ಟೆನ್ನಿಸ್ ಲೋಕದ ಶ್ರೇಷ್ಠ ಆಟಗಾರರಲ್ಲೊಬ್ಬರಾದ ರಫೇಲ್ ನಡಾಲ್ ದಾಖಲೆಯ 21ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿಗೆ ಮುತ್ತಿಕ್ಕುವ ಸನಿಹದಲ್ಲಿದ್ದಾರೆ.
ಆಸ್ಟ್ರೇಲಿಯಾ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ನಡಾಲ್ ದಾಖಲೆ ಬರೆಯುವ ಕನಸು ಕಾಣುತ್ತಿದ್ದಾರೆ. ಈಗಾಗಲೇ ನಡಾಲ್ ಅವರು ಪ್ರಶಸ್ತಿಯಲ್ಲಿ ನೋವಾಕ್ ಜೋಕೋವಿಚ್ ಹಾಗೂ ಫೆಡರರ್ ನಡುವೆ ಪೈಪೋಟಿ ನಡೆಸುತ್ತಿದ್ದಾರೆ. ಈ ಮೂವರು ದಿಗ್ಗಜರು ಬರೋಬ್ಬರಿ ತಲಾ 20 ಗ್ರ್ಯಾನ್ ಸ್ಲಾಂಗಳನ್ನು ಗೆದ್ದಿದ್ದಾರೆ. ಹೀಗಾಗಿ 21ನೇ ಗ್ರ್ಯಾನ್ ಸ್ಲಾಂ ಗೆದ್ದು ದಾಖಲೆ ಬರೆಯಲು ನಡಾಲ್ ಮುಂದಾಗಿದ್ದಾರೆ.
ಆಸ್ಟ್ರೇಲಿಯನ್ ಓಪನ್ ನಲ್ಲಿ ಈಗಾಗಲೇ ಫೆಡರರ್ ಹಾಗೂ ಜೋಕೋವಿಚ್ ಕಾಣಿಸಿಕೊಂಡಿಲ್ಲ. ಹೀಗಾಗಿ ದಾಖಲೆ ಬರೆಯುವ ಅವಕಾಶ ನಡಾಲ್ ಗೆ ಹೆಚ್ಚಿದೆ. ನಡಾಲ್ ಈ ಟೂರ್ನಿಯ ಫೈನಲ್ ಪ್ರವೇಶ ಮಾಡಿದ್ದಾರೆ.
ನಡಾಲ್ ಸೆಮಿಫೈನಲ್ ನಲ್ಲಿ ಇಟಲಿಯ ಮ್ಯಾಟಿಯೊ ಬೆರಟ್ಟಿನಿ ವಿರುದ್ಧ 6-3, 6-2, 3-6, 6-3 ಅಂತರದಿಂದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ದಾರೆ. ಹೀಗಾಗಿ ಅತೀ ಹೆಚ್ಚು ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಆಟಗಾರ ಎಂಬ ದಾಖಲೆ ಬರೆಯಲು ನಡಾಲ್ ಗೆ ಒಂದೇ ಹೆಜ್ಜೆ ಉಳಿದಿದೆ.
ಗ್ರೀಕ್ ನ ಸ್ಟೆಫಾನೊಸ್ ಸಿಟ್ಸಿಪಾಸ್ ಹಾಗೂ ಡೇನಿಯಲ್ ಮೆಡ್ವೆಡೆವ್ ಮಧ್ಯೆ ಇನ್ನೊಂದು ಸೆಮಿಫೈನಲ್ ನಡೆಯಲಿದ್ದು, ಗೆದ್ದವರು ನಡಾಲ್ ಅವರನ್ನು ಫೈನಲ್ ನಲ್ಲಿ ಎದುರಿಸಲಿದ್ದಾರೆ.