![](https://kannadadunia.com/wp-content/uploads/2022/01/pregnant-file.jpg)
ಭಾರತದ ಪ್ರತಿಷ್ಠಿತ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂರು ತಿಂಗಳು ಮೇಲ್ಪಟ್ಟ ಗರ್ಭಿಣಿಯರನ್ನು ಸೇವೆಗೆ ಸೇರದಂತೆ ತಡೆಯುವ ಮಾರ್ಗಸೂಚಿಯನ್ನು ಹೊರಡಿಸಿದೆ. ಅಲ್ಲದೇ ಇಂತವರನ್ನು ತಾತ್ಕಾಲಿಕವಾಗಿ ಅನರ್ಹ ಎಂದು ಪರಿಗಣಿಸಿದೆ. ಇದು ಲಿಂಗ ತಾರತಮ್ಯ ಹಾಗೂ ಕಾನೂನು ಬಾಹಿರ ವಿಚಾರವಾಗಿದೆ. ಈ ಕಾನೂನು ಬಾಹಿರ ಮಾರ್ಗಸೂಚಿಯನ್ನು ಹಿಂಪಡೆಯುವಂತೆ ನಾವು ಎಸ್.ಬಿ.ಐ.ಗೆ ನೋಟಿಸ್ ನೀಡಿದ್ದೇವೆ ಎಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಟ್ವೀಟ್ ಮಾಡಿದ್ದಾರೆ.
ಎಸ್.ಬಿ.ಐ.ಗೆ ನೀಡಲಾದ ನೋಟಿಸ್ನಲ್ಲಿ ದೆಹಲಿ ಮಹಿಳಾ ಆಯೋಗವು ಹೊಸ ಮಾರ್ಗಸೂಚಿಯ ನಕಲು ಪ್ರತಿ ಹಾಗೂ ಇದಕ್ಕೂ ಮೊದಲು ಜಾರಿಗೆ ತರಲಾದ ಇದೇ ರೀತಿಯ ನಿಯಮಗಳ ಪ್ರತಿಯನ್ನು ನೀಡುವಂತೆ ಕೋರಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ ಕ್ರಮವು ಅಖಿಲ ಭಾರತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೌಕರರ ಸಂಘ ಸೇರಿದಂತೆ ಹಲವು ವಲಯಗಳಲ್ಲಿ ಟೀಕೆಗೆ ಗುರಿಯಾಗಿದೆ.