alex Certify ಅಂಡರ್ ‌ಕವರ್‌ ಪೊಲೀಸನಿಂದ ವಂಚನೆಗೀಡಾದ ಮಹಿಳೆಗೆ ಎರಡು ಕೋಟಿ ರೂ. ಪರಿಹಾರ ನೀಡಲು ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಡರ್ ‌ಕವರ್‌ ಪೊಲೀಸನಿಂದ ವಂಚನೆಗೀಡಾದ ಮಹಿಳೆಗೆ ಎರಡು ಕೋಟಿ ರೂ. ಪರಿಹಾರ ನೀಡಲು ಆದೇಶ

ಮಫ್ತಿಯಲ್ಲಿರುವ (ಅಂಡರ್‌ಕವರ್‌) ಪೊಲೀಸ್ ಅಧಿಕಾರಿಯೊಂದಿಗೆ ಎರಡು ವರ್ಷಗಳ ನಿಕಟ ಸಂಬಂಧದ ಸೋಗಿನಲ್ಲಿ ವಂಚನೆಗೀಡಾಗಿದ್ದಾರೆ ಎಂದು ತನಿಖೆ ಬಳಿಕ ತಿಳಿದ ಬಂದ ಕಾರಣಕ್ಕೆ ಪರಿಸರ ಕಾರ್ಯಕರ್ತೆಯೊಬ್ಬರಿಗೆ 229,000 ಪೌಂಡ್ (ರೂ. 2.3 ಕೋಟಿ) ಪರಿಹಾರವನ್ನು ನೀಡಲಾಯಿತು.

ಪರಿಸರವಾದಿ ಪ್ರಚಾರಕರಾದ ಕೇಟ್ ವಿಲ್ಸನ್ ಅವರು 2003 ರಲ್ಲಿ ಮಾರ್ಕ್ ಕೆನಡಿ ಅವರನ್ನು ಮೊದಲು ಭೇಟಿಯಾದ ನಂತರ ಅವರೊಂದಿಗೆ ಸಂಬಂಧವನ್ನು ಬೆಳೆಸಿದ್ದರು.

ಬಾದಾಮಿ ನೆನೆಸದೆ ತಿಂದರೆ ಏನಾಗುತ್ತೆ ಗೊತ್ತಾ…..?

ಮಾರ್ಕ್ ಕೆನಡಿಯನ್ನು ಸಹ ಕಾರ್ಯಕರ್ತ ಎಂದು ನಂಬಿದ ಕೇಟ್ 2005ರಲ್ಲಿ ಸ್ಪೇನ್‌ಗೆ ತೆರಳಿದಾಗ ಬೇರ್ಪಡುವ ಮೊದಲು ಅವನೊಂದಿಗೆ ಪ್ರೇಮ ಸಂಬಂಧವನ್ನು ಬೆಳೆಸಿಕೊಂಡಿದ್ದರು.

ಮೆಟ್ರೋಪಾಲಿಟನ್ ಪೊಲೀಸ್‌ನ ನ್ಯಾಷನಲ್ ಪಬ್ಲಿಕ್ ಆರ್ಡರ್ ಇಂಟೆಲಿಜೆನ್ಸ್ ಯುನಿಟ್ (ಎನ್‌ಪಿಐಒಯು) ಭಾಗವಾಗಿ ಕಾರ್ಯಕರ್ತರ ಮೇಲೆ ಕಣ್ಣಿಡಲು ಕೆನಡಿಯನ್ನು ಬ್ರಿಟನ್‌ಗೆ ಕಳುಹಿಸಲಾಗಿದೆ ಎಂದು ಅರಿಯಲು ಕೇಟ್‌ಗೆ ಸುಮಾರು ಎಂಟು ವರ್ಷಗಳು ಬೇಕಾಯಿತು. ಅಕೆಯೊಂದಿಗೆ ಡೇಟಿಂಗ್ ಮಾಡುವಾಗ ಅವನು ತನ್ನ ನಿಜವಾದ ಹೆಸರನ್ನು ಸಹ ಬಳಸುತ್ತಿರಲಿಲ್ಲ. ಆತ ‘ಮಾರ್ಕ್ ಸ್ಟೋನ್’ ಎಂಬ ಉಪನಾಮದಿಂದ ಗುರುತಿಸಿಕೊಂಡಿದ್ದಾನೆ.

ಕೇಟ್‌ಗೆ ಇನ್ನಷ್ಟು ಆಘಾತ ನೀಡುವ ಬೆಳವಣಿಗೆಯೊಂದರಲ್ಲಿ, ಕೆನಡಿ ವಿವಾಹವಾಗಿದ್ದು, ತನ್ನ ರಹಸ್ಯ ಕೆಲಸದ ಸಮಯದಲ್ಲಿ ಆತ ಇನ್ನೂ 10 ಮಹಿಳೆಯರೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಿದ್ದರು ಎಂದು ಹೆಚ್ಚಿನ ತನಿಖೆಯಿಂದ ತಿಳಿದುಬಂದಿದೆ.

ತಾನು ಮೋಸ ಹೋಗಿದ್ದೇನೆ ಎಂದು ತಿಳಿದಿದ್ದ ಕೇಟ್, ಕೆನಡಿ ಮತ್ತು ಎರಡು ವರ್ಷಗಳ ಕಾಲ ಅವನೊಂದಿಗೆ ಲೈಂಗಿಕ ಸಂಬಂಧದಲ್ಲಿ ತಾನು ಹೇಗೆ ಮೋಸ ಹೋದೆ ಎಂಬ ಸತ್ಯವನ್ನು ಹುಡುಕಲು ಒಂದು ದಶಕದ ಅವಧಿಯ ಪರಿಶ್ರಮವನ್ನೇ ಪಟ್ಟಿದ್ದಾರೆ.

ಬಿಬಿಸಿ ನ್ಯೂಸ್ ವರದಿಯ ಪ್ರಕಾರ, ಜನವರಿ 24 ರಂದು, ಕೇಟ್‌ಗೆ ಇನ್ವೆಸ್ಟಿಗೇಟರಿ ಪವರ್ಸ್ ಟ್ರಿಬ್ಯೂನಲ್ (IPT) ಮೆಟ್ ಮತ್ತು ರಾಷ್ಟ್ರೀಯ ಪೊಲೀಸ್ ಮುಖ್ಯಸ್ಥರ ಕೌನ್ಸಿಲ್‌ಗೆ (NPCC) £ 229,471.96 ವರೆಗೆ ಪಾವತಿಸಲು ಆದೇಶಿಸಿದ ನಂತರ ಕೇಟ್ ತನ್ನ ಪರಿಹಾರವನ್ನು ಗೆದ್ದಳು.

ಪ್ರಕರಣವು ‘ಅತ್ಯಂತ ಮೂಲಭೂತ ಹಂತಗಳಲ್ಲಿಯೇ ಗೊಂದಲಮಯ ಮತ್ತು ಶೋಚನೀಯ ವೈಫಲ್ಯಗಳನ್ನು’ ಬಹಿರಂಗಪಡಿಸಿದೆ ಎಂದು ಸೆಪ್ಟೆಂಬರ್‌ 2021ರಲ್ಲಿ ತನಿಖೆಯ ಆಲಿಕೆ ನಡೆಸುತ್ತಿದ್ದ ಮೂವರು ನ್ಯಾಯಾಧೀಶರು ತಿಳಿಸಿದ್ದರು. ಕೆನಡಿ ವಿಲ್ಸನ್ ಅವರನ್ನು ಸಂಬಂಧದ ಹೆಸರಿನಲ್ಲಿ ವಂಚಿಸುವ ಮೂಲಕ “ತೀವ್ರವಾಗಿ ಆಕೆಯನ್ನು ಅವಹೇಳನಗೊಳಿಸಿದ್ದಾರೆ, ಅವಮಾನಿಸಿದ್ದಾರೆ,” ಎಂದು ನ್ಯಾಯಾಧೀಶರು ಕಂಡುಕೊಂಡರು.

ಇಬ್ಬರ ನಡುವಿನ ಸಂಬಂಧವು ನವೆಂಬರ್ 2003 ರಿಂದ ಫೆಬ್ರವರಿ 2005ರ ನಡುವೆ ಇತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...