ರೈಲ್ವೆ ಇಲಾಖೆಯಲ್ಲಿ ಹುದ್ದೆಯನ್ನು ಹೊಂದಲು ನಿರೀಕ್ಷಿಸುವ ಆಕಾಂಕ್ಷಿಗಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದರೆ ಅಂತವರಿಗೆ ರೈಲ್ವೆ ಉದ್ಯೋಗವನ್ನು ಪಡೆಯುವುದರಿಂದ ಜೀವಮಾನದ ನಿಷೇಧವನ್ನು ಎದುರಿಸಬೇಕಾಗುತ್ತೆ ಎಂದು ಕೇಂದ್ರ ರೈಲ್ವೆ ಸಚಿವಾಲಯ ಎಚ್ಚರಿಕೆ ನೀಡಿದೆ.
ಈ ಸಂಬಂಧ ಸೂಚನೆಯನ್ನು ಹೊರಡಿಸಿರುವ ಕೇಂದ್ರ ರೈಲ್ವೆ ಸಚಿವಾಲಯ ರೈಲ್ವೆ ಉದ್ಯೋಗಾಂಕ್ಷಿಗಳು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವುದು ಕಂಡುಬಂದರೆ ಅಂತವರಿಗೆ ರೈಲ್ವೆ ಉದ್ಯೋಗ ಪಡೆಯುವುದರಿಂದ ಜೀವಮಾನದ ನಿಷೇಧ ವಿಧಿಸಲಾಗುತ್ತದೆ ಎಂದು ಸೂಚನೆ ಹೊರಡಿಸಿದೆ.
ರೈಲ್ವೆ ಉದ್ಯೋಗಾಕಾಂಕ್ಷಿಗಳು ರೈಲ್ವೆ ಹಳಿಗಳ ಮೇಲೆ ಪ್ರತಿಭಟನೆ, ರೈಲು ಕಾರ್ಯಾಚರಣೆಗೆ ಅಡ್ಡಿ, ರೈಲ್ವೆ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವುದು ಮುಂತಾದ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಗಮನಕ್ಕೆ ಬಂದಿದೆ ಎಂದು ರೈಲ್ವೆ ಸಚಿವಾಲಯವು ತನ್ನ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದೆ.
ಇಂತಹ ಕಾನೂನುಬಾಹಿರ ಚಟುವಟಿಕೆಗಳು ಅತ್ಯುನ್ನತ ಮಟ್ಟದ ಅಶಿಸ್ತಿನ ಕ್ರಮವಾಗಿದ್ದು ಅಂತಹ ಉದ್ಯೋಗಾಕಾಂಕ್ಷಿಗಳು ರೈಲ್ವೆ ಅಥವಾ ಸರ್ಕಾರಿ ಉದ್ಯೋಗವನ್ನು ಮಾಡಲು ಸೂಕ್ತರಾದವರಲ್ಲ. ಇಂತಹ ಚಟುವಟಿಕೆಗಳ ವಿಡಿಯೋಗಳನ್ನು ವಿಶೇಷ ಏಜೆನ್ಸಿಯ ಸಹಾಯದಿಂದ ಪರಿಶೀಲಿಸಲಾಗುತ್ತದೆ. ಅಲ್ಲದೇ ಇಂತಹ ಚಟುವಟಿಕೆಗಳಲ್ಲಿ ಭಾಗಿಯಾದ ಅಭ್ಯರ್ಥಿಗಳು ಪೊಲೀಸ್ ಕ್ರಮಕ್ಕೆ ಜವಬ್ದಾರರಾಗುತ್ತಾರೆ. ಅಲ್ಲದೇ ರೈಲ್ವೆ ಉದ್ಯೋಗವನ್ನು ಪಡೆಯಲು ಜೀವಮಾನದ ನಿಷೇಧ ಹೇರಲಾಗುತ್ತದೆ ಎಂದು ಹೇಳಿದೆ.