alex Certify ಒಂದೇ ಹುಡುಗನಿಗೆ ಇಬ್ಬರ ಮೇಲೆ ಲವ್; ನೀರಿಗೆ ಹಾರಿದ ಮೊದಲ ಪ್ರೇಯಸಿ ಉಳಿಸಲು ಹೋಗಿ ಪ್ರಾಣ ಬಿಟ್ಟ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಹುಡುಗನಿಗೆ ಇಬ್ಬರ ಮೇಲೆ ಲವ್; ನೀರಿಗೆ ಹಾರಿದ ಮೊದಲ ಪ್ರೇಯಸಿ ಉಳಿಸಲು ಹೋಗಿ ಪ್ರಾಣ ಬಿಟ್ಟ ಯುವಕ

ಮಂಗಳೂರು : ಯುವ ಪೀಳಿಗೆ ಇತ್ತೀಚೆಗೆ ಪ್ರೀತಿ, ಪ್ರೇಮದ ಬಲೆಗೆ ಹೆಚ್ಚಾಗಿ ಬೀಳುತ್ತಿದ್ದಾರೆ. ವಯೋಸಹಜ ಗುಣ ಪ್ರೀತಿ, ಆದರೂ ಹಲವರು ಅದಕ್ಕಾಗಿ ಜೀವವನ್ನೇ ಅರ್ಪಣೆ ಮಾಡುವ ಮಟ್ಟಿಗೆ ಇಳಿಯುತ್ತಿರುವುದು ದುರಂತದ ಸಂಗತಿಯಾಗುತ್ತಿವೆ. ಇಲ್ಲೊಂದು ಇಂತಹುದೇ ಉದಾಹರಣೆ ನಡೆದಿದೆ.

ಯುವಕನೊಬ್ಬ ಸುಮಾರು ಏಳೆಂಟು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆ ನಂತರ ಆತನಿಗೆ ಮತ್ತೊಬ್ಬ ಯುವತಿಯೊಂದಿಗೆ ಪರಿಚಯವಾಗಿ, ಅವಳನ್ನೂ ಪ್ರೀತಿಸಲು ಆರಂಭಿಸಿದ್ದಾನೆ. ಈ ವಿಷಯ ಮೊದಲ ಪ್ರೇಯಸಿಗೆ ಗೊತ್ತಾಗಿ ಒಂದು ಜೀವವೇ ಬಲಿಯಾಗುವಂತಾಗಿದೆ.

ಜಿಲ್ಲೆಯ ಮುನ್ನೂರು ಗ್ರಾಮದ ಲಾಯ್ಡ್ ಡಿಸೋಜ(28) ಎಂಬ ಯುವಕನೇ ಹಲವು ವರ್ಷಗಳಿಂದ ಅಶ್ವಿತ ಫೆರಾವೊ(22) ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಇಬ್ಬರು ಪರಸ್ಪರ ಜೀವಕ್ಕಿಂತಲೂ ಹೆಚ್ಚು ಪ್ರೀತಿಸುತ್ತಿದ್ದರು. ಮದುವೆಯಾಗುವುದಕ್ಕೂ ನಿರ್ಧರಿಸಿದ್ದರು. ಆದರೆ, ಈ ಮಧ್ಯೆ ಲಾಯ್ಡ್ ಡಿಸೋಜಗೆ ಮತ್ತೊಬ್ಬ ಯುವತಿಯ ಪರಿಚಯವಾಗಿದೆ. ಈ ಪರಿಚಯ ಪ್ರೇಮಕ್ಕೆ ತಿರುಗಿದೆ.

ಈ ವಿಷಯ ಅಶ್ವಿತಾಗೆ ಗೊತ್ತಾಗಿ ಲಾಯ್ಡ್ ಡಿಸೋಜನೊಂದಿಗೆ ತಗಾದೆ ತೆಗೆದಿದ್ದಾಳೆ. ಈ ಜಗಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ, ಯುವಕ, ರಾಜಿ ಪಂಚಾಯ್ತಿ ಮಾಡಲು ಮುಂದಾಗಿದ್ದಾನೆ. ಇಬ್ಬರು ಯುವತಿಯರನ್ನು ಸೋಮೇಶ್ವರ ಬೀಚ್ ಗೆ ಮಾತನಾಡಲು ಕರೆದುಕೊಂಡು ಬಂದಿದ್ದಾನೆ.

ಈ ಸಂದರ್ಭದಲ್ಲಿ ಯುವಕನ ಮಾತಿನಿಂದ ಬೇಸರಗೊಂಡ ಮೊದಲ ಸ್ನೇಹಿತೆ ಅಶ್ವಿತಾ, ಸಮುದ್ರಕ್ಕೆ ಹಾರಿದ್ದಾಳೆ. ಕೂಡಲೇ ಅವಳ ರಕ್ಷಣೆಗಾಗಿ ಯುವಕ ಕೂಡ ನೀರಿಗೆ ಹಾರಿದ್ದಾನೆ. ಆದರೆ, ಅಶ್ವಿತಾ ಪ್ರಾಣಾಪಾಯದಿಂದ ಪಾರಾಗಿದ್ದರೆ, ಯುವಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಯುವತಿ ಹಾಗೂ ಯುವಕ ನೀರಿಗೆ ಧುಮುಕಿರುವುದು ಗೊತ್ತಾಗುತ್ತಿದ್ದಂತೆ ಕಾವಲು ಪಡೆಯ ಸಿಬ್ಬಂದಿ ಕೂಡಲೇ ರಕ್ಷಣಾ ಕಾರ್ಯ ನಡೆಸಿದ್ದಾರೆ. ಹೀಗಾಗಿ ಅಶ್ವಿತಾ ಬದುಕುಳಿದಿದ್ದರೆ, ಯುವಕ ಸಾವನ್ನಪ್ಪಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...