ಬೆಂಗಳೂರು : ಕೊರೊನಾ ಹೆಮ್ಮಾರಿಗೆ ಪರಿಣಾಮಕಾರಿ ಔಷಧಿ ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆಗಳ ಬಳಿಕ ಇದೀಗ ಬೂಸ್ಟರ್ ಡೋಸ್ ಹಾಕಿಸಿಕೊಳ್ಳುವ ಬಗ್ಗೆ ಸರ್ಕಾರ ಸಲಹೆ ನೀಡುತ್ತಿದ್ದು, ಬೂಸ್ಟರ್ ಡೋಸ್ ಬಗ್ಗೆಯೇ ಎಲ್ಲೆಡೆ ಚರ್ಚೆ ಆರಂಭವಾಗಿದೆ.
ಬೂಸ್ಟರ್ ಡೋಸ್ ಅವಶ್ಯಕತೆ ಇದೆಯೇ ? ಇದರಿಂದ ಕೋವಿಡ್ ತಡೆಯಬಹುದೇ ? ಎಂಬ ಪ್ರಶ್ನೆ, ನೂರಾರು ಗೊಂದಲಗಳು ಜನರನ್ನು ಕಾಡುತ್ತಿದೆ. ಇದಕ್ಕೆ ಉತ್ತರವಾಗಿ ಡಾ. ರಾಜು ಕೃಷ್ಣಮುರ್ತಿ ತಮ್ಮ ಹೊಸ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.
ಮಕ್ಕಳಲ್ಲಿ ವ್ಯಾಕ್ಸಿನೇಷನ್ ಅಗತ್ಯವಿಲ್ಲ, ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಬಂದಿದೆ ಎಂದು ಹೇಳಿದ್ದ ತಜ್ಞರು ಇದೀಗ ಮಕ್ಕಳಿಗೂ ವ್ಯಾಕ್ಸಿನೇಷನ್ ಹಾಕಿಸಬೇಕು. ಮಾತ್ರವಲ್ಲ ಎಲ್ಲರೂ ಮೂರನೇ ಡೋಸ್ ಅಥವಾ ಬೂಸ್ಟರ್ ಡೋಸ್ ವ್ಯಾಕ್ಸಿನೇಷನ್ ಪಡೆದುಕೊಳ್ಳುವ ಅಗತ್ಯವಿದೆ ಎಂದು ಹೇಳುತ್ತಿರುವುದು ವಿಪರ್ಯಾಸ ಎಂದು ಡಾ. ರಾಜು ಅಭಿಪ್ರಾಯಪಟ್ಟಿದ್ದಾರೆ.
ಹಾಗಾದರೆ ಬೂಸ್ಟರ್ ಡೋಸ್ ಅವಶ್ಯಕತೆ ಇದೆಯೇ ಎಂಬುದನ್ನು ನೋಡುವುದಾದರೆ ಕೋವಿಡ್ ಮೊದಲ ಅಲೆ, ಎರಡನೇ ಅಲೆ, ಡೆಲ್ಟಾ, ಒಮಿಕ್ರಾನ್ ಅಥವಾ ಹೊಸ ವೈರಸ್ ಇದಾವುದರ ವಿರುದ್ಧವೂ ಲಸಿಕೆ ಕೆಲಸ ಮಾಡುವುದಿಲ್ಲ. ಕಾರಣ ವೈರಸ್ ರೂಪಾಂತರಗೊಳ್ಳುತ್ತಿದೆ. ಕೋವಿಡ್ ಮೊದಲ ಅಲೆಯಿಂದ ಹಿಡಿದು….. ಡೆಲ್ಟಾ, ಒಮಿಕ್ರಾನ್ ವರೆಗೂ….. ಹೀಗೆ ವೈರಸ್ ರೂಪಾಂತರಗೊಳ್ಳುತ್ತಲೇ ಇರುವುದರಿಂದ ಒಂದು ಅಲೆಯಿಂದ ಮತ್ತೊಂದು ಅಲೆ ಅಥವಾ ಹೊಸ ರೂಪಾಂತರ ವೈರಸ್ ಮೇಲೆ ಈಗಿರುವ ಲಸಿಕೆಗಳು ಉಪಯೋಗಕಾರಿಯಲ್ಲ ಎಂದು ತಿಳಿಸಿದ್ದಾರೆ.
ವ್ಯಾಕ್ಸಿನೇಷನ್ ಅಥವಾ ಲಸಿಕೆ ಪಡೆದುಕೊಳ್ಳುವುದರಿಂದ ವೈರಸ್ ಹರಡುವಿಕೆ ಕಡಿಮೆ ಮಾಡಬಹುದು ಎಂಬುದು ಸುಳ್ಳು. ಲಸಿಕಾ ಕಂಪನಿಗಳು ಕೂಡ ಇದನ್ನೇ ಹೇಳುತ್ತವೆ. ಆದರೂ ಕೂಡ ಕಂಪನಿಗಳು ಲಸಿಕೆ ಬಗ್ಗೆ ಸಲಹೆ ನೀಡುತ್ತವೆ ಎಂದರೆ ನಿಜಕ್ಕೂ ನಡೆಯುತ್ತಿರುವಾದರೂ ಏನು ಎಂಬ ಬಗ್ಗೆ ಜನರು ಯೋಚಿಸಬೇಕು ಎಂದು ಸಲಹೆ ನೀಡಿದ್ದಾರೆ.
ವ್ಯಾಕ್ಸಿನ್ ಎಂಬುದು ನಮ್ಮ ಆರೋಗ್ಯವಲ್ಲ, ಅದು ವ್ಯಾಪಾರವಷ್ಟೇ ಎಂದು ಅಭಿಪ್ರಾಯಪಟ್ಟಿರುವ ಡಾ. ರಾಜು ಜನಸಾಮಾನ್ಯರು ವಿಚಾರ ಮಾಡಲೇಬೇಕಾದ ಐದು ಮಹತ್ವದ ಅಂಶಗಳ ಬಗ್ಗೆಯೂ ವಿವರಿಸಿದ್ದಾರೆ. ಕೋವಿಡ್ ಸಂದರ್ಭದ ಆರೋಗ್ಯ ಮಾಹಿತಿ ಬಗ್ಗೆ ಡಾ.ರಾಜು ಅವರ ಹೊಸ ವಿಡಿಯೋಗಳನ್ನು ನೀವೂ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.
https://youtu.be/nETJLCQr1gE