ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಬ್ಯಾಂಕ್ ವಿವರಗಳು ಮತ್ತು ಹಣಕಾಸಿನ ಸಂಬಂಧ ಇತರ ರುಜುವಾತುಗಳನ್ನು (ವಿವರಗಳನ್ನು) ಅಪರಿಚಿತರಿಗೆ ನೀಡಬಾರದೆಂದು ಹಂಚಿಕೊಳ್ಳುವ ಮೂಲಕ ಸ್ಕ್ಯಾಮರ್‌ಗಳ (ವಂಚಕರ) ಫೋನ್ ಕರೆಗಳಿಗೆ ಬಲಿಯಾಗುತ್ತಾರೆ ಎಂಬುದು ಸತ್ಯ.
ಹಿರಿಯ ನಾಗರಿಕರು ಫಿಶಿಂಗ್ ಮತ್ತು ಇತರ ರೀತಿಯ ಹಗರಣಗಳ ಬಗ್ಗೆ ಜ್ಞಾನದ ಕೊರತೆಯಿಂದಾಗಿ ಇಂತಹ ವಂಚನೆಗಳಿಗೆ ಹೆಚ್ಚು ಒಳಗಾಗುತ್ತಾರೆ. ಆದಾಗ್ಯೂ, ನೈಜ ವರ್ತಕರು ಮತ್ತು ಹಗರಣಗಾರರ ನಡುವೆ ವ್ಯತ್ಯಾಸವನ್ನು ಗುರುತಿಸಬಲ್ಲ ಸಾಕಷ್ಟು ಬುದ್ಧಿವಂತರಾಗಿರುವ ಅನೇಕ ಹಿರಿಯ ಜನರು ನಮ್ಮ ನಡುವೆ ಇದ್ದಾರೆ.
ನ್ಯೂಯಾರ್ಕ್‌ನ 73 ವರ್ಷದ ಮಹಿಳೆಯೊಬ್ಬರು ತನ್ನಿಂದ $8,000 (5.98 ಲಕ್ಷ ರೂ.) ಕದಿಯಲು ಯತ್ನಿಸಿದ ವಂಚಕರನ್ನು ತನ್ನ ಚತುರತೆಯಿಂದ ಮೀರಿ ನಿಂತ ಕಥೆ ಇದು.
ವರದಿಗಳ ಪ್ರಕಾರ, ಜೀನ್‌ಗೆ ಕೆಲವು ಅನಾಮಿಕರಿಂದ ಕರೆ ಬಂದಿದ್ದು, ಆಕೆಯ ಮೊಮ್ಮಗ ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದಕ್ಕಾಗಿ ಬಂಧಿಯಾಗಿದ್ದಾನೆ ಮತ್ತು ಜಾಮೀನು ಪಡೆಯಲು ಹಣದ ಅಗತ್ಯವಿದೆ ಎಂದು ಹೇಳಿದ್ದಾರೆ. ಈ ಕರೆಗೆ ಆಘಾತದಿಂದ ಪ್ರತಿಕ್ರಿಯಿಸಿ ಹಣವನ್ನು ವರ್ಗಾಯಿಸುವ ಬದಲು, ಜೀನ್ ಸುಳ್ಳಿನ ಬಲೆಗೆ ಬೀಳದೇ ಕಾದು ನೋಡಲು ನಿರ್ಧರಿಸಿದರು. ಅಜ್ಜಿಗೆ ತನ್ನ ಮೊಮ್ಮಗ ಕಾರು ಓಡಿಸದ ಕಾರಣ, ಇದು ಹಗರಣ ಎಂದು ಬೇಗನೆ ಅರಿವಾಗಿ, ಪೊಲೀಸರಿಗೆ ಕರೆ ಮಾಡಿದ್ದಾರೆ.
ಅಜ್ಜಿಗೆ ಕರೆ ಮಾಡಿದ ಸಮಯದಲ್ಲಿ, ಒಬ್ಬ ವ್ಯಕ್ತಿ ಜೀನ್ ರ ಮೊಮ್ಮಗನಿಗೆ ಬಾಂಡ್‌ಮ್ಯಾನ್ ಮತ್ತು ಇನ್ನೊಬ್ಬ ವಕೀಲನಂತೆ ನಟಿಸಿದ್ದಾರೆ. ತಮ್ಮ ಮೊಮ್ಮಗನಿಗೆ ಜಾಮೀನು ನೀಡಲು $8,000 ಅಗತ್ಯವಿದೆ ಎಂದು ವಂಚಕರು ಪಟ್ಟಿ ಕೊಟ್ಟಿದ್ದಾರೆ.
ಎಲ್ಲವನ್ನೂ ಶಾಂತವಾಗಿಯೇ ನಿರ್ವಹಿಸುತ್ತಾ ಸಾಗಿದ ಜೀನ್ ಹಣವು ತನ್ನ ಮನೆಯಲ್ಲಿದೆ ಹಾಗೂ ಅದನ್ನು ಬಂದು ಸಂಗ್ರಹಿಸಲು ಹೇಳಿದ್ದಾರೆ ಮತ್ತು ವಂಚಕರು ಈ ಹಳ್ಳಕ್ಕೆ ಸರಿಯಾಗಿ ಬಿದ್ದಿದ್ದಾರೆ.
“ಅವನು ನಿಜವಾದ ಮೋಸಗಾರ ಎಂದು ನನಗೆ ತಿಳಿದಿತ್ತು. ಅವನು ನನ್ನನ್ನು ಮೋಸ ಮಾಡಲಾರ ಎಂದೂ ಸಹ ನನಗೆ ತಿಳಿದಿತ್ತು. ಅವನು ನನ್ನನ್ನು ‘ಅಜ್ಜಿ’ ಎಂದು ಕರೆಯಲು ಪ್ರಾರಂಭಿಸುತ್ತಾನೆ, ಮತ್ತು ನನಗೆ ವಾಹನ ಓಡಿಸುವ ಮೊಮ್ಮಗ ಇಲ್ಲ, ಹಾಗಾಗಿ ಅದು ಒಂದು ವಂಚನೆಯ ಜಾಲ ಎಂದು ನನಗೆ ತಿಳಿದಿತ್ತು,”ಎಂದು ಜೀನ್ CBS2 ಗೆ ತಿಳಿಸಿದ್ದಾರೆ.
ಬಾಂಡ್‌ಮ್ಯಾನ್‌ನಂತೆ ನಟಿಸುವ ವ್ಯಕ್ತಿ ತನ್ನ ನಿವಾಸಕ್ಕೆ ಬಂದಾಗ, ಜೀನ್ ಕಾಗದದ ಟವೆಲ್‌ಗಳಿಂದ ತುಂಬಿದ ಲಕೋಟೆಯನ್ನು ಅವನಿಗೆ ಕೊಟ್ಟಿದ್ದಾರೆ. ಆ ಹೊತ್ತಿಗೆ, ನಸ್ಸೌ ಕೌಂಟಿ ಪೊಲೀಸ್ ಇಲಾಖೆಯ ಪೊಲೀಸ್ ಅಧಿಕಾರಿಗಳು ನಿವಾಸಕ್ಕೆ ಆಗಮಿಸಿ ವಂಚಕನನ್ನು ಹಿಡಿದಿದ್ದಾರೆ.
ನಸ್ಸೌ ಕೌಂಟಿ ಪೊಲೀಸ್ ಇಲಾಖೆಯು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ, ಅಧಿಕಾರಿಯೊಬ್ಬರು ವಂಚಕನನ್ನು ನಿವಾಸದಿಂದ ಹೊರಡುವಾಗ ಹುಲ್ಲುಹಾಸಿನ ಮೇಲೆ ಅದುಮಿ ಹಿಡಿದಿರುವುದನ್ನು ತೋರಿಸುತ್ತದೆ.
ಅಪರಿಚಿತ ವ್ಯಕ್ತಿಗಳ ಗುಂಪಿನಿಂದ ಬಂದ ಹಲವು ಫೋನ್ ಕರೆಗಳು ಈ ಹಗರಣದಲ್ಲಿ ಭಾಗಿಯಾಗಿವೆ ಎಂದು ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.