2019ರಲ್ಲಿ ಚೀನಾದ ವುಹಾನ್ನಲ್ಲಿ ಮೊಟ್ಟ ಮೊದಲ ಬಾರಿಗೆ ಪತ್ತೆಯಾದ ಕೊರೊನಾ ಇದೀಗ ಇಡೀ ವಿಶ್ವದಲ್ಲಿ ತನ್ನ ರಣಕೇಕೆಯನ್ನು ಮುಂದುವರಿಸಿದೆ. ಇದೀಗ ಈ ವುಹಾನ್ನ ವಿಜ್ಞಾನಿಗಳು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಹೊಸ ರೀತಿಯ ಕೊರೊನಾ ವೈರಸ್ NeoCov ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಇದು ಅತ್ಯಂತ ವೇಗವಾಗಿ ಹರಡುವುದು ಮಾತ್ರವಲ್ಲದೇ ಹೆಚ್ಚಿನ ಸಾವುಗಳನ್ನು ವರದಿ ಮಾಡುತ್ತಿದೆ ಎಂದು ರಷ್ಯಾದ ಸುದ್ದಿ ವಾಹಿನಿಯು ವರದಿ ಮಾಡಿದೆ.
ಹೊಸ ಮಾದರಿಯ ಕೊರೊನಾ ವೈರಸ್ NeoCov ನಿಂದ ಸೋಂಕಿಗೆ ಒಳಗಾದ ಪ್ರತಿ ಮೂವರಲ್ಲಿ ಓರ್ವರು ಸಾವನ್ನಪ್ಪುವ ಸಾಧ್ಯತೆ ಅಧಿಕ ಎಂದು ವುಹಾನ್ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ವರದಿಗಳ ಪ್ರಕಾರ ಇದು ಹೊಸ ವೈರಸ್ ಏನಲ್ಲ. ಈ ವೈರಸ್ ನ್ನು 2012 ಹಾಗೂ 2015ರಲ್ಲಿ ಮಧ್ಯ ಪೂರ್ವ ದೇಶಗಳಲ್ಲಿ ಪತ್ತೆ ಮಾಡಲಾಗಿತ್ತು. ಇದು ಕೊರೊನಾ ವೈರಸ್ ಜೊತೆಯಲ್ಲಿ ಸಾಮ್ಯತೆಯನ್ನು ಹೊಂದಿದೆ.
NeoCoV ದಕ್ಷಿಣ ಆಫ್ರಿಕಾದಲ್ಲಿ ಬಾವಲಿಗಳಲ್ಲಿ ಪತ್ತೆಯಾಗಿದೆ ಮತ್ತು ಈ ಪ್ರಾಣಿಗಳಲ್ಲಿ ಮಾತ್ರ ಹರಡುತ್ತದೆ ಎಂದು ಭಾವಿಸಲಾಗಿತ್ತು. bioRxiv ವೆಬ್‌ಸೈಟ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನವು NeoCoV ಮತ್ತು ಅದರ ನಿಕಟ ಸಂಬಂಧಿ PDF-2180-CoV ಮಾನವರಿಗೆ ಸೋಂಕು ತರುತ್ತದೆ ಎಂದು ಹೇಳಿದೆ.
ವುಹಾನ್ ವಿಶ್ವವಿದ್ಯಾನಿಲಯ ಮತ್ತು ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್‌ನ ಇನ್‌ಸ್ಟಿಟ್ಯೂಟ್ ಆಫ್ ಬಯೋಫಿಸಿಕ್ಸ್‌ನ ಸಂಶೋಧಕರ ಪ್ರಕಾರ, ವೈರಸ್‌ಗೆ ಮಾನವ ಜೀವಕೋಶಗಳಿಗೆ ನುಸುಳಲು ಕೇವಲ ಒಂದು ರೂಪಾಂತರದ ಅಗತ್ಯವಿದೆ. ಕೊರೋನ ವೈರಸ್ ರೋಗಕಾರಕಕ್ಕಿಂತ ವಿಭಿನ್ನವಾಗಿ ಎಸಿಇ 2 ಗ್ರಾಹಕಕ್ಕೆ ಬಂಧಿಸುವ ಕಾರಣ ಕೊರೊನಾ ವೈರಸ್ ಅಪಾಯವನ್ನುಂಟು ಮಾಡುತ್ತದೆ ಎಂದು ಸಂಶೋಧನೆಗಳು ಹೇಳಿವೆ.