ಕೇಂದ್ರದ ಚಿತಾವಣೆಯಿಂದ ಕಡಿಮೆಯಾಗುತ್ತಿದೆ ನನ್ನ ಫಾಲೋವರ್ಸ್ ಗಳ ಸಂಖ್ಯೆ ಎಂದ ರಾಹುಲ್….! ಸ್ಪಷ್ಟನೆ ನೀಡಿದ ಟ್ವಿಟ್ಟರ್ ಸಂಸ್ಥೆ | Kannada Dunia | Kannada News | Karnataka News | India News
ಡಿಸೆಂಬರ್ 27ರಂದು ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ ಅವರಿಗೆ ಪತ್ರ ಬರೆದಿದ್ದ ರಾಹುಲ್, ಸಾಮಾಜಿಕ ಜಾಲತಾಣ ವೇದಿಕೆಯು ನರೇಂದ್ರ ಮೋದಿ ಸರಕಾರದ ಒತ್ತಡದ ಅಡಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರಬಹುದು ಎಂದು ಆರೋಪಿಸಿದ್ದರು.
ನನ್ನ ಖಾತೆ ಪ್ರತಿ ತಿಂಗಳೂ ಸರಾಸರಿ 2.3 ಲಕ್ಷಕ್ಕೂ ಅಧಿಕ ಹೊಸ ಫಾಲೋವರ್ಗಳನ್ನು ಪಡೆದುಕೊಳ್ಳುತ್ತಿತ್ತು. ಈ ಸಂಖ್ಯೆ ಕೆಲವು ತಿಂಗಳಲ್ಲಿ 6.5 ಲಕ್ಷಕ್ಕೂ ತಲುಪಿತ್ತು. ಆದರೆ 2021ರ ಆಗಸ್ಟ್ನಿಂದ ಖಾತೆಯ ಹೊಸ ಫಾಲೋವರ್ಗಳ ಸಂಖ್ಯೆ ತಿಂಗಳಿಗೆ ಕೇವಲ 2,500ಕ್ಕೆ ಕುಸಿದಿದೆ. ಹಾಗೂ 19.5 ಮಿಲಿಯನ್ ಒಟ್ಟು ಫಾಲೋವರ್ಗಳ ಸಂಖ್ಯೆಯನ್ನು ವರ್ಚ್ಯುವಲ್ ಆಗಿ ತಡೆಹಿಡಿಯಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.