ಬಾಂಗ್ಲಾದಿಂದ ಬಂದು ಹಿಂದೂ ಆಗಿ ಭಾರತದಲ್ಲಿ ನೆಲಡಸಿದ್ದ ಮಹಿಳೆಯನ್ನ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂದಿತೆಯನ್ನ ರೋನಿಬೇಗಂ ಎಂದು ಗುರುತಿಸಲಾಗಿದೆ. ಬಾಂಗ್ಲಾದಿಂದ ವಲಸೆ ಬಂದ ಈ ಮುಸ್ಲಿಂ ಮಹಿಳೆ ಹಿಂದೂ ಆಗಿ ತನ್ನ ಇಡೀ ಜಾತಕ ಬದಲಾಯಿಸಿಕೊಂಡು ಹಲವು ವರ್ಷಗಳಿಂದ ಭಾರತದಲ್ಲೆ ನೆಲೆಸಿದ್ದಾಳೆ.
2006 -2007 ರಲ್ಲಿ ಅಕ್ರಮವಾಗಿ ಭಾರತದ ಗಡಿ ನುಸುಳಿದ್ದ ಮಹಿಳೆ, ಮುಂಬೈನಲ್ಲಿ ನಿತಿನ್ ಕುಮಾರ್ ಎನ್ನುವವರನ್ನ ಮದುವೆಯಾಗಿದ್ದಾಳೆ. ನಿತಿನ್ ಕುಮಾರ್ ನನ್ನು ಹಿಂದು ಸಂಪ್ರಾಯದಂತೆ ವಿವಾಹವಾಗಿ, ರೋನಿಬೇಗಂ ಅನ್ನೋ ತನ್ನ ಹೆಸ್ರನ್ನ, ಪಾಯಲ್ ಗೋಷ್ ಎಂದು ಮರು ನಾಮಕರಣ ಮಾಡಿಕೊಂಡಿದ್ದಾಳೆ. ನಂತರ ಅಕ್ರಮವಾಗಿ ಭಾರತೀಯ ಸಾರ್ವಭೌಮತ್ವ ಪಡೆದಿದ್ದಾಳೆ.
ರೋನಿಬೇಗಂ 2015ರಲ್ಲಿ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಟೈಲರಿಂಗ್ ಮಾಡಿಕೊಂಡಿದ್ದಳೆಂದು ಪೊಲೀಸರು ತಿಳಿಸಿದ್ದಾರೆ. ನಕಲಿ ದಾಖಲೆ ಕೊಟ್ಟು ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ಪಡೆದಿದ್ದಳು. ಅದೇ ನಕಲಿ ದಾಖಲೆಗಳನ್ನ ಬಳಸಿ, ಪಶ್ಚಿಮ ಬಂಗಾಳಕ್ಕೆ ಪ್ರಯಾಣ ಮಾಡುವಾಗ ಏರ್ ಪೋರ್ಟ್ ಅಧಿಕಾರಿಗಳು ರೋನಿಯ ಅಸಲಿಯತ್ತನ್ನ ಕಂಡುಹಿಡಿದ್ದಾರೆ. ತಕ್ಷಣ ಮಹಿಳೆಯನ್ನು ವಶಕ್ಕೆ ಪಡೆದ ಪಶ್ಚಿಮ ಬಂಗಾಳದ ಅಧಿಕಾರಿಗಳು, FRRO ಸೂಚನೆ ಮೇರೆಗೆ ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಒಂದುವರೆ ವರ್ಷದ ನಂತರ ರೋನಿ ಬೇಗಂ ಅವರನ್ನ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದು, ಈಕೆಗೆ ಅಕ್ರಮವಾಗಿ ದಾಖಲಾತಿ ಮಾಡಿಕೊಟ್ಟವರ ತಲಾಷ್ ನಡೆಸುತ್ತಿದ್ದಾರೆ.