ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಅಥವಾ ಅವರ ಕುಟುಂಬ ಸದಸ್ಯರಿಗೆ ಕೊರೋನಾ ಸೋಂಕು ತಗುಲಿದ್ದಲ್ಲಿ ನೌಕರರಿಗೆ 7 ದಿನ ವಿಶೇಷ ಸಾಂದರ್ಭಿಕ ರಜೆ ನೀಡಲಾಗುವುದು.
ಸರ್ಕಾರಿ ನೌಕರರು ಅಥವಾ ಅವರ ಕುಟುಂಬದ ಸದಸ್ಯರು ಕೊರೋನಾ ಸೋಂಕಿಗೆ ಒಳಗಾಗಿ ಅವರಿರುವ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಎಂದು ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ವಿಧಿಸಿದಲ್ಲಿ ಮಾತ್ರ 7 ದಿನ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಬಹುದೆಂದು ಆದೇಶ ಹೊರಡಿಸಲಾಗಿದೆ.