alex Certify 15 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ ಪಾಪಿ ತಂದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

15 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ ಪಾಪಿ ತಂದೆ

15 ವರ್ಷದ ತನ್ನ ಸ್ವಂತ ಮಗಳ ಮೇಲೆಯೇ ಅತ್ಯಾಚಾರವೆಸಗುತ್ತಿದ್ದ ಎಂಬ ಆರೋಪದಡಿಯಲ್ಲಿ 42 ವರ್ಷದ ವ್ಯಕ್ತಿಯೊಬ್ಬನನ್ನು ವಿಶಾಖಪಟ್ಟಣಂ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕಿ ಹೆಚ್ಚಾಗಿ ಫೋನ್‌ ಬಳಸುತ್ತಿದ್ದಳು ಎಂದು ಕೋಪಗೊಂಡ ತಂದೆ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆಯ ತಂದೆ ಅವಳ ಮೇಲೆ ಅನೇಕ ಬಾರಿ ಅತ್ಯಾಚಾರವೆಸಗಿದ್ದಾನೆ, ಆದರೂ ಸಂತ್ರಸ್ತೆ ಮೌನವಾಗಿದ್ದಳು. ಇತ್ತೀಚೆಗೆ ತನ್ನ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ತನ್ನ ಶಿಕ್ಷಕಿಗೆ ತಿಳಿಸಿದ್ದಳು. ಶಿಕ್ಷಕಿ ಆರೋಪಿ ತಂದೆಯನ್ನ ಶಾಲೆಗೆ ಕರೆಸಿದ್ದಾರೆ. ತನ್ನ ಕೃತ್ಯವನ್ನು ಒಪ್ಪಿಕೊಂಡ ಆತ ಕ್ಷಮೆ ಯಾಚಿಸಿದ್ದಾನೆ.‌ ಆದರೆ ಆತ ಮತ್ತೊಮ್ಮೆ ಹೀಗೆ ಮಾಡಬಾರದು ಎಂದು ಶನಿವಾರ ಸಂಜೆ ಶಿಕ್ಷಕಿ ಹಾಗೂ ಸಂತ್ರಸ್ತ ಬಾಲಕಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ಬಾಲಕಿಯನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.

ಬಾಲಕಿಯ ತಾಯಿ ಐದು ತಿಂಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರ ತಾಯಿ‌ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‌. ಅಷ್ಟೇ ಅಲ್ಲಾ ಆರೋಪಿಯ ಕಿಡ್ನಿ ವಿಫಲವಾಗಿ ಎರಡು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದ. ಆತನಿಗೆ ಅವರ ಪತ್ನಿಯೆ ಕಿಡ್ನಿ ದಾನ ಮಾಡಿದ್ದಾರೆ. ತಾಯಿ ಇಲ್ಲದ ಕಾರಣ ಮಗಳೆ ಆತನನ್ನ ನೋಡಿಕೊಳ್ಳುತ್ತಿದ್ದಳು. ಆದರೆ, ಆಕೆ ಮೊಬೈಲ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಳು ಎಂಬ ಕಾರಣಕ್ಕಾಗಿಯೆ ಸಿಟ್ಟಿಗೆದ್ದ ಆರೋಪಿ ಆಕೆಯ ಮೇಲೆ ಕಳೆದ ಕೆಲವು ತಿಂಗಳುಗಳಿಂದ ಅನೇಕ ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...