alex Certify BIG NEWS: ಕೋವಿಡ್ ಲಸಿಕೆಗಳಿಗೆ ಮಾರುಕಟ್ಟೆ ಅನುಮೋದನೆ; ಆಸ್ಪತ್ರೆ, ಕ್ಲಿನಿಕ್ ಗಳಲ್ಲೂ ಸಿಗಲಿದೆ ಕೋವ್ಯಾಕ್ಸಿನ್, ಕೋವಿಶೀಲ್ಡ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೋವಿಡ್ ಲಸಿಕೆಗಳಿಗೆ ಮಾರುಕಟ್ಟೆ ಅನುಮೋದನೆ; ಆಸ್ಪತ್ರೆ, ಕ್ಲಿನಿಕ್ ಗಳಲ್ಲೂ ಸಿಗಲಿದೆ ಕೋವ್ಯಾಕ್ಸಿನ್, ಕೋವಿಶೀಲ್ಡ್….!

ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯವು (ಡಿಸಿಜಿಐ) ಕೋವಿಶೀಲ್ಡ್‌ ಮತ್ತು ಕೊವ್ಯಾಕ್ಸಿನ್‌ಗೆ ಗುರುವಾರ ಮಾರುಕಟ್ಟೆ ಅನುಮೋದನೆ ನೀಡಿದೆ. “ಹೊಸ ಔಷಧಗಳು ಮತ್ತು ಕ್ಲಿನಿಕಲ್ ಪ್ರಯೋಗಗಳ ನಿಯಮ–2019″ರ ಅಡಿಯಲ್ಲಿ ಎರಡೂ ಲಸಿಕೆಗಳಿಗೆ ಅನುಮೋದನೆ ಲಭಿಸಿದೆ.

ಮಾರುಕಟ್ಟೆ ಅನುಮೋದನೆಯಿಂದ ಎರಡೂ ಲಸಿಕೆಗಳು ಜನರಿಗೆ ಎಲ್ಲೆಂದರಲ್ಲಿ ನೇರವಾಗಿ ಲಭ್ಯವಾಗುವುದಿಲ್ಲ. ಅವುಗಳನ್ನು ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳು ನೀಡಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಲಸಿಕಾ ಸಂಸ್ಥೆಗಳು ನಡೆಸುತ್ತಿರುವ ಕ್ಲಿನಿಕಲ್ ಪ್ರಯೋಗಗಳ ದತ್ತಾಂಶಗಳನ್ನು ಮಹಾನಿರ್ದೇಶನಾಲಯಕ್ಕೆ ಸಲ್ಲಿಸಬೇಕು. ಕೋವಿನ್‌ ಆಪ್ ನಲ್ಲಿ ಲಸಿಕೆ ಸರಬರಾಜನ್ನು ನಮೂದಿಸಬೇಕು, ಲಸಿಕಾಕರಣದ ನಂತರದ ಅಡ್ಡಪರಿಣಾಮಗಳ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಬೇಕು ಎಂಬ ಷರತ್ತಗಳನ್ನು ವಿಧಿಸಿ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ‌.

ಕೆಲವು ಷರತ್ತುಗಳನ್ನು ವಿಧಿಸಿ, ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ಗಳನ್ನು ವಯಸ್ಕರ ಬಳಕೆಗಾಗಿ ಮಾರುಕಟ್ಟೆ ಅನುಮೋದನೆ ನೀಡಬೇಕು ಎಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ಕೋವಿಡ್‌ ತಜ್ಞರ ಸಮಿತಿ ಇತ್ತೀಚೆಗೆ ಶಿಫಾರಸು ಮಾಡಿತ್ತು. ಇದನ್ನು ಆಧರಿಸಿ ಡಿಸಿಜಿಐ ಮಾರುಕಟ್ಟೆ ಅನುಮೋದನೆ ನೀಡಿದೆ.

ಈ ಹಿಂದೆ, ಬೆಲೆ ನಿಗದಿಯ ನಂತರ ಎರಡೂ ಲಸಿಕೆಗಳಿಗೆ ನಿಯಮಿತ ಮಾರುಕಟ್ಟೆ ಅನುಮೋದನೆಯನ್ನು DCGI ನೀಡುವ ನಿರೀಕ್ಷೆಯಿದೆ ಎಂದು ವರದಿಯಾಗಿತ್ತು. ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್‌ನ ಬೆಲೆಯನ್ನು ಪ್ರತಿ ಡೋಸ್‌ಗೆ 150ರೂ. ಹೆಚ್ಚುವರಿ ಶುಲ್ಕದೊಂದಿಗೆ 275ರೂ. ನಿಗದಿಪಡಿಸುವ ಸಾಧ್ಯತೆಯಿದೆ ಎಂದು ಪಿಟಿಐ ವರದಿ ಮಾಡಿದೆ. ಲಸಿಕೆಗಳನ್ನು ಕೈಗೆಟುಕುವಂತೆ ಮಾಡಿ ಬೆಲೆಯನ್ನು ಮಿತಿಗೊಳಿಸಲು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರಕ್ಕೆ (NPPA) ನಿರ್ದೇಶಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ‌.

ಸದ್ಯಕ್ಕೆ, ತೆರಿಗೆ ಸೇರಿಸಿ ಕೊವ್ಯಾಕ್ಸಿನ್‌ನ ಪ್ರತಿ ಡೋಸ್‌ಗೆ 1,200 ರೂ. ಮತ್ತು ಕೋವಿಶೀಲ್ಡ್ ನ ಬೆಲೆ 780ರೂ.ಗಳಿದೆ. ಎರಡೂ ಲಸಿಕೆಗಳು ದೇಶದಲ್ಲಿ ತುರ್ತು ಬಳಕೆಗೆ ಮಾತ್ರ ಅಧಿಕೃತವಾಗಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...