ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯು 2021 ರಲ್ಲಿ ದಾಖಲೆಯ 162 ಮಿಲಿಯನ್ ಸಾಗಣೆಗಳನ್ನು ಸಾಧಿಸಿದೆ. ಈ ಮೂಲಕ 2020ಕ್ಕಿಂತ 12% ಬೆಳವಣಿಗೆ ಕಂಡಿದೆ ಎಂದು ವರದಿಯೊಂದರಲ್ಲಿ ಬಹಿರಂಗವಾಗಿದೆ. ಕೋವಿಡ್ ಎರಡನೇ ಅಲೆಯಿಂದಾಗಿ ಕಠಿಣ ಆರಂಭ ಕಂಡರು, ವರ್ಷದ ದ್ವಿತೀಯಾರ್ಧದಲ್ಲಿ ಬಲವಾಗಿ ಚೇತರಿಸಿಕೊಂಡಿದೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕ್ಯಾನಲಿಸ್ ವರದಿ ಮಾಡಿದೆ.
ವ್ಯಾಕ್ಸಿನೇಷನ್ನಿಂದ, ಮಾರುಕಟ್ಟೆ ಪುನರಾರಂಭವಾಗಿ ಸ್ಥಗಿತಗೊಂಡ ಬೇಡಿಕೆಗಳು ಮತ್ತೆ ಶುರುವಾದವು. ದ್ವಿತೀಯಾರ್ಧದಲ್ಲಿ, ಸ್ಮಾರ್ಟ್‌ಫೋನ್ ಸಾಗಣೆಗಳು ಪೂರ್ಣ ವರ್ಷದ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತು. ರಿಪ್ಲೇಸ್ ಮೆಂಟ್ ಮತ್ತು ಸ್ಮಾರ್ಟ್‌ಫೋನ್ ಖರೀದಿಸಲಿರುವ ಹೊಸ ಗ್ರಾಹಕರಿಂದ 2022ರಲ್ಲು ಕ್ಷೇತ್ರ ಬೆಳವಣಿಗೆಯ ನಿರೀಕ್ಷೆಯಿದೆ ಎಂದು ಮಾರುಕಟ್ಟೆ ವಿಶ್ಲೇಷಕ ಸನ್ಯಾಮ್ ಚೌರಾಸಿಯಾ ಕೆನಾಲಿಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. Q3 ನಲ್ಲಿ ಪುನರಾಗಮನದ ನಂತರ, ಸ್ಮಾರ್ಟ್‌ಫೋನ್ ಮಾರಾಟಗಾರರು 44.5 ಮಿಲಿಯನ್ ಸಾಧನಗಳನ್ನು ರವಾನಿಸಿದ್ದಾರೆ. Q4ನಲ್ಲಿ ಸವಾಲಿನ ಪೂರೈಕೆಯ ಹೊರತಾಗಿಯೂ 2% ಬೆಳವಣಿಗೆಯಾಗಿದೆ ಎಂದಿದ್ದಾರೆ.
9.3 ಮಿಲಿಯನ್ ಯುನಿಟ್‌ಗಳನ್ನು ಸಾಗಿಸುವ ಮೂಲಕ Xiaomi ಮುಂಚೂಣಿಯಲ್ಲಿದೆ, 21% ಮಾರುಕಟ್ಟೆ ಅದರ ಪಾಲಾಗಿದೆ. ಸ್ಯಾಮ್‌ಸಂಗ್ 8.5 ಮಿಲಿಯನ್ ಯುನಿಟ್‌ಗಳೊಂದಿಗೆ 19% ಪಾಲನ್ನು ಗಳಿಸಿ ಎರಡನೇ ಸ್ಥಾನದಲ್ಲಿದೆ. ಮೊದಲ ಬಾರಿಗೆ ರಿಯಲ್‌ಮಿ ಭಾರತದಲ್ಲಿ ಮೂರನೇ ಸ್ಥಾನಕ್ಕೆ ಏರಿದೆ, ವರ್ಷದಿಂದ ವರ್ಷಕ್ಕೆ 49% ಹೆಚ್ಚಳದೊಂದಿಗೆ 7.6 ಮಿಲಿಯನ್ ಸಾಗಣೆಯನ್ನು ತಲುಪಿದೆ. 5.6 ಮಿಲಿಯನ್ ವಿವೋ ಮತ್ತು 4.9 ಮಿಲಿಯನ್ ಯುನಿಟ್ ಮಾರಾಟ ಮಾಡಿರುವ ಒಪ್ಪೋ ನಾಲ್ಕು ಮತ್ತು ಐದನೇ ಸಾಲಿನಲ್ಲಿವೆ.