ಹೃತಿಕ್ ರೋಷನ್ ಮತ್ತು ಕರೀನಾ ಕಪೂರ್ ಖಾನ್ ಜೋಡಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಕಭಿ ಖುಷಿ ಕಭಿ ಗಮ್, ಮೇ ಪ್ರೇಮ್ ಕಿ ದಿವಾನಿ ಹೂಂ ಚಿತ್ರದಲ್ಲಿ ಮೋಡಿ ಮಾಡಿದ್ದ ಈ ಜೋಡಿಯನ್ನ ಮತ್ತೆ ದೊಡ್ಡ ಪರದೆ ಮೇಲೆ ಒಟ್ಟಿಗೆ ಕರೆತರಲು ಮಾತುಕತೆ ನಡೆಯುತ್ತಿದೆ ಎಂದು ಬಾಲಿವುಡ್ನಲ್ಲಿ ಗಾಸಿಪ್ ಶುರುವಾಗಿದೆ. ಹೃತಿಕ್ ಮತ್ತು ಕರೀನಾ ಅವರ ಕೆಮಿಸ್ಟ್ರಿ ಅಂದ್ರೆ ಮ್ಯಾಜಿಕ್ ಅನ್ನೋ ಅಭಿಮಾನಿಗಳು ಮತ್ತೊಮ್ಮೆ ಇವರಿಬ್ಬರ ಜೋಡಿಯನ್ನ ಕಣ್ತುಂಬಿಕೊಳ್ಳಬಹುದು ಎಂದು ಸುದ್ದಿಯಾಗುತ್ತಿದೆ.
ಹೃತಿಕ್ ಮತ್ತು ಬೆಬೊ ಒಟ್ಟಿಗೆ ನಟಿಸಬಹುದು ಎಂದು ಬಾಲಿವುಡ್ಲೈಫ್ ವರದಿ ಮಾಡಿದೆ. ಹೃತಿಕ್ ಮತ್ತು ಕರೀನಾ ಇಬ್ಬರನ್ನು ಒಟ್ಟಿಗೆ ನಟಿಸಲು ಪ್ರಸಿದ್ಧ ಚಲನಚಿತ್ರ ನಿರ್ಮಾಪಕರೊಬ್ಬರು ಅಪ್ರೋಚ್ ಮಾಡಿದ್ದಾರಂತೆ. ಈ ಚಿತ್ರವನ್ನು ಜಂಗ್ಲೀ ಪಿಕ್ಚರ್ಸ್ ನಿರ್ಮಿಸಲಿದೆ. ಚಿತ್ರದ ಶೀರ್ಷಿಕೆ ಕೂಡ ಅಂತಿಮವಾಗಿದ್ದು ಉಲಜ್ ಎಂದು ಹೆಸರಿಸಲಾಗಿದೆ.
ಚಿತ್ರವು ಆರಂಭಿಕ ಪ್ರಕ್ರಿಯೆಯಲ್ಲಿದೆ. ವಾಸ್ತವವಾಗಿ, ಇನ್ನು ಕೆಲವೇ ದಿನಗಳಲ್ಲಿ ಚಿತ್ರದ ನಿರ್ಮಾಪಕರು ಕರೀನಾಳನ್ನು ಭೇಟಿಯಾಗಲಿದ್ದಾರೆ. ಅದೇ ವೇಳೆ ಸ್ಕ್ರಿಪ್ಟ್ ರೀಡಿಂಗ್ ಸೆಷನ್ ನಡೆಯಲಿದೆ. ಸ್ಕ್ರಿಪ್ಟ್ ಗೆ ಕರೀನಾ ಓಕೆ ಎಂದರೆ ಎಲ್ಲವು ಅಂತಿಮವಾಗಲಿದೆ. ಇತ್ತ ಹೃತಿಕ್ ಇನ್ನೂ ಈ ಚಿತ್ರಕ್ಕೆ ಅನುಮೋದನೆ ನೀಡಿಲ್ಲ ಮತ್ತು ಅದು ಅವರ ಡೇಟ್ಸ್ ಮೇಲೆ ಅವಲಂಬಿತವಾಗಿರುತ್ತದೆ. ಈ ಇಬ್ಬರು ಸ್ಟಾರ್ಗಳು ‘ಹೌದು’ ಎಂದು ಹೇಳಿದರೆ, ನಿರ್ಮಾಪಕರು ಈ ಮ್ಯಾಜಿಕಲ್ ಜೋಡಿಯನ್ನ ಅದ್ಭುತವಾಗಿ ಪ್ರೆಸೆಂಟ್ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಚಿತ್ರದ ಬಜೆಟ್ ಬಗ್ಗೆಯೂ ಮಾಹಿತಿ ದೊರಕಿದ್ದು, ಇದು ದೊಡ್ಡ-ಬಜೆಟ್ ಚಿತ್ರವಾಗಲಿದೆ ಮತ್ತು ಹೆಚ್ಚಿನ ಶೂಟಿಂಗ್ ಮುಂಬೈನಲ್ಲಿ ನಡೆಯಲಿದೆ. ಆದರೆ, ಇನ್ನು ಯಾವುದೂ ಫೈನಲ್ ಆಗಿಲ್ಲ. ಹೃತಿಕ್ ಮತ್ತು ಕರೀನಾ ಕೊನೆಯ ಬಾರಿಗೆ 2003 ರಲ್ಲಿ ಬಿಡುಗಡೆಯಾದ ಮೇನ್ ಪ್ರೇಮ್ ಕಿ ದೀವಾನಿ ಹೂಂ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.