ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಬಹುನಿರೀಕ್ಷಿತ ಸ್ವದೇಶೀ ನಿರ್ಮಿತ ಸಣ್ಣ ಉಪಗ್ರಹ ಉಡಾವಣಾ ವಾಹನ (ಎಸ್ಎಸ್ಎಲ್ವಿ)ಏಪ್ರಿಲ್ನಲ್ಲಿ ತನ್ನ ಚೊಚ್ಚಲ ಅಭಿವೃದ್ಧಿ ಹಾರಾಟವನ್ನು ನಡೆಸಲಿದೆ ಎಂದು ಸಂಸ್ಥೆಯ ನೂತನ ಅಧ್ಯಕ್ಷ ಡಾ ಎಸ್ ಸೋಮನಾಥ್ ಮಂಗಳವಾರ ಕೇಂದ್ರ ಬಾಹ್ಯಾಕಾಶ ಇಲಾಖೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ಗೆ ತಿಳಿಸಿದ್ದಾರೆ.
ಡಾ ಸೋಮನಾಥ್ ಅವರು “ಏಪ್ರಿಲ್ 2022 ರಲ್ಲಿ ಎಸ್ಎಸ್ಎಲ್ವಿ-ಡಿ 1 ಮೈಕ್ರೋ ಸ್ಯಾಟ್” ಬಿಡುಗಡೆಯನ್ನು ಅಧಿಕೃತ ಮಾಹಿತಿಯೊಂದ ಮೂಲಕ ಪ್ರಸ್ತಾಪಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಭಿವೃದ್ಧಿಶೀಲ ರಾಷ್ಟ್ರಗಳ ಸಣ್ಣ ಉಪಗ್ರಹಗಳ ವಿಶ್ವವಿದ್ಯಾನಿಲಯಗಳು ಮತ್ತು ಖಾಸಗಿ ಸಂಸ್ಥೆಗಳ ಅಗತ್ಯವನ್ನು ಪೂರೈಸಲು ಇತ್ತೀಚಿನ ವರ್ಷಗಳಲ್ಲಿ ಹೊರಹೊಮ್ಮಿರುವ ಈ ವಾಹನಗಳು ಭೂಮಿಯ ಕೆಳ ಕಕ್ಷೆಗಳಿಗೆ ಸಣ್ಣ ಉಪಗ್ರಹಗಳ ಉಡಾವಣಾ ಮಾರುಕಟ್ಟೆ ಪ್ರವೇಶಿಸುವ ಗುರಿಯನ್ನು ಎಸ್ಎಸ್ಎಲ್ವಿ ಹೊಂದಿದೆ.
ಸಣ್ಣ ಉಪಗ್ರಹ ಉಡಾವಣೆಗಳು ಇಲ್ಲಿಯವರೆಗೆ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ನಲ್ಲಿ ದೊಡ್ಡ ಉಪಗ್ರಹ ಉಡಾವಣೆಗಳೊಂದಿಗೆ ಸವಾರಿಯನ್ನು ಅವಲಂಬಿಸಿದ್ದವು. ಇಂಥ 50 ಕ್ಕೂ ಹೆಚ್ಚು ಯಶಸ್ವಿ ಉಡಾವಣೆಗಳನ್ನು ಇಸ್ರೋದ ಕರ್ಮಯೋಗಿ ಪಿಎಸ್ಎಲ್ವಿ ಮಾಡಿದೆ. ಸಣ್ಣ ಉಪಗ್ರಹ ಉಡಾವಣೆಗಳು ಇಸ್ರೋ ದೊಡ್ಡ ಉಪಗ್ರಹಗಳ ಉಡಾವಣಾ ಒಪ್ಪಂದಗಳನ್ನು ಅಂತಿಮಗೊಳ್ಳುವುದನ್ನು ಅವಲಂಬಿಸಿವೆ.
2018 ರಿಂದ ತಿರುವನಂತಪುರಂನಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿದ್ದ ಅವಧಿಯಲ್ಲಿ ಎಸ್ಎಸ್ಎಲ್ವಿ ವಿನ್ಯಾಸ ಮತ್ತು ಅಭಿವೃದ್ಧಿಗೆ ಡಾ. ಸೋಮನಾಥ್ ಶ್ರಮಿಸುತ್ತಾ ಬಂದಿದ್ದಾರೆ. ಎಸ್ಎಸ್ಎಲ್ವಿಯ ಮೊದಲ ಹಾರಾಟವು ಜುಲೈ 2019 ರಲ್ಲಿ ಉಡಾವಣೆಯಾಗಬೇಕಿತ್ತು ಆದರೆ ಕೋವಿಡ್ ಹಾಗೂ ಇತರ ಸಮಸ್ಯೆಗಳ ಕಾಣದಿಂದ ಉಂಟಾದ ಹಿನ್ನಡೆಯಿಂದಾಗಿ ವಿಳಂಬವಾಗಿದೆ.
ಎಎಸ್ಎಲ್ವಿಗಳು ಗರಿಷ್ಠ 500 ಕೆಜಿ ತೂಕದ ಉಪಗ್ರಹಗಳನ್ನು ಕಡಿಮೆ ಕಕ್ಷೆಗೆ ಒಯ್ಯಬಲ್ಲವು. 1000 ಕೆಜಿಗಿಂತ ಹೆಚ್ಚಿನ ತೂಕದ ಉಪಗ್ರಹಗಳನ್ನು ಪಿಎಸ್ಎಲ್ವಿಯಿಂದಲೇ ಉಡಾವಣೆ ಮಾಡಬೇಕು.