ಹೆಣ್ಣುಮಕ್ಕಳಿಗೆ ತಾಯಿಯೇ ಪರದೈವ ಎಂಬ ಒಂದು ಕಲ್ಪನೆ ಜಗತ್ತಿನಲ್ಲಿದೆ. ಆದರೆ ಈ ಮಾತನ್ನು ಸುಳ್ಳಾಗಿಸಿದ್ದ ಇಬ್ಬರು ಬಾಲಕಿಯರು ಅಮೆರಿಕ ಮೂಲದ ತಮ್ಮ ತಾಯಿಯ ಜೊತೆ ಹೋಗಲು ನಿರಾಕರಿಸಿ ಭಾರತೀಯ ಮೂಲದ ತಂದೆಯ ಜೊತೆಗೆ ಇರುವುದಾಗಿದೆ ಸುಪ್ರೀಂ ಕೋರ್ಟ್ ಎದುರು ಹೇಳಿದ್ದಾರೆ.
ಹದಿನೈದು ದಿನಗಳ ಕಾಲ ದೇಶಕ್ಕೆ ಭೇಟಿ ನೀಡುವ ನೆಪದಲ್ಲಿ ಅವರ ತಂದೆಯು ಅಮೆರಿಕದಿಂದ ಭಾರತಕ್ಕೆ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕರೆದೊಯ್ದಿದ್ದಾರೆ ಎಂದು ಆರೋಪಿಸಿದ ವಿಚ್ಛೇದಿತ ಮಹಿಳೆಯು ಖಂಡಾಂತರ ಹೋರಾಟದಲ್ಲಿ ತೊಡಗಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠ ಹೇಳಿದೆ. ಸ್ವತಃ ಮಕ್ಕಳೇ ತನ್ನ ತಾಯಿಯೊಂದಿಗೆ ಹೋಗಲು ಇಷ್ಟ ವ್ಯಕ್ತಪಡಿಸದ ಕಾರಣ ನಾವು ಏನು ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ವಿಚ್ಛೇದಿತ ದಂಪತಿಗೆ ವಕೀಲರ ಉಪಸ್ಥಿತಿಯಿರಲಾಗದೇ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 18 ವರ್ಷಕ್ಕಿಂತ ಮೇಲ್ಪಟ್ಟ ಓರ್ವ ಯುವತಿ ಹಾಗೂ 16 ವರ್ಷ ವಯಸ್ಸಿನ ಹುಡುಗಿ ಜೊತೆ ಸಂವಾದ ನಡೆಸಿದ ನಂತರ ಸುಪ್ರೀಂ ಕೋರ್ಟ್ ನ್ಯಾಯಪೀಠ ಈ ಹೇಳಿಕೆಯನ್ನು ನೀಡಿದೆ.
ನಾವು ಕೆಲ ಕಾಲ ಮಕ್ಕಳೊಂದಿಗೆ ಸಂವಹನ ನಡೆಸಿದ್ದೇವೆ. ಆದರೂ ನಾವು ಅವರ ಸಂಪರ್ಕದ ಬಗ್ಗೆ 100 ಪ್ರತಿಶತ ತೃಪ್ತಿ ಹೊಂದಿಲ್ಲ. ಆದರೆ ಇವರ ಹೇಳಿಕೆಯ ಸಾರಾಂಶದ ಪ್ರಕಾರ ಮಕ್ಕಳು ತಾಯಿಯೊಂದಿಗೆ ಹೋಗಲು ಸಿದ್ಧರಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ನ್ಯಾಯಪೀಠ ಹೇಳಿದೆ.