ಮೇಷ : ಈ ರಾಶಿಯ ಉದ್ಯಮಿಗಳು ಇಂದು ಅನಿರೀಕ್ಷಿತ ಮಟ್ಟದಲ್ಲಿ ಲಾಭವನ್ನು ಗಳಿಸಲಿದ್ದಾರೆ. ಸ್ವಂತ ವ್ಯವಹಾರ ಆರಂಭಿಸುವವರಿಗೆ ಇದು ಶುಭ ದಿನವಾಗಿದೆ. ತಾಯಿಯ ಆರೋಗ್ಯದಲ್ಲಿ ಕೊಂಚ ಏರುಪೇರು ಉಂಟಾಗಬಹುದು. ಆಧ್ಯಾತ್ಮಿಕ ಕ್ಷೇತ್ರದತ್ತ ಮನಸ್ಸು ವಾಲಲಿದೆ.
ವೃಷಭ : ಭೂಮಿ ಖರೀದಿಸಬೇಕು ಎಂದುಕೊಂಡವರಿಗೆ ಈ ದಿನ ಶುಭದಾಯಕವಾಗಿ ಇರಲಿದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ತೋರಲಿದ್ದೀರಿ. ಕಚೇರಿಯಲ್ಲಿ ಪ್ರತಿಸ್ಪರ್ಧಿಗಳ ಸಂಖ್ಯೆ ಹೆಚ್ಚಲಿದೆ. ಹನುಮಾನ್ ಚಾಲೀಸಾ ಪಠಿಸಿ.
ಮಿಥುನ : ಮನೆಯ ಪೀಠೋಪಕರಣಗಳ ಖರೀದಿಗೆ ದೊಡ್ಡ ಮೊತ್ತದ ಖರ್ಚನ್ನು ಮಾಡಲಿದ್ದೀರಿ. ವೃತ್ತಿ ಜೀವನದ ದೃಷ್ಟಿಯಿಂದ ಈ ದಿನ ನಿಮಗೆ ನೆಮ್ಮದಿದಾಯಕವಾಗಿ ಇರಲಿದೆ. ವೈಯಕ್ತಿಕ ಜೀವನದಲ್ಲಿಯೂ ಯಾವುದೇ ಸಮಸ್ಯೆ ಇರುವುದಿಲ್ಲ.
ಕಟಕ : ಸ್ತ್ರೀಯರು ಮನಸ್ಸಿನ ಚಂಚಲತೆಗೆ ಒಳಗಾಗಲಿದ್ದಾರೆ. ಉದ್ಯಮದಲ್ಲಿ ಧನಾತ್ಮಕ ಬೆಳವಣಿಗೆ ಕಂಡು ಬರಲಿದೆ. ಧಾರ್ಮಿಕ ಕೆಲಸಕ್ಕಾಗಿ ಖರ್ಚು ಮಾಡಲಿದ್ದೀರಿ. ಸಂಗಾತಿಯ ಆರೋಗ್ಯದಲ್ಲಿ ಕೊಂಚ ಏರುಪೇರು ಉಂಟಾಗಲಿದೆ.
ಸಿಂಹ : ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಸುವ ಬಗ್ಗೆ ಚರ್ಚೆ ನಡೆಸಲಿದ್ದೀರಿ. ಸತ್ತೇ ಹೋಗುವ ಹಂತದಲ್ಲಿದ್ದ ನಿಮ್ಮ ಪ್ರೇಮ ಸಂಬಂಧವು ಸ್ನೇಹಿತರ ಮಧ್ಯಪ್ರವೇಶದಿಂದ ಉಳಿಯಲಿದೆ. ವಿದೇಶಿ ಸಂಬಂಧ ವ್ಯವಹಾರದಲ್ಲಿ ದೊಡ್ಡ ಮಟ್ಟಿಗಿನ ಲಾಭ ಸಾಧಿಸಲಿದ್ದೀರಿ.
ಕನ್ಯಾ : ಸಂಗಾತಿಯ ಮೇಲೆ ಅತಿಯಾದ ಅನುಮಾನವನ್ನು ತೋರಬೇಡಿ. ಇದರಿಂದ ನಿಮ್ಮ ದಾಂಪತ್ಯದಲ್ಲಿ ಬಹುದೊಡ್ಡ ಬಿರುಕು ಮೂಡಲಿದೆ. ಹಿರಿಯ ಸಹೋದರನ ಜೊತೆ ನಿಮ್ಮ ಸಂಬಂಧ ಸುಧಾರಿಸಲಿದೆ. ಸ್ನೇಹಿತರು ಬಹಳ ದಿನಗಳ ಬಳಿಕ ನಿಮ್ಮನ್ನು ಭೇಟಿಯಾಗಲಿದ್ದಾರೆ.
ತುಲಾ : ನಿರಂತರ ಪ್ರಯಾಣದಿಂದ ಅತಿಯಾಗಿ ದಣಿಯಲಿದ್ದೀರಿ. ಇದರಿಂದ ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಕಾಡಲಿದೆ. ಸ್ತ್ರೀಯರಿಗೆ ಧನಲಾಭವಿದೆ. ವಿದ್ಯಾರ್ಥಿಗಳು ಗುರು ಅನುಗ್ರಹದಿಂದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಸಿಗಲಿದೆ. ಅಡಿಕೆ ವ್ಯಾಪಾರಿಗಳಿಗೆ ಈ ದಿನ ಶುಭ ದಿನ.
ವೃಶ್ಚಿಕ : ನಿಮ್ಮ ಹೊಸ ಉದ್ಯಮದ ಕನಸಿಗೆ ಸ್ನೇಹಿತರು ನೀರೆರೆಯಲಿದ್ದಾರೆ. ಕಚೇರಿ ಕೆಲಸದ ನಿಮಿತ್ತ ನೀವು ದೂರ ಪ್ರಯಾಣ ಕೈಗೊಳ್ಳಬೇಕಾಗಿ ಬರಲಿದೆ. ವಿದ್ಯಾರ್ಥಿಗಳು ಅಂದುಕೊಂಡಂತೆ ಫಲಿತಾಂಶವನ್ನು ಪಡೆಯಲಿದ್ದಾರೆ. ಧನಲಾಭವಿದೆ.
ಧನು : ಹಣಕಾಸು ವಿಚಾರದಲ್ಲಿ ನೀವು ಯಶಸ್ಸನ್ನು ಸಾಧಿಸುವಿರಿ. ನಿಮ್ಮಿಂದ ಸಾಲ ಪಡೆದವರು ಹಣ ಹಿಂದಿರುಗಿಸಲಿದ್ದಾರೆ. ಪ್ರಭಾವಿ ವ್ಯಕ್ತಿಯೊಬ್ಬರನ್ನು ನೀವಿಂದು ಭೇಟಿ ಮಾಡಲಿದ್ದೀರಿ. ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಕಾಡಲಿದೆ.
ಮಕರ : ನಿಮ್ಮ ಸಂಗಾತಿಯು ಇಂದು ಸಾಂಸ್ಕೃತಿಕ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಲಿದ್ದಾರೆ. ಇದರಿಂದ ನೀವು ಅತ್ಯಂತ ಸಂತೋಷಗೊಳ್ಳಲಿದ್ದೀರಿ. ದಾಂಪತ್ಯ ಜೀವನ ಕೂಡ ನೆಮ್ಮದಿಯಿಂದ ಇರಲಿದೆ. ಕಳೆದು ಹೋದ ಅಮೂಲ್ಯ ವಸ್ತುವೊಂದು ಇಂದು ನಿಮ್ಮನ್ನು ಸೇರಲಿದೆ.
ಕುಂಭ : ಅತ್ತೆ -ಸೊಸೆ ನಡುವಿನ ಸಂಬಂಧ ಹಳಸುವ ಸಾಧ್ಯತೆ ಇದೆ. ಹೀಗಾಗಿ ಮಾತಿನ ಮೇಲೆ ಆದಷ್ಟು ಹಿಡಿತವಿರಲಿ. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಮಕ್ಕಳು ಓದಿನ ಕಡೆಗೆ ಗಮನ ನೀಡಲಿದ್ದಾರೆ. ಸ್ತ್ರೀಯರಿಗೆ ಲಾಭವಿದೆ.
ಮೀನ : ದಾಂಪತ್ಯ ಜೀವನದ ಬಿರುಕಿನಿಂದಾಗಿ ನೀವು ಅತಿಯಾಗಿ ನೋವನ್ನು ಅನುಭವಿಸಲಿದ್ದೀರಿ. ಮಾನಸಿಕ ಆರೋಗ್ಯ ಕೆಡಲಿದೆ. ವ್ಯಾಪಾರಸ್ಥರಿಗೆ ಈ ದಿನ ಲಾಭದಾಯಕವಾಗಿ ಇರಲಿದೆ. ತರಕಾರಿ ವ್ಯಾಪಾರಿಗಳಂತೂ ನಿರೀಕ್ಷೆಗೂ ಮೀರಿದ ಲಾಭ ಗಳಿಸುವರು.