ಹಿಂದಿ ಕಿರುತೆರೆ ನಟಿ ಶ್ವೇತಾ ತಿವಾರಿ ಸಂದರ್ಶನವೊಂದರಲ್ಲಿ ದೇವರು ನನ್ನ ಬ್ರಾ ಸೈಜ್ನ್ನು ತೆಗೆದುಕೊಳ್ಳುತ್ತಿದ್ದಾನೆ ಎಂದು ಹೇಳಿ ಬಾರೀ ವಿವಾದಕ್ಕೆ ಗ್ರಾಸವಾಗಿದ್ದರು. ತಮ್ಮ ಮುಂಬವರು ವೆಬ್ ಶೋವಾದ ಶೋ ಸ್ಟಾಪರ್ ಬಗ್ಗೆ ಭೋಪಾಲ್ನಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆಯಲ್ಲಿ ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಆದರೆ ಶ್ವೇತಾ ತಿವಾರಿಯ ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ನಟಿ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಕ್ಷಮೆ ಯಾಚಿಸಿದ್ದಾರೆ.
ಈ ಸಂಬಂಧ ಮಾಧ್ಯಮಗಳಲ್ಲಿ ಅಧಿಕೃತ ಹೇಳಿಕೆ ನೀಡಿರುವ ನಟಿ ಶ್ವೇತಾ ತಿವಾರಿ, ಸಹೋದ್ಯೋಗಿಯ ಹಿಂದಿನ ಪಾತ್ರವನ್ನು ಉಲ್ಲೇಖಿಸುವ ಭರದಲ್ಲಿ ನಾನು ಈ ರೀತಿಯ ಹೇಳಿಕೆಯನ್ನು ನೀಡಿದ್ದೇನೆ. ಆದರೆ ಇದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ನಾನೊಂದು ಉದಾಹರಣೆಯಾಗಿ ಈ ಪದವನ್ನು ಬಳಕೆ ಮಾಡಿದ್ದೆ. ಆದರೆ ಅದನ್ನು ಸಂಪೂರ್ಣ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ದೇವರ ಬಗ್ಗೆ ಅತ್ಯಂತ ನಂಬಿಕೆಯನ್ನು ಹೊಂದಿರುವ ನನಗೆ ಇದು ದುಃಖ ತಂದಿದೆ. ನಾನು ದೇವರಿಗೆ ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶಪೂರ್ವಕವಾಗಿ ಅಲ್ಲದೆಯೇ ಜನರ ಭಾವನೆಗಳಿಗೆ ಧಕ್ಕೆ ತರಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ನನ್ನ ಮಾತುಗಳಿಂದ ಅಥವಾ ನಡವಳಿಕೆಗಳಿಂದ ಯಾರ ಮನಸ್ಸಿಗೆ ನೋವುಂಟು ಮಾಡುವುದೂ ನನ್ನ ಉದ್ದೇಶವಲ್ಲ. ಆದ್ದರಿಂದ ನನ್ನ ಈ ಹೇಳಿಕೆ ಬಹಳಷ್ಟು ಜನರಿಗೆ ನೋವುಂಟು ಮಾಡಿದೆ ಎಂದು ತಿಳಿದುಬಂದಿರುವ ಹಿನ್ನೆಲೆಯಲ್ಲಿ ನಾನು ಅತ್ಯಂತ ನಮ್ರತೆಯಿಂದ ಕ್ಷಮೆ ಯಾಚಿಸುತ್ತಿದ್ದೇನೆ ಎಂದು ಹೇಳಿದರು.
ಶ್ವೇತಾ ತಿವಾರಿಯ ಮುಂಬರುವ ಷೋ ಷೋ ಸ್ಟಾಪರ್ ಒಂದು ಫ್ಯಾಶನ್ ಜಗತ್ತಿಗೆ ಸಂಬಂಧಿಸಿದ್ದಾಗಿದೆ. ಈ ವೆಬ್ ಸಿರೀಸ್ನಲ್ಲಿ ಶ್ವೇತಾ ಸೌರಭ್ ರಾಜ್ ಜೈನ್ ಹಾಗೂ ದಿಗಂಗನ ಸೂರ್ಯವಂಶಿ ಜೊತೆಯಲ್ಲಿ ಬಣ್ಣ ಹಚ್ಚಿದ್ದಾರೆ.