠ ಹೇಳಿದೆ. ಪತಿಯನ್ನು ಬಂಧಿಸಿದಲ್ಲಿ, ಶ್ಯೂರಿಟಿಗಳೊಂದಿಗೆ 30,000 ರೂಪಾಯಿಗಳ ವೈಯಕ್ತಿಕ ಬಾಂಡ್ ಅನ್ನು ಒದಗಿಸಿದ ಮೇಲೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ದಂಪತಿಗಳು ನವೆಂಬರ್ 2017ರಲ್ಲಿ ವಿವಾಹವಾಗಿದ್ದು, ಮೂರು ವರ್ಷದ ಮಗನನ್ನು ಹೊಂದಿದ್ದಾರೆ. ವಿವಾಹದ ಸಮಯದಲ್ಲಿ, ಅರ್ಜಿದಾರರ ಕುಟುಂಬದ ಸದಸ್ಯರು ತಲಾ ಒಂದು ಚಿನ್ನದ ನಾಣ್ಯವನ್ನು ಬಯಸಿದ್ದರು ಎಂದು ಪತ್ನಿ ಹೇಳಿದ್ದಾರೆ. ಆದರೆ, ಆಕೆಯ ಮನೆಯವರು ಅದನ್ನು ನೀಡಲು ನಿರಾಕರಿಸಿದ್ದರು.
ವಾಶಿಯಲ್ಲಿ ಫ್ಲಾಟ್ ಖರೀದಿಸಲು ತಾನು 13.5 ಲಕ್ಷ ರೂಪಾಯಿ ನೀಡಿದ್ದು ನವೆಂಬರ್ 2019 ರಿಂದ ಅದರಲ್ಲಿ ವಾಸಿಸಲು ಪ್ರಾರಂಭಿಸಿದ್ದವೆಂದಿರುವ ಪತ್ನಿ ಇಷ್ಟಾದರೂ ತಮ್ಮ ಪತಿ ಹೆಚ್ಚಿನ ಹಣಕ್ಕಾಗಿ ಬೇಡಿಕೆಯಿಟ್ಟಿದ್ದರಿಂದ ತಮ್ಮ ನಡುವಿನ ಜಗಳ ಮುಂದುವರೆದಿದೆ ಎಂದು ಆರೋಪಿಸಿದ್ದಾರೆ.
ಅರ್ಜಿದಾರನು ತನ್ನ ಹೆಂಡತಿ ತನ್ನನ್ನು ಅವಮಾನಿಸಿದ್ದಾಳೆಂದು ತೋರಿಸಲು ತನ್ನ ಮೇಲೆ ತಾನೇ ಕೆಲವು ಗಾಯಗಳನ್ನು ಮಾಡಿಕೊಂಡಿದ್ದಾನೆ ಎಂದು ಎಫ್ಐಆರ್ ಹೇಳಿದೆ. ಪತಿ ತನ್ನ ಬಳಿ ಇದ್ದ 4.2 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಇಟ್ಟುಕೊಂಡಿದ್ದಾನೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ತಾನು ತನ್ನ ಸಹೋದರಿಯೊಂದಿಗೆ ವಾಸಿಸಲು ಪ್ರಾರಂಭಿಸಿದ್ದರೂ, ಅರ್ಜಿದಾರನು ತನ್ನನ್ನು ಭೇಟಿ ಮಾಡಿ ತನ್ನ ಮಗುವನ್ನು ನೋಡುವಂತೆ ಒತ್ತಾಯಿಸಿದನು ಮತ್ತು ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಪೊಲೀಸರಿಗೆ ಕರೆ ಮಾಡಿದನು ಎಂದು ಪತ್ನಿ ಆರೋಪಿಸಿದ್ದಾರೆ.
ಅರ್ಜಿದಾರರ ಪರ ಹಾಜರಾದ ವಕೀಲ ರೇಶಮ್ ಐ ಸಾಹ್ನಿ, ಪತ್ನಿಯ ಆರೋಪಗಳನ್ನು “ಸುಳ್ಳು” ಎಂದು ಹೇಳಿದ್ದು, ಪತಿ ಫ್ಲಾಟ್ ಖರೀದಿಗೆ ಸಾಲದ ರೂಪದಲ್ಲಿ 90 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ ಮತ್ತು ಆಕೆ ಬರೀ ಒಳಾಂಗಣ ಅಲಂಕಾರಕ್ಕಾಗಿ ಮಾತ್ರ ಖರ್ಚು ಮಾಡಿದ್ದಾರೆ ಎಂದು ಹೇಳಿದರು.