ಯಾದಗಿರಿ: ಆರೋಗ್ಯ ತಪಾಸಣೆಗೆಂದು ಸ್ಕ್ಯಾನಿಂಗ್ ಸೆಂಟರ್ ಗೆ ಬಂದಿದ್ದ ಗರ್ಭಿಣಿಯೊಬ್ಬರು ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಯಾದಗಿರಿ ಜಿಲ್ಲೆ ಶಹಾಪುರದಲ್ಲಿ ನಡೆದಿದೆ.
ಶಹಾಪುರ ತಾಲೂಕಿನ ಯಕ್ಷಿಂತಿ ಗ್ರಾಮದ ಗರ್ಭಿಣಿ ಅಯ್ಯಮ್ಮ ಅವರು ಆರೋಗ್ಯ ತಪಾಸಣೆಗಾಗಿ ಶಹಾಪುರದ ಸ್ಕ್ಯಾನಿಂಗ್ ಸೆಂಟರ್ ಗೆ ಆಗಮಿಸಿದ್ದಾರೆ. ಆದರೆ, ಆರೋಗ್ಯ ತಪಾಸಣೆ ವಿಳಂಬವಾದ ಕಾರಣ ಬಸ್ ನಿಲ್ದಾಣದ ಶೌಚಾಲಯಕ್ಕೆ ಮೂತ್ರವಿಸರ್ಜನೆಗೆ ತೆರಳಿದ್ದು, ಅಲ್ಲಿಯೇ ಅವರಿಗೆ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಲ್ಲಿದ್ದವರು ಆಂಬುಲೆನ್ಸ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆಂಬುಲೆನ್ಸ್ ಸಿಬ್ಬಂದಿ ಮಹಿಳೆ ಮತ್ತು ಶಿಶುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ತಾಯಿ, ಮಗು ಆರೋಗ್ಯವಾಗಿದ್ದಾರೆನ್ನಲಾಗಿದೆ.