ಕೆಲವು ದಿನಗಳ ಹಿಂದೆ, ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರರೊಬ್ಬರು ಕಡಲೆಕಾಯಿ ಮಾರಾಟ ಮಾಡಲು ಸೂಪರ್ ಆಗಿರುವ ಕ್ಯಾಚಿ ಜಿಂಗಲ್ ಹಾಡೊಂದನ್ನು ಸಂಯೋಜಿಸಿ ಸಾಮಾಜಿಕ ಮಾಧ್ಯಮದಲ್ಲಿ ಭಯಂಕರ ವೈರಲ್ ಆಗಿದ್ದರು.
ಆನ್ಲೈನ್ನಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ವಿಡಿಯೊವೊಂದರಲ್ಲಿ, ಭುವನ್ ಬಡ್ಯಾಕರ್ ಎಂಬ ಈ ವ್ಯಕ್ತಿ ತಮ್ಮಿಂದ ಕಡಲೇಕಾಯಿ ಖರೀದಿಸಲು ಗ್ರಾಹಕರನ್ನು ಆಕರ್ಷಿಸಲು ‘ಬದಾಮ್ ಬದಮ್ ಕಚಾ ಬದಮ್’ ಎಂದು ಹಾಡುತ್ತಿರುವುದು ನೆಟ್ಟಿಗರಿಗೆ ಬಲು ಇಷ್ಟವಾಗಿಬಿಟ್ಟಿದೆ.
ಈ ಹಾಡು ಈಗ ಇನ್ಸ್ಟಾಗ್ರಾಂ, ಫೇಸ್ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗಿದೆ. ಈ ಬೆಂಗಾಲಿ ಹಾಡು ಅದೆಷ್ಟು ವೈರಲ್ ಆಗಿದೆ ಎಂದರೆ ಬೇರೆ ದೇಶಗಳ ಜನರು ಸಹ ಈಗ ಅದೇ ಹಾಡಿಗೆ ಡ್ಯಾನ್ಸ್ ವಿಡಿಯೊಗಳನ್ನು ಸೃಷ್ಟಿಸಿಕೊಂಡು ಹಂಚಿಕೊಳ್ಳುತ್ತಿದ್ದಾರೆ.
ಕೊರಿಯನ್ ಅಮ್ಮ-ಮಗಳ ಜೋಡಿಯ ನಂತರ, ಇದೀಗ ಟಾಂಜೇನಿಯಾದ ಕಂಟೆಂಟ್ ಕ್ರಿಯೇಟರ್ ಕಿಲಿ ಪೌಲ್ ಕೂಡ ಈ ಆಕರ್ಷಕ ಹಾಡಿಗೆ ಸ್ಟೆಪ್ ಹಾಕುತ್ತಿರುವುದು ಕಂಡುಬಂದಿದೆ.
ಸಾಮಾನ್ಯವಾಗಿ ಬಾಲಿವುಡ್ನ ಜನಪ್ರಿಯ ಹಾಡುಗಳಿಗೆ ಲಿಪ್ ಸಿಂಕ್ ಮಾಡಿ ನೃತ್ಯ ಮಾಡುವ ಮೂಲಕ ಕಿಲಿ ಭಾರತದಲ್ಲಿ ವೈರಲ್ ಆಗಿದ್ದಾರೆ. ಈ ವೇಳೆ ಕಿಲಿ ತಮ್ಮ ಸಾಂಪ್ರದಾಯಿಕ ಮಸಾಯಿ ಉಡುಪುಗಳನ್ನು ಧರಿಸಿ ಈ ವೈರಲ್ ಬೆಂಗಾಲಿ ಹಾಡಿಗೆ ನೃತ್ಯ ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ.
“ಕಚಾ ಬಾದಮ್, ನನ್ನ ಕ್ಯಾಮರಾ ಮ್ಯಾನ್ ಇಂದು ಭಯಾನಕವಾಗಿದ್ದ, ಹೇಗಾದರೂ ನೀವು ಅದನ್ನು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ,” ಎಂದು ಕಿಲಿ ತಮ್ಮ ವಿಡಿಯೊಗೆ ಶೀರ್ಷಿಕೆ ನೀಡಿದ್ದಾರೆ.
https://youtu.be/L5_K5Hj6-dc