alex Certify ಧನುಷ್-ಐಶ್ವರ್ಯಾ ಜೋಡಿಯನ್ನು ಒಂದು ಮಾಡಲು ಪಣತೊಟ್ಟ ಸೂಪರ್ ಸ್ಟಾರ್ ರಜನಿಕಾಂತ್…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧನುಷ್-ಐಶ್ವರ್ಯಾ ಜೋಡಿಯನ್ನು ಒಂದು ಮಾಡಲು ಪಣತೊಟ್ಟ ಸೂಪರ್ ಸ್ಟಾರ್ ರಜನಿಕಾಂತ್…..?

Rajinikanth is urgently trying to save daughter Aishwaryaa and Dhanush's  marriage, Entertainment News | wionews.comಪರದೆಯ ಮೇಲೆ ಎಂತಾ ಸಮಸ್ಯೆ ಬಂದರು, ಯಾವುದೇ ಗುರಿಯನ್ನ ಸುಲಭವಾಗಿ ಸಾಧಿಸುವ ಸೂಪರ್ ಸ್ಟಾರ್ ರಜನಿಕಾಂತ್ ನಿಜ ಜೀವನದಲ್ಲು ಇಂತದ್ದೇ ಮಿಷನ್‌ಗೆ ಮುಂದಾಗಿದ್ದಾರೆ‌. ಧನುಷ್ ಅವ್ರೊಂದಿಗಿನ ದೀರ್ಘಕಾಲದ ದಾಂಪತ್ಯಕ್ಕೆ ಅಂತ್ಯ ಹಾಡಿರುವ ತಮ್ಮ ಮಗಳ ನಿರ್ಧಾರದಿಂದ ಬೇಸರಗೊಂಡಿರುವ ರಜನಿ ಇಬ್ಬರ ಜೋಡಿಯನ್ನ ಒಂದಾಗಿಸಲು ಪಣತೊಟ್ಟಿದ್ದಾರೆಂದು ವೈಯಾನ್ ನ್ಯೂಸ್ ವರದಿ ಮಾಡಿದೆ.‌

ಹೌದು, ಈ ತಿಂಗಳ ಆರಂಭದಲ್ಲಿ ಐಶ್ವರ್ಯಾ ಹಾಗೂ ಧನುಷ್ ತಮ್ಮ ದಾಂಪತ್ಯ ಜೀವನದಿಂದ ಪ್ರತ್ಯೇಕಗೊಳ್ಳುತ್ತಿದ್ದೇವೆ ಎಂದು ಸಾರ್ವಜನಿಕವಾಗಿ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಘೋಷಿಸಿದ್ದಾರೆ. ಅಂದಿನಿಂದ ಇವರ ಅಭಿಮಾನಿಗಳು ಸಹ ಶಾಕ್ ನಲ್ಲಿದ್ದಾರೆ. ಸೂಪರ್ ಸ್ಟಾರ್ ಪರಿಸ್ಥಿತಿ ಕೂಡ ಹೀಗೆ ಇದೆಯಂತೆ. ಮುದ್ದು ಮಗಳ ನಿರ್ಧಾರಕ್ಕೆ ರಜನಿ ಬೇಸರಗೊಂಡಿದ್ದಾರೆ. ತಮ್ಮ ಮಗಳ ಸಂಸಾರದ ಬಿರುಕನ್ನು ಒಪ್ಪಿಕೊಳ್ಳದ ಅವರು, ಇದು ತಾತ್ಕಾಲಿಕ ನಿರ್ಧಾರ ಎಂದು ಪ್ರತಿಪಾದಿಸುತ್ತಿದ್ದಾರೆ. ಜೊತೆಗೆ ಐಶ್ವರ್ಯಾ ಅವರ ಬಳಿ ಅವರ ಸಂಸಾರ ಸರಿಪಡಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ ಎಂದು ವರದಿಯಾಗಿದೆ‌.

ರಜನಿಕಾಂತ್ ಮಾತ್ರವಲ್ಲ, ಐಶ್ವರ್ಯಾ ಮತ್ತು ಧನುಷ್ ಇಬ್ಬರ ಕುಟುಂಬದವರು ಈ ದಂಪತಿಯನ್ನು ರಾಜಿ ಮಾಡಿಕೊಳ್ಳುವಂತೆ ಒತ್ತಡ ಹೇರುತ್ತಿವೆ. ಇವರಿಬ್ಬರ ನಡುವೆ ಜಗಳ ಹಾಗೂ ಭಿನ್ನಾಭಿಪ್ರಾಯ ಇದೆ ಮೊದಲಲ್ಲಾ.‌ ಈ ಹಿಂದೆಯು ಈ ದಂಪತಿ ಆಗಾಗ ಜಗಳವಾಡಿಕೊಂಡಿದ್ದಾರೆ‌. ಆದರೆ ರಜನಿಕಾಂತ್ ಪ್ರತಿಬಾರಿ‌ ಇವರಿಬ್ಬರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಾರಿಯೂ ಅವರು ಯಶಸ್ವಿಯಾಗುತ್ತಾರಾ? ಅನ್ನೋದೆ ಸಧ್ಯಕ್ಕಿರುವ ಪ್ತಶ್ನೆ.‌

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...