alex Certify ಆಕಾಶದಲ್ಲಿ ಹಾರಾಡುತ್ತಿದ್ದ ಪಕ್ಷಿಗಳ ಜೊತೆ ತಿಮಿಂಗಲದ ಆಟ: ಮನಮೋಹಕವಾಗಿದೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಕಾಶದಲ್ಲಿ ಹಾರಾಡುತ್ತಿದ್ದ ಪಕ್ಷಿಗಳ ಜೊತೆ ತಿಮಿಂಗಲದ ಆಟ: ಮನಮೋಹಕವಾಗಿದೆ ಈ ವಿಡಿಯೋ

ಸಮುದ್ರ ಅಂದರೆ ಇಷ್ಟಪಡದವರು ಇರಲು ಸಾಧ್ಯವೇ ಇಲ್ಲ. ಪ್ರತಿಯೊಬ್ಬರೂ ಸಮುದ್ರವನ್ನು ಅಷ್ಟೊಂದು ಇಷ್ಟ ಪಡ್ತಾರೆ. ಹೀಗಾಗಿ ಬೀಚ್​ ಕಡೆಗಳಲ್ಲಿ ಜನರ ಸಂಖ್ಯೆಯೂ ಹೆಚ್ಚಿರುತ್ತದೆ.

ಕೆಲವರಂತೂ ಮನೆಯ ಹತ್ತಿರವೇ ಸಮುದ್ರ ಇದ್ದು ಬಿಡಲಿ ಅಂತಾನೇ ಆಸೆ ಪಡ್ತಾರೆ.ಇದೀಗ ಸಮುದ್ರ ಪ್ರಿಯರಿಗೆ ಸಮುದ್ರದ ಮೇಲೆ ಇನ್ನಷ್ಟು ಪ್ರೀತಿಯನ್ನು ಹೆಚ್ಚಿಸುವಂತಹ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿರುವ ವಿಡಿಯೋದಲ್ಲಿ ಪಕ್ಷಿಗಳ ಗುಂಪು ಆಕಾಶದಲ್ಲಿ ಹಾರಾಡುತ್ತಿರೋದನ್ನು ಕಾಣಬಹುದಾಗಿದೆ. ಈ ದೃಶ್ಯ ನೋಡಲು ಮನಮೋಹಕವಾಗಿದೆ. ಪಕ್ಷಿಗಳು ಸಮುದ್ರದ ಸುತ್ತಲೂ ಹಾರಾಡುತ್ತಿದ್ದರೆ. ತಿಮಿಂಗಲವೊಂದು ಇದೇ ಸಮಯಕ್ಕೆ ಸರಿಯಾಗಿ ನೀರಿನಿಂದ ಹೊರ ಬಂದಿರೋದನ್ನು ನೀವು ಕಾಣಬಹುದಾಗಿದೆ.

ಈ ವಿಡಿಯೋವನ್ನು ನೋಡಿದರೆ ತಿಮಿಂಗಲವು ಹಕ್ಕಿಗಳನ್ನು ತಿನ್ನಲು ಸ್ಕೆಚ್​ ಹಾಕುತ್ತಿರುವಂತೆ ಭಾಸವಾಗುತ್ತದೆ. ಆದರೆ ತಿಮಿಂಗಲವು ಪಕ್ಷಿಗಳಿಗೆ ಯಾವುದೇ ಹಾನಿ ಉಂಟು ಮಾಡಿಲ್ಲ. ಈ ದೃಶ್ಯವು ಸೋಶಿಯಲ್​ ಮೀಡಿಯಾದಲ್ಲಿ ಹಾಟ್​ ಕೇಕ್​ನಂತೆ ಸೇಲ್​ ಆಗ್ತಿದೆ.

https://youtu.be/TNzG7udsPRc

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...