alex Certify 2021ರಲ್ಲಿ‌ 1.27 ಕೋಟಿ ಪ್ರಕರಣಗಳನ್ನ ವಿಲೇವಾರಿ ಮಾಡಿದ ಲೋಕ ಅದಾಲತ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2021ರಲ್ಲಿ‌ 1.27 ಕೋಟಿ ಪ್ರಕರಣಗಳನ್ನ ವಿಲೇವಾರಿ ಮಾಡಿದ ಲೋಕ ಅದಾಲತ್

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (NALSA), ನಾಲ್ಕು ಲೋಕ ಅದಾಲತ್‌ಗಳು 2021 ರಲ್ಲಿ ದೇಶಾದ್ಯಂತ 1.27 ಕೋಟಿ ಪ್ರಕರಣಗಳನ್ನು ವಿಲೇವಾರಿ ಮಾಡಿದೆ ಎಂದು ಪ್ರಾಧಿಕಾರ ತಿಳಿಸಿದೆ. ಇದರಲ್ಲಿ ಸೆಟಲ್ಮೆಂಟ್ ಮೊತ್ತವು 25,000 ಕೋಟಿ ರೂಪಾಯಿಗಳನ್ನು ಒಳಗೊಂಡಿದೆ ಎಂದು NALSA ಹೇಳಿದೆ.

55.81 ಲಕ್ಷ ಬಾಕಿ ಇರುವ ಪ್ರಕರಣಗಳು ಮತ್ತು 72.02 ಲಕ್ಷ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ 2.99 ಲಕ್ಷ, 36.31 ಲಕ್ಷ ಕ್ರಿಮಿನಲ್ ಕಾಂಪೌಂಡಬಲ್ ಅಪರಾಧಗಳು, ಮೋಟಾರ್ ಅಪಘಾತ ಕ್ಲೈಮ್ ಟ್ರಿಬ್ಯೂನಲ್ (MACT) ಅಡಿಯಲ್ಲಿ 1.31 ಲಕ್ಷ, 2.99 ಲಕ್ಷ ಕಾರ್ಮಿಕ ವಿವಾದಗಳು, 78,481 ವೈವಾಹಿಕ ವಿವಾದಗಳು, 6.46 ಲಕ್ಷ ಬ್ಯಾಂಕ್ ವಸೂಲಾತಿ ಮತ್ತು 3.39 ಲಕ್ಷ ನಾಗರಿಕ ವಿಷಯಗಳ ಪ್ರಕರಣಗಳನ್ನ ಡಿಸ್ಪೋಸ್ ಮಾಡಲಾಗಿದೆ.

NALSAದ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಉದಯ್ ಲಲಿತ್ ಅವರ ಮಾರ್ಗದರ್ಶನದಲ್ಲಿ, ಫಲಿತಾಂಶ-ಆಧಾರಿತ ವಿಧಾನವನ್ನು ಅಳವಡಿಸಿಕೊಳ್ಳಲು ಮತ್ತು ರಾಷ್ಟ್ರೀಯ ಲೋಕ ಅದಾಲತ್‌ನ ಪ್ರಕರಣಗಳ ವಿಲೇವಾರಿ ಗರಿಷ್ಠಗೊಳಿಸಲು ಎಲ್ಲಾ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳೊಂದಿಗೆ (SLSAs) ಸಮಾಲೋಚನೆ ಮತ್ತು ಪರಿಶೀಲನಾ ಸಭೆಗಳನ್ನು ಪ್ರಾರಂಭಿಸಿದರು.

ಆನಂತರ ತಾಂತ್ರಿಕ ಪ್ರಗತಿಗಳು ಮತ್ತು ವರ್ಚುವಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಂಡು, ಕಾನೂನು ಸೇವೆಗಳ ಅಧಿಕಾರಿಗಳು ಪ್ರಕರಣ ದಾಖಲಿಸಿದವರ ಮನೆ ಬಾಗಿಲಿಗೆ ತಲುಪಲು ಪ್ರಾರಂಭಿಸಿದರು. ಪರಿಣಾಮವಾಗಿ ಅವರು ಪೂರ್ವಸಿದ್ಧತಾ ಸಭೆಗಳು ಮತ್ತು ಲೋಕ ಅದಾಲತ್ ಪ್ರಕ್ರಿಯೆಗಳಿಗೆ ತಮ್ಮ ಮನೆಗಳಿಂದ ಅಥವಾ ಕೆಲಸದ ಸ್ಥಳಗಳಿಂದ ಸೇರಲು ಸಾಧ್ಯವಾಯಿತು ಯಾವುದೇ ತೊಂದರೆಯಿಲ್ಲದೆ ಪ್ರಕರಣಗಳ ವಿಲೇವಾರಿಯಾಯಿತು ಎಂದು NALSA ತಿಳಿಸಿದೆ.

ಸಾಂಕ್ರಾಮಿಕದ ಸಮಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ, ಇದು ವ್ಯವಸ್ಥೆಯ ಮೇಲೆ ಹೆಚ್ಚುವರಿ ಹೊರೆಯಾಗಿದೆ. ಲೋಕ ಅದಾಲತ್‌ಗಳ ಮೂಲಕ ಹೆಚ್ಚಿನ ಸಂಖ್ಯೆಯ ವಿಲೇವಾರಿಯೊಂದಿಗೆ, ನ್ಯಾಯಾಂಗ ಆಡಳಿತದ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಕಾನೂನು ಸೇವೆಗಳ ಅಧಿಕಾರಿಗಳು ಗಣನೀಯ ಕೊಡುಗೆಯನ್ನು ನೀಡಿದ್ದಾರೆ ಎಂದು NALSA ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...