ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಕಡಿಮೆ ಅವಧಿಯಲ್ಲಿ ಹೂಡಿಕೆದಾರರಿಗೆ ಪ್ರಭಾವಶಾಲಿ ಆದಾಯವನ್ನು ಒದಗಿಸುವ ಸುರಕ್ಷಿತ ಹೂಡಿಕೆ ಯೋಜನೆಗಳನ್ನು ನೀಡುತ್ತದೆ. ಹೂಡಿಕೆದಾರರು ತಮ್ಮ ಭವಿಷ್ಯ ಮತ್ತು ನಿವೃತ್ತಿಯ ಜೀವನವನ್ನು ಸುರಕ್ಷಿತವಾಗಿರಿಸಲು ತಮ್ಮ ಹಣವನ್ನು ಎಲ್ಐಸಿ ಪಾಲಿಸಿಗಳಲ್ಲಿ ಹಾಕಬಹುದು.
ಉದಾಹರಣೆಗೆ, ಜೀವನ್ ಲಾಭ್ ಎಂಬ ಪಾಲಿಸಿಯಲ್ಲಿ, ನೀವು ಪ್ರತಿನಿತ್ಯ ಸುಮಾರು 233 ರೂಪಾಯಿಗಳನ್ನು ಹೂಡಿಕೆ ಮಾಡಲು ಪ್ರಾರಂಭಿಸಿ, ಒಂದು ತಿಂಗಳಿಗೆ ಸರಿಸುಮಾರು 7000 ರೂಪಾಯಿಗಳು, ಪಾಲಿಸಿ ಮೆಚ್ಯೂರಿಟಿ ಸಮಯದಲ್ಲಿ 17 ಲಕ್ಷ ರೂಪಾಯಿಗಳನ್ನು ಪಡೆಯಬಹುದು.
ಭರ್ಜರಿ ಗುಡ್ ನ್ಯೂಸ್: LIC ಶುರು ಮಾಡಿದೆ ಹೊಸ ವಿಮೆ ಯೋಜನೆ
ಎಲ್ಐಸಿಯ ʼಜೀವನ್ ಲಾಭ್ʼ ಯೋಜನೆಯಲ್ಲಿನ ಹೂಡಿಕೆಗಳು ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80C ಅಡಿಯಲ್ಲಿ ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿವೆ. ವಿಮಾ ಯೋಜನೆಯು ಲಿಂಕ್-ರಹಿತ ಸ್ಕೀಂ ಆಗಿದೆ. ಅಂದರೆ ಆದಾಯವು ಯಾವುದೇ ಸ್ಟಾಕ್ ಮಾರುಕಟ್ಟೆಗಳನ್ನು ಆಧರಿಸಿಲ್ಲ. ನಾನ್-ಲಿಂಕ್ಡ್ ಪಾಲಿಸಿಯು ಜೀವನ್ ಲಾಭ್ ಯೋಜನೆಯನ್ನು 2022 ರಲ್ಲಿ ಹೂಡಿಕೆ ಮಾಡಲು ಸುರಕ್ಷಿತ ಹೂಡಿಕೆ ಆಯ್ಕೆಗಳಲ್ಲಿ ಒಂದಾಗುವಂತೆ ಮಾಡಿದೆ.
ಎಲ್ಐಸಿ ಜೀವನ್ ಲಾಭ್ ಪಾಲಿಸಿಯಲ್ಲಿ ಹೂಡಿಕೆ ಮಾಡಲು ಕನಿಷ್ಠ ವಯಸ್ಸು 8 ವರ್ಷ ಮತ್ತು ಗರಿಷ್ಠ ವಯಸ್ಸು 59 ವರ್ಷಗಳು. ಪಾಲಿಸಿಯ ಅವಧಿಯು 16 ರಿಂದ 25 ವರ್ಷಗಳವರೆಗೆ ಇರುತ್ತದೆ. ಎಲ್ಐಸಿ ಜೀವನ್ ಲಾಭ್ನಲ್ಲಿ ಕನಿಷ್ಠ ವಿಮಾ ಮೊತ್ತ 2 ಲಕ್ಷ ರೂ. ಇದೆ.
3 ವರ್ಷಗಳ ಕಾಲ ಪ್ರೀಮಿಯಂಗಳನ್ನು ಪಾವತಿಸಿದ ನಂತರ ಹೂಡಿಕೆದಾರರು ತಮ್ಮ ಹೂಡಿಕೆಯ ವಿರುದ್ಧ ಸಾಲವನ್ನು ತೆಗೆದುಕೊಳ್ಳಬಹುದು. ಇದಲ್ಲದೆ, ಪಾಲಿಸಿದಾರರ ಅಚಾನಕ್ ಮರಣದ ಸಂದರ್ಭದಲ್ಲಿ, ನಾಮಿನಿಯು ಬೋನಸ್ ಜೊತೆಗೆ ವಿಮಾ ಮೊತ್ತದ ಪ್ರಯೋಜನಗಳನ್ನು ಪಡೆಯುತ್ತಾರೆ.
21 ವರ್ಷಗಳ ಪಾಲಿಸಿ ಅವಧಿಯನ್ನು ಆಯ್ಕೆ ಮಾಡಲು ಹೂಡಿಕೆದಾರರು 54 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಆದರೆ, 25 ವರ್ಷಗಳ ಪಾಲಿಸಿಯನ್ನು ಆಯ್ಕೆ ಮಾಡಲು ಹೂಡಿಕೆದಾರರು 50 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು
ಅಲ್ಲದೆ, ಪಾಲಿಸಿದಾರನು ಪಾಲಿಸಿಯ ಅವಧಿಯಲ್ಲಿ ಮರಣ ಹೊಂದಿದರೆ ಮತ್ತು ಮರಣದ ತನಕ ಎಲ್ಲಾ ಪ್ರೀಮಿಯಂಗಳನ್ನು ಪಾವತಿಸಿದ್ದರೆ, ಹೂಡಿಕೆದಾರರ ನಾಮಿನಿಯು ಮರಣದ ಲಾಭವಾಗಿ ಮರಣದ ವಿಮಾ ಮೊತ್ತ, ಸರಳ ರಿವರ್ಷನರಿ ಬೋನಸ್ ಮತ್ತು ಅಂತಿಮ ಸೇರ್ಪಡೆ ಬೋನಸ್ ಅನ್ನು ಪಡೆಯುತ್ತಾರೆ.