‘ಮೇರಾ ಮುಲ್ಕ್ ಮೇರಾ ದೇಶ್’ ಟ್ಯೂನ್ ಬಾರಿಸಿ ಗಣರಾಜ್ಯೋತ್ಸವಕ್ಕೆ ಸಂಗೀತ ನಮನ ಅರ್ಪಿಸಿದ ITBP ಯೋಧ 26-01-2022 7:37AM IST / No Comments / Posted In: Latest News, India, Live News ಗಣರಾಜ್ಯೋತ್ಸವದ ಸಂಭ್ರಮ ಆಚರಿಸಲು ಇಡೀ ದೇಶವೆ ಕಾದು ಕುಳಿತಿದೆ. ಇದರ ಜೊತೆಗೆ ನಾಡಿನ ವೀರರಾದ ಹೆಮ್ಮೆಯ ಸೈನಿಕರು ತಮ್ಮ ಪ್ರತಿಭೆಗಳಿಂದ ದೇಶದ ಗಣತಂತ್ರಕ್ಕೆ ನಮನ ಅರ್ಪಿಸುತ್ತಿದ್ದಾರೆ. ಇದೇ ಸಾಲಿಗೆ ಸೇರಿದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು (ITBP) ರಾಷ್ಟ್ರಕ್ಕೆ ಸಂಗೀತ ನಮನವನ್ನು ಅರ್ಪಿಸಿ ದೇಶದ ನಾಗರಿಕರಿಗೆ ನಮ್ಮ ಜವಾನರು ಪ್ರತಿಭಾವಂತರು ಎಂದು ಹೆಮ್ಮೆಪಡುವಂತೆ ಮಾಡಿದ್ದಾರೆ. ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ರು (ITBP) ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಸಂಗೀತ ನಮನದ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೊದಲ್ಲಿ, ಇಬ್ಬರು ಯೋಧರು ‘ಮೇರಾ ಮುಲ್ಕ್ ಮೇರಾ ದೇಶ್’ ಎಂಬ ದೇಶಭಕ್ತಿಯ ಗೀತೆಯ ವಾದ್ಯರೂಪವನ್ನು ನುಡಿಸುತ್ತಿದ್ದಾರೆ. ಕಾನ್‌ಸ್ಟೆಬಲ್ ರಾಹುಲ್ ಖೋಸ್ಲಾ ಮ್ಯಾಂಡೋಲಿನ್ ನುಡಿಸಿದರೆ, ಹೆಡ್ ಕಾನ್ಸ್‌ಟೇಬಲ್ ಪಾಸಾಂಗ್ ಶೆರ್ಪಾ ಕಝೂ ಮತ್ತು ಗಿಟಾರ್ ಎರಡನ್ನು ನುಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು ಸಾರ್ವಜನಿಕರು ಇವರಿಬ್ಬರ ಸಂಗೀತಜ್ಞಾನಕ್ಕೆ ಸಲ್ಯೂಟ್ ಹೊಡೆದಿದ್ದಾರೆ. मेरा मुल्क, मेरा देश, मेरा ये वतनशांति का, उन्नति का प्यार का चमन… Listen to the instrumental by ITBP jawans dedicated on Republic Day 2022 Constable Rahul Khosla on Mandolin Head Constable Passang Sherpa on Kazoo and Guitar pic.twitter.com/v5Y1YnaGOF — ITBP (@ITBP_official) January 25, 2022